'ಐ ಸ್ಟ್ಯಾಂಡ್ ವಿತ್ ಪಾಕಿಸ್ತಾನ್ ಆರ್ಮಿ' ಫೇಸ್ ಬುಕ್ ಪೋಸ್ಟ್: ಪ್ರತ್ಯೇಕ ಪ್ರಕರಣಗಳಲ್ಲಿ 3 ಯುವಕರ ಬಂಧನ

’ಐ ಸ್ಟ್ಯಾಂಡ್ ವಿತ್ ಪಾಕಿಸ್ತಾನ್’ ಎಂದು ಪಾಕಿಸ್ತಾನದ ಪರವಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಮೂವರು ಯುವಕರನ್ನು ಗದಗ, ಯಾದಗಿರಿ ಜಿಲ್ಲಾ ಪೋಲೀಸರು ಬಂಧಿಸಿದ್ದಾರೆ.

Published: 03rd March 2019 12:00 PM  |   Last Updated: 03rd March 2019 07:56 AM   |  A+A-


3 youths arrested  at Karnataka who are put a post as I stand with Pak

ಸಂಗ್ರಹ ಚಿತ್ರ

Posted By : RHN RHN
Source : Online Desk
ಗದಗ/ಯಾದಗಿರಿ: ’ಐ ಸ್ಟ್ಯಾಂಡ್ ವಿತ್ ಪಾಕಿಸ್ತಾನ್’ ಎಂದು ಪಾಕಿಸ್ತಾನದ ಪರವಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಮೂವರು ಯುವಕರನ್ನು ಗದಗ, ಯಾದಗಿರಿ ಜಿಲ್ಲಾ ಪೋಲೀಸರು ಬಂಧಿಸಿದ್ದಾರೆ.

ಗದಗ ಜಿಲ್ಲೆ ಮುಳಗುಂದ ಪಟ್ಟಣದ ಭಾಷೆಸಾಬ್ ಕಲ್ಕುಟ್ರ ಹಾಗೂ ಸಮೀರ್ ಸಯೀದ್ ಬಡೆ ಎನ್ನುವ ಇಬ್ಬರು ಯುವಕರನ್ನು ಮುಳಗುಂದ ಪೋಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ ಬುರಾನ್ ಬಡಿಗೇರ ಎಂಬಾತನನ್ನು ಯಾದಗಿರಿ ಜಿಲ್ಲಾ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಮುಳಗುಂದ ಪಟ್ಟಣದ ನಿವಾಸಿಗಳಾದ ಇಬ್ಬರೂ ಯುವಕರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ದೇಶದ್ರೋಹದ ಪೋಸ್ಟ್ ಹಾಕಿಕೊಂಡಿದ್ದು ಎರಡು ದಿನಗಳ ಹಿಂದೆ ನಗರದ ಕೆಲ ಯುವಕರು ಈ ಸಂಬಂಧ ಪೋಲೀಸ್ ಠಾನೆಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ದೇಶದ್ರೋಹವೆಸಗಿದವರನ್ನು ಹಿಡಿದು ಕ್ರಮ ಜರುಗಿಸಿ ಎಂದು  ಪೊಲೀಸ್ ಠಾಣೆ ಎದುರು ಪ್ರತಿಭಟನೆ ಸಹ ನಡೆಸಿದ್ದಾರೆ. ಇದರಿಂದ ಪ್ರಕರಣ ಗಂಭೀರತೆ ಅರಿತ ಪೋಲೀಸರು ಇಂದು ಇಬ್ಬರೂ ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಯಾದಗಿರಿ ಜಿಲ್ಲೆ  ಶಹಾಪುರ ತಾಲೂಕಿನ ಯುವಕ ಬುರಾನ್ ಸಹ ಫೇಸ್ ಬುಕ್ ನಲ್ಲಿ ಇಂತಹದೇ ದೇಶ ವಿರೋಧಿ ಪೊಸ್ಟ್ ಹಾಕಿಕೊಂಡಿದ್ದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.ಆ ಪೋಸ್ಟ್ ವೈರಲ್ ಆಗಿದ್ದು  ಶಹಾಪುರದ ಭೀಮರಾಯನಗುಡಿ ಪೊಲೀಸರು ದೇಶದ್ರೋಹದ ಪ್ರಕರಣದಡಿಯಲ್ಲಿ ಯುವಕನನ್ನು ಬಂಧಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp