ಹೆಚ್ಚಾಗಿದೆ ಬಿಸಿಲಿನ ದಾಹ; ಹಣ್ಣು, ಎಳನೀರು ಮಾರಾಟಗಾರರಿಗೆ ಬಂಪರ್

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲು ಕಾವು ಏರುತ್ತಿದೆ. ಫೆಬ್ರವರಿ ತಿಂಗಳಿನಲ್ಲಿಯೇ 35 ಡಿಗ್ರಿ ...

Published: 02nd March 2019 12:00 PM  |   Last Updated: 02nd March 2019 12:38 PM   |  A+A-


Water melon buisness

ಕಲ್ಲಂಗಡಿ ವ್ಯಾಪಾರ

Posted By : SUD SUD
Source : The New Indian Express
ಬೆಂಗಳೂರು; ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲು ಕಾವು ಏರುತ್ತಿದೆ. ಫೆಬ್ರವರಿ ತಿಂಗಳಿನಲ್ಲಿಯೇ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಕಲ್ಲಂಗಡಿ ಹಣ್ಣು, ಎಳನೀರು ವ್ಯಾಪಾರ ಬಿಸಿಲಿಗೆ ಜೋರಾಗಿಯೇ ಸಾಗುತ್ತಿದೆ.

ಸಾಮಾನ್ಯವಾಗಿ ಬೇಸಿಗೆ ಕಾಲ ಕಾಲಿಡುವುದು ಶಿವರಾತ್ರಿ ಮುಗಿದ ಮೇಲೆ. ಮಾರ್ಚ್ 4ರಂದು ಶಿವರಾತ್ರಿಯಿದ್ದು ಅದಕ್ಕೆ ಮೊದಲೇ ಫೆಬ್ರವರಿ ಆರಂಭದಲ್ಲಿಯೇ ಬಿಸಿಲು ಕಾಲಿಟ್ಟಿದ್ದರಿಂದ ಹಣ್ಣು, ಎಳನೀರು ಮಾರಾಟದಲ್ಲಿ ಶೇಕಡಾ 75ರಷ್ಟು ಏರಿಕೆಯಾಗಿತ್ತು. ಮಾರುಕಟ್ಟೆಯಲ್ಲಿ ಒಂದು ಎಳನೀರಿಗೆ 20 ರೂಪಾಯಿಯಿಂದ 35 ರೂಪಾಯಿಗಳವರೆಗೆ ಇದೆ. ಕಲ್ಲಂಗಡಿ ಬೆಲೆ ಕೆಜಿಗೆ 20 ರೂಪಾಯಿ ಇದೆ. ಮುಂದಿನ ತಿಂಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ನಾನೀಗ ಎಳನೀರನ್ನು ಕೆಜಿಗೆ 30ರೂಪಾಯಿಗೆ ಮಾರಾಟ ಮಾಡುತ್ತಿದ್ದು ಮುಂದಿನ ತಿಂಗಳು ಅದು 35ರಿಂದ 40 ರೂಪಾಯಿಯಾಗುವ ಸಾಧ್ಯತೆಯಿದೆ. ಎಳನೀರನ್ನು ವಿವಿಧ ಜಿಲ್ಲೆಗಳಿಂದ ತರಿಸಲಾಗುತ್ತದೆ. ಮಂಡ್ಯ, ಮದ್ದೂರು, ದಾವಣಗೆರೆಗಳಿಂದ ಸಗಟು ದರದಲ್ಲಿ 12 ರೂಪಾಯಿಗಳಿಂದ 24 ರೂಪಾಯಿಗಳವರೆಗೆ ತರಿಸಲಾಗುತ್ತದೆ. ಪ್ರತಿದಿನ 150ರಿಂದ 200 ಎಳನೀರಿನವರೆಗೆ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಸಿಬಿಐ ವ್ಯಾಪಾರಿಗಳಾದ  ಆರ್ಮುಗಂ ಮತ್ತು ಚನ್ನೇ ಗೌಡ.

ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಎಳನೀರು ಕುಡಿಯಲು ಹೆಚ್ಚು ರುಚಿಯಾಗಿರುವುದರಿಂದ ಗ್ರಾಹಕರು ಮದ್ದೂರು ಎಳನೀರನ್ನು ಹೆಚ್ಚು ಇಷ್ಟಪಡುತ್ತಾರೆ. ನಾನು ವಾರಕ್ಕೆ ಸುಮಾರು ಸಾವಿರ ಎಳನೀರನ್ನು ಖರೀದಿಸುತ್ತೇನೆ, ರೈತರಿಂದ ಮಧ್ಯವರ್ತಿಗಳು ಶೇಕಡಾ 3ರಷ್ಟು ಹೆಚ್ಚಿನ ದರದಲ್ಲಿ ಖರೀದಿಸುತ್ತಾರೆ. ನಮ್ಮಲ್ಲಿಗೆ ಬಂದು ನಾವು ಮಾರಾಟ ಮಾಡುವಾಗ ಇನ್ನಷ್ಟು ಹೆಚ್ಚಾಗುತ್ತದೆ, ಹೀಗಾಗಿ ಬೇಸಿಗೆಯಲ್ಲಿ ಎಳನೀರು ಬೆಲೆ ಜಾಸ್ತಿಯಾಗುತ್ತದೆ ಎನ್ನುತ್ತಾರೆ ಜೆ ಪಿ ನಗರದ ಮತ್ತೊಬ್ಬ ವ್ಯಾಪಾರಿ ವಿನೋದ್ ಕುಮಾರ್.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp