ಬಳ್ಳಾರಿ: ಯುವ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನೀಡುತ್ತಿರುವ ನಿವೃತ್ತ ಸೇನಾಧಿಕಾರಿ

ಒಮ್ಮೆ ಸೈನಿಕನಾದರೇ ಯಾವಾಗಲೂ ಸೈನಿಕನೇ ಎಂಬ ಗಾದೆ ಮಾತಿನಂತೆ ಸೈನಿಕನಿಗೆ ಯಾವಾಗಲೂ ದೇಶವೇ ಮೊದಲು, ನಂತರ ಸ್ನೇಹಿತರು ಮತ್ತು ಕುಟುಂಬ ...

Published: 02nd March 2019 12:00 PM  |   Last Updated: 02nd March 2019 01:26 AM   |  A+A-


This retired army officer continues to serve country

ತರಬೇತಿ ನೀಡುತ್ತಿರುವ ನಿವತ್ತ ಸೇನಾಧಿಕಾರಿ

Posted By : SD
Source : The New Indian Express
ಬಳ್ಳಾರಿ:  ಒಮ್ಮೆ ಸೈನಿಕನಾದರೇ  ಯಾವಾಗಲೂ ಸೈನಿಕನೇ ಎಂಬ ಗಾದೆ ಮಾತಿನಂತೆ ಸೈನಿಕನಿಗೆ ಯಾವಾಗಲೂ ದೇಶವೇ ಮೊದಲು, ನಂತರ ಸ್ನೇಹಿತರು ಮತ್ತು ಕುಟುಂಬ ಬರುತ್ತದೆ.

ಬಳ್ಳಾರಿಯ ಹೂವಿನ ಹಡಗಲಿ ತಾಲೂಕಿನ ಮೊಹಮದ್ ರಫಿ, 2002 ರಲ್ಲಿ  ಭಾರತೀಯ ಸೇನೆಗೆ ದಾಖಲಾದರು, ಹವಾಲ್ದಾರ್ ಆಗಿ ಕೆಲಸ ಮಾಡಿದ್ದರು,  16 ವರ್ಷದ ಸೇವಾವಧಿ ನಂತರ ತಮ್ಮ ಸ್ವಂತ ಸ್ಥಳಕ್ಕೆ ಆಗಮಿಸಿ, ವಿಶ್ರಾಂತಿ ಪಡೆಯಲಿಲ್ಲ, ಭಾರತೀಯ ಸೇನೆ ಸೇರಲು ಬಯಸುವ ಯುವಕರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.

ತಾವು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಇತಿಹಾಸದಲ್ಲಿ ಓದಿದ  ಹಲವು ವಿಷಯಗಳು ತಲೆಯಲ್ಲಿ ತುಂಬಿದ್ದವು, ಹೀಗಾಗಿ ನನಗೆ ಸೇನೆಗೆ ಸೇರಲು ಸ್ಪೂರ್ತಿಯಾಯಿತು, ಶಾಲೆಯಲ್ಲಿ ಶಿಕ್ಷಕರು ಹೇಳುತ್ತಿದ್ದ ಕೆಚ್ಚೆದೆಯ ಸೈನಿಕರ ಬಗ್ಗೆ  ಕಥೆಗಳು ನನಗೆ ಸ್ಪೂರ್ತಿಯಾಗಿದೆ ಎಂದು ಹೇಳಿದ್ದಾರೆ.

16 ವರ್ಷಗಳ ಸೇವೆಯಲ್ಲಿ ಹಲವು ಕ್ಲಿಷ್ಟಕರ ಗಡಿಯಲ್ಲಿ ಕೆಲಸ ಮಾಡಿದ್ದೇನೆ, ಜಮ್ಮು ಕಾಶ್ಮೀರದಲ್ಲಿ ಆರು ವರ್ಷ ಕೆಲಸ ಮಾಡಿದ್ದೇನೆ, ಪ್ರತಿ ಸಲ ಮನೆಗೆ ಬಂದು ವಾಪಸ್ ಹೋಗುವಾಗ, ಮನೆಯವರೆಲ್ಲಾ ನೋವಿನಲ್ಲಿ  ಕಳುಹಿಸಿಕೊಡುತ್ತಿದ್ದರು, 

ನಾನು ಸೇನೆಗೆ ಸೇರಿದಾಗ ನನಗೆ ಯಾರು ಮಾರ್ಗದರ್ಶನ ನೀಡುವವರು ಯಾರು ಇಲ್ಲ, ಸೇನೆ ಸೇರಲು ಬೇಕಾದ ಅಹ್ರತೆಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ನಂತರ ನಾನು ಕರಾಟೆಗೆ ಸೇರಿದೆ, ಹಲವು ಕಿಮೀ ಗಳ ವರೆಗೆ ಓಡುತ್ತಿದ್ದೆ, ಸೇನೆ ಸೇರಲು ಬಯಸುವ  ಯುವಕರಿಗೆ, ಈ ರೀತಿಯ ತೊಂದಕೆ ಆಗಬಾರದೆಂದು ಸೇನೆ ಸೇರುವ ಯುವಕರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.

ಬೆಳಗ್ಗೆ 5.30 ರಿಂದ 7 ಗಂಟೆವರೆಗೂ  ತರಬೇತಿ ನಡೆಯುತ್ತಿದೆ, ಬೆಳಗ್ಗಿನ ಹೊತ್ತು, ಫುಟ್ ಬಾಲ್, ವಾಲಿಬಾಲ್, ಮತ್ತಿತರ ಆಟಗಳನ್ನು ಆಡಿಸಲಾಗುತ್ತದೆ. ಜ್ವಲಂತ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ, ಭೌಗೋಳಿಕ ಹಿನ್ನೆಲೆ ಭಾರತ ಮತ್ತು ಪ್ರಪಂಚದ  ಬಗ್ಗೆ ಮಾಹಿತಿ ನಡಿ, ಭಾಷಣಗಳನ್ನು ನೀಡಲಾಗುತ್ತದೆ.

ದೇಶದ ವಿವಿದೆಡೆ ಈ ಎಲ್ಲಾ ರೀತಿಯ ತರಬೇತಿ ನೀಡಲು ಸುಮಾರು 30 ಸಾವಿರದಿಂದ 40 ಸಾವಿರ ರು ವರೆಗೆ ಚಾರ್ಜ್ ಮಾಡಲಾಗುತ್ತದೆ,  ನಾನು ಯಾವುದೇ ರೀತಿಯ ಚಾರ್ಜ್ ಮಾಡಲಾಗುತ್ತದೆ, ದೇಶಕ್ಕಾಗಿ ನಾನು ಉಚಿತ ಸೇವೆ ಮಾಡಲು ಬಯಸಿದ್ದೇನೆ, 15ರಿಂದ 23 ವರ್ಷ ವಯಸ್ಸಿನ ಯುವಕರಿಗೆ  ತರಬೇತಿ ನೀಡುತ್ತಿದ್ದಾರೆ, ಇದರಲ್ಲಿ ಈಗಾಗಲೇ ಕೆಲವರು ಪರೀಕ್ಷೆ  ಬರೆದಿದ್ದಾರೆ, 

ಕರ್ನಾಟಕದಾದ್ಯಂತ ರಫಿ ತರಬೇತಿ ಬಗ್ಗೆ  ತಿಳಿದಿದೆ, ಮುಂದಿನ ವಾರ ಮಂಡ್ಯ ಮತ್ತು ಮೈಸೂರಿನಿಂದ  ತರಬೇತಿಗಾಗಿ ತಂಡವೊಂದು ಬರುತ್ತಿದೆ, ನನ್ನ ಕೆಲಸವನ್ನು ಗುರುತಿಸಿ, ಗ್ರಾಮಸ್ಥರೇ ಇಲ್ಲಿಗೆ ಬರುವವರಿಗೆ  ಊಟ ಹಾಗೂ ವಸತಿ ವ್ಯವಸ್ಥೆ ಮಾಡುತ್ತಾರೆ ಎಂದು ರಫಿ ಹೇಳಿದ್ದಾರೆ.

Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp