ಇಂಗ್ಲೀಷ್ ಅಥವಾ ಕನ್ನಡ, ಶೈಕ್ಷಣಿಕ ಮಾಧ್ಯಮ ಆಯ್ಕೆ ಪೋಷಕರಿಗೆ ಬಿಟ್ಟದ್ದು: ಕುಮಾರಸ್ವಾಮಿ

ಮುಂದಿನ ಶೈಕ್ಷಣಿಕ ವರ್ಷದಿಂದ 1,000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮಕ್ಕಳು ಇಂಗ್ಲೀಷ್ ಅಥವಾ ಕನ್ನಡ, ಯಾವ ಮಾದ್ಯಮದಲ್ಲಿ....
ಚ್. ಡಿ. ಕುಮಾರಸ್ವಾಮಿ
ಚ್. ಡಿ. ಕುಮಾರಸ್ವಾಮಿ
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ 1,000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮಕ್ಕಳು ಇಂಗ್ಲೀಷ್ ಅಥವಾ ಕನ್ನಡ, ಯಾವ ಮಾದ್ಯಮದಲ್ಲಿ ಕಲಿಯಬೇಕೆಂದು ಪೋಷಕರು ನಿರ್ಧರಿಸಲಿದ್ದಾರೆ ಎಂದು  ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ವಿದಾನ ಸೌಧದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಕುಮಾರಸ್ವಾಮಿ ಒಂದೇ ಶಾಲೆಯಲ್ಲಿ ಬೇರೆ ಬೇರೆ ಮಾದ್ಯಮಗಳಿರಲಿದೆ. ಕನ್ನಡ ಭಾಷೆ ಹೊರತು ಇತರೆ ವಿಷಯಗಳನ್ನು ಇಂಗ್ಲೀಷ್ ನಲ್ಲಿ ಕಲಿಸಲಾಗುತ್ತದೆ. ಇನ್ನು ಮಕ್ಕಳು ಯಾವ ಮಾದ್ಯಮದಲ್ಲಿ ಕಲಿಯಬೇಕೆನ್ನುವುದನ್ನು ಪೋಷಕರ ಆಯ್ಕೆ ಆಗಿರಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕಳಪೆ ಫಲಿತಾಂಶ ಬರುತ್ತಿರುವ ಸಂಬಂಧ  ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಸಹ ದಿನದಿನಕ್ಕೆ ಕ್ಷೀಣಿಸುತ್ತಿದೆ. ಈ ಹಿಂದೆ ಕನ್ನಡ ಶಾಲೆಗಳಲ್ಲಿ 200 ರಷ್ಟಿದ್ದ ಮಕ್ಕಳ ಸಂಖ್ಯೆ ಈಗ ಕೇವಲ 14 ಕ್ಕೆ ಇಳಿದಿದೆ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
"ಈ ಶಾಲೆಗಳಲ್ಲಿ ಮೊದಲು ಅಧ್ಯಯನ ಮಾಡಿದ ಮಕ್ಕಳ ಪಾಲಕರು ಖಾಸಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲು ಮಾಡಲು ಸುಮಾರು 30,000 ಪಾವತಿಸುತ್ತಿದ್ದಾರೆ. ಇಂತಹಾ ಪೋಷಕರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾದ್ಯಮ ಪ್ರಾರಂಭಕ್ಕೆ ಒತ್ತಾಯಿಸುತ್ತಿದ್ದಾರೆ." ಅವರು ಹೇಳಿದ್ದಾರೆ. ಕಳೆದ 10 ವರ್ಷಗಳಲ್ಲಿ ಖಾಸಗಿ ಶಾಲೆಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಿದೆ ಎಂದು ಕೆ. ಮರಳುಸಿದ್ದಪ್ಪ ಸೇರಿ  ಇತರ ತಜ್ಞರು ಹೇಳಿದ್ದಾರೆ.
ಹೀಗೆ ಮುಂದುವರಿದರೆ ಅನೇಕ ಸರ್ಕಾರಿ ಶಾಲೆಗಳು ಶೀಘ್ರವಾಗಿ ಮುಚ್ಚುವ ಸಾಧ್ಯತೆ ಇದೆ.ಎಂದು ತಜ್ಞರು ಭಾವಿಸುತ್ತಾರೆ. ರಾಜ್ಯದಲ್ಲಿ  ಸರ್ಕಾರಿ ಶಾಲೆಗಳ ಮಾನದಂಡಗಳನ್ನು ಸುಧಾರಿಸಲು  ಸರ್ಕಾರ ಪ್ರಯತ್ನಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com