ಮನ್ಸೂರ್ ಖಾನ್‍ಗೆ ಬಿಬಿಎಂಪಿ ಆಸ್ತಿ ಅಕ್ರಮ ಮಾರಾಟ: 80 ಕೋಟಿ ಲೂಟಿ ಹೊಡೆದ ಸಚಿವ ಜಮೀರ್ ಅಹ್ಮದ್-ಎನ್ ಆರ್ ರಮೆಶ್

ಹೂಡಿಕೆದಾರರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿ ದೇಶ ಬಿಟ್ಟು ಹೋಗಿರುವ ಐಎಂಎ ಸಂಸ್ಥೆಯ ಮಾಲಿಕ ಮನ್ಸೂರ್ ಖಾನ್ ಗೆ ಸಚಿವ ಜಮೀರ್ ಅಹ್ಮದ್ ಖಾನ್...
ಮನ್ಸೂರ್ ಖಾನ್‍ಗೆ ಬಿಬಿಎಂಪಿ ಆಸ್ತಿ ಅಕ್ರಮ ಮಾರಾಟ: 80 ಕೋಟಿ  ಲೂಟಿ ಹೊಡೆದ ಸಚಿವ ಜಮೀರ್ ಅಹ್ಮದ್-ಎನ್ ಆರ್ ರಮೆಶ್
ಮನ್ಸೂರ್ ಖಾನ್‍ಗೆ ಬಿಬಿಎಂಪಿ ಆಸ್ತಿ ಅಕ್ರಮ ಮಾರಾಟ: 80 ಕೋಟಿ ಲೂಟಿ ಹೊಡೆದ ಸಚಿವ ಜಮೀರ್ ಅಹ್ಮದ್-ಎನ್ ಆರ್ ರಮೆಶ್
ಬೆಂಗಳೂರು: ಹೂಡಿಕೆದಾರರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿ ದೇಶ  ಬಿಟ್ಟು ಹೋಗಿರುವ ಐಎಂಎ ಸಂಸ್ಥೆಯ ಮಾಲಿಕ ಮನ್ಸೂರ್ ಖಾನ್ ಗೆ ಸಚಿವ ಜಮೀರ್ ಅಹ್ಮದ್ ಖಾನ್ ಬಿಬಿಎಂಪಿ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಎನ್ ಆರ್ ರಮೇಶ್ ಆರೋಪಿಸಿದ್ದಾರೆ. 
ಜೂ.29 ರಂದು ಪತ್ರಕರ್ತರನ್ನುದ್ದೇಶಿಸಿ ಮಾತನಾಡಿರುವ ಎನ್ ಆರ್ ರಮೇಶ್, ಸಚಿವಜ್ ಜಮೀರ್ ಅಹ್ಮದ್, ಪಾಲಿಕೆಯ ಭ್ರಷ್ಟ ಅಧಿಕಾರಿಗಳ ನೆರವಿನಿಂದ ಬಿಬಿಎಂಪಿ ಆಸ್ತಿಯನ್ನು ಐಎಂಎ ಸಂಸ್ಥೆಯ ಮನ್ಸೂರ್ ಖಾನ್ ಗೆ ಅಕ್ರಮವಾಗಿ ಮಾರಾಟ ಮಾಡಿ 80 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ. ಈ ಸಂಬಂಧ ಎಸಿಬಿಯಲ್ಲಿ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. 
ರಿಚ್ಮಂಡ್‍ಟೌನ್‍ನ ಸರ್ಪೆಂಟೈನ್ ಸ್ಟ್ರೀಟ್‍ನಲ್ಲಿರುವ ಬಿಬಿಎಂಪಿ ಆಸ್ತಿ 19 ವರ್ಷಗಳಿಂದ ನ್ಯಾಯಾಲಯದಲ್ಲಿ ವಿವಾದದಲ್ಲಿತ್ತು.  90 ಕೋಟಿಗೂ ಹೆಚ್ಚು ಮೌಲ್ಯದ ಈ ಆಸ್ತಿಯನ್ನು ಕೇವಲ 9.38 ಕೋಟಿಗೆ ಮಾರಾಟ ಮಾಡಿರುವ ಜಮೀರ್ ಅಹಮ್ಮದ್ 80 ಕೋಟಿ ರೂಪಾಯಿಯನ್ನು ಲೂಟಿ ಮಾಡಿದ್ದಾರೆ. 14984 ಚದರಡಿ ವಿಸ್ತೀರ್ಣದ 38 ಮತ್ತು 39 ನೇ ನಂಬರಿನಲ್ಲಿರುವ ಸ್ವತ್ತುಗಳನ್ನು ಮಾರಾಟ ಮಾಡಲಾಗಿದೆ. ಷಾ ನವಾಜ್ ಬೇಗಂ ಮತ್ತು ಅಗಜಾನ್ ಆಸ್ಕರ್ ಅಲಿ ಎಂಬುವರ ಮಧ್ಯೆ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಸತ್ತು ಈಗ ವಿವಾದದಲ್ಲಿದೆ.
ತಡೆಯಾಜ್ಞೆ ಇದ್ದರೂ ಸಹ 03-07-2009ರಲ್ಲಿ ಷಾ ನವಾಜ್ ಬೇಗಂ ಅಲಿಯಾಸ್ ಯಾಕುತ್ ಬೇಗಂ ಅವರಿಂದ ಶಿವಾಜಿನಗರ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಜಮ್ಮೀರ್ ಅಹಮ್ಮದ್ ತಮ್ಮ ಹೆಸರಿಗೆ ಆಸ್ತಿ ನೋಂದಣಿ ಮಾಡಿಕೊಂಡಿದ್ದಾರೆ.
ನಂತರ 13-04-2018ರಲ್ಲಿ ಈ ವಿವಾದಿತ ಸ್ವತ್ತಿನ ಖಾತೆಯನ್ನು ಪಾಲಿಕೆ ಅಧಿಕಾರಿಗಳು ಜಮೀರ್ ಅಹಮ್ಮದ್ ಖಾನ್ ಹೆಸರಿಗೆ ವರ್ಗಾವಣೆ ಮಾಡಿಕೊಟ್ಟಿದ್ದಾರೆ. ನೋಂದಣಿ ಪ್ರಕ್ರಿಯೆ ಸ್ವತ್ತಿನ ಕ್ರಯಪತ್ರದಲ್ಲಿ ಕೇವಲ 9.38 ಕೋಟಿ ಮಾತ್ರ ನಮೂದಾಗಿದೆ. ಉಳಿದ 80 ಕೋಟಿ ರೂ. ಕಪ್ಪು ಹಣವನ್ನು ಜಮೀರ್ ಅಹಮ್ಮದ್ ಖಾನ್ ಮಹಮ್ಮದ್ ಮನ್ಸೂರ್ ಖಾನ್ ಖಜಾನೆಯಿಂದ ಲಪಟಾಯಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com