ವಿಧಾನಸೌಧದಲ್ಲಿ ಚಿತ್ರೀಕರಣಕ್ಕೆ ಅವಕಾಶ ಕೊಡಿಸೋದಾಗಿ ವಂಚನೆ: ಒಂದೇ ಕುಟುಂಬದ ನಾಲ್ವರ ವಿರುದ್ಧ ದೂರು

ವಿಧಾನಸೌಧದ ಒಳಗೆ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿಕೊಡುವುದಾಗಿ ನಂಬಿಸಿ ವಂಚಿಸಿರುವ ಒಂದೇ ಕುಟುಂಬದ ನಾಲ್ವರ ವಿರುದ್ಧ ಬೆಂಗಳೂರು ಬನಶಂಕರಿ ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಿಧಾನಸೌಧದ ಒಳಗೆ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿಕೊಡುವುದಾಗಿ ನಂಬಿಸಿ ವಂಚಿಸಿರುವ ಒಂದೇ ಕುಟುಂಬದ ನಾಲ್ವರ ವಿರುದ್ಧ ಬೆಂಗಳೂರು ಬನಶಂಕರಿ ಪೋಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಪ್ರಧಾನ ಆರೋಪಿ ಅನುರಾಗ್ (32) ಎಂದು ಗುರುತಿಸಲಾಗಿದ್ದು ಈತ ಕೆಆರ್ ರಸ್ತೆಯಲ್ಲಿ ಫೋಟೋ ಸ್ಟುಡಿಯೋ ಒಂದನ್ನು ನಡೆಸುತ್ತಿದ್ದಾನೆ.ಅವರ ತಂದೆ ರಾಜೇಶ್ (55) ವಿಧಾನಸೌಧದಲ್ಲಿ ಕಛೇರಿ ಹೊಂದಿದ್ದಾರೆ, ಅದರಿಂದ ಸುಲಭವಾಗಿ ವಿಧಾನಸೌಧದೊಳಗೆ ಚಿತ್ರೀಕರಿಸಲು ಅನುಮತಿ ಸಿಗಲಿದೆ ಎಂದು ಈತ ಮುಗ್ದ ಜನರನ್ನು ನಂಬಿಸಿ ಲಕ್ಷಗಟ್ಟಲೆ ಹಣ ಪಡೆಯುತ್ತಿದ್ದ. ಡಾಕ್ಯುಮೆಂಟರಿ ತಯಾರಿಸುವ ಚಿತ್ರ ನಿರ್ಮಾಪಕರು ಇವನ ಮುಖ್ಯ ಟಾರ್ಗೆಟ್ ಆಗಿರುತ್ತಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಚಿತ್ರ ನಿರ್ಮಾಪಕ ಜೋಡಿಯಾಗಿದ್ದ ಸುನೀತಾ ಮತ್ತು ಭಾಸ್ಕರ್, ಅನುರಾಗ್ ವಿರುದ್ಧ ಪೋಲೀಸರಿಗೆ ದೂರಿತ್ತಿದ್ದರು. ಅವರು ಅದಾಗಲೇ ಅನುರಾಗ್ ಗೆ ಎಂಟು ಲಕ್ಷ ರು. ಪಾವತಿಸಿದ್ದು ಆತ ಅವರಲ್ಲಿ ತಾನೊಬ್ಬ ಸ್ಮಾರ್ಟ್ ಸಿಟಿ ಪ್ರಾಜಕ್ಟ್ ನ ಸಿಇಒ ಎಂದು ಪರಿಚಯಿಸಿಕೊಂಡಿದ್ದ.  ಅಲ್ಲದೆ ಅವರಿಗೆ ನಂಬಿಕೆ ಮೂಡುವಂತೆ ಮಾಡಲು ಆರೋಪಿ ತಾನಿದ್ದ ಮನೆಗೆ ಭೇಟಿ ಕೊಡುವಂತೆ ಸಹ ಸೂಚಿಸಿದ್ದ.  ಹಾಗೆ ಸುನೀತಾ, ಭಸ್ಕರ್ ಅವರಿಂದ ಎಂಟು ಲಕ್ಷ ಪಡೆದ ಬಳಿಕ ಅನುರಾಗ್ ಅವರನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ. ಅಲ್ಲದೆ ಅವರಿಗೆ ತಮ್ಮ ಯೋಜನೆ ಸಂಪೂರ್ಣವಾಗುವ ಬಗ್ಗೆ ಅನುಮಾನ ಮೂಡಿತ್ತು.
"ನಾವು ಈಗ  ಸತ್ಯದ ಪರಿಶೀಲನೆಯಲ್ಲಿ ತೊಡಗಿದ್ದೇವೆ,ನಾವೀಗ ಅನುರಾಗ್ ನಿಂದ ಹೇಳಿಕೆ ಪಡೆಯಬೇಕಾಗಿದ್ದು ಆ ಹೇಳಿಕೆಯ ಆಧಾರದಲ್ಲಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸುತ್ತೇವೆ. ಇದುವರೆಗೆ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ" ಪೋಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com