ಮೈಸೂರು-ಕಾಚಿಗೂಡ ಎಕ್ಸ್ ಪ್ರೆಸ್‍ ರೈಲಿಗೆ ಸಂಸದ ಪ್ರತಾಪ್ ಸಿಂಹ ಹಸಿರು ನಿಶಾನೆ

ಕಾಚಿಗೂಡ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಬೆಂಗಳೂರು ಎಕ್ಸ್ ಪ್ರೆಸ್‍ ರೈಲು ಸೇವೆಯನ್ನು ನೈರುತ್ಯ ರೈಲ್ವೆ ಮಂಗಳವಾರದಿಂದ ಮೈಸೂರಿಗೆ ವಿಸ್ತರಿಸಿದೆ.
ಸಂಸದ ಪ್ರತಾಪ್ ಸಿಂಹರಿಂದ ರೈಲಿಗೆ ಹಸಿರು ನಿಶಾನೆ
ಸಂಸದ ಪ್ರತಾಪ್ ಸಿಂಹರಿಂದ ರೈಲಿಗೆ ಹಸಿರು ನಿಶಾನೆ

ಮೈಸೂರು: ಕಾಚಿಗೂಡ- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಬೆಂಗಳೂರು ಎಕ್ಸ್ ಪ್ರೆಸ್‍ ರೈಲು ಸೇವೆಯನ್ನು ನೈರುತ್ಯ ರೈಲ್ವೆ ಮಂಗಳವಾರದಿಂದ  ಮೈಸೂರಿಗೆ ವಿಸ್ತರಿಸಿದೆ.

ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಂಗಳವಾರ ಮೈಸೂರು-ಕೆಎಸ್ಆರ್ ಬೆಂಗಳೂರು-ಕಾಚಿಗೂಡ (ಹೈದರಾಬಾದ್) ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿದರು.

ಈ  ಸಂದರ್ಭದಲ್ಲಿ ಮಾತನಾಡಿದ ಅವರು, ಹೈದರಾಬಾದ್‍ಗೆ ಪ್ರಯಾಣಿಸುವ ಸ್ಥಳೀಯ ವ್ಯಾಪಾರಿಗಳು, ಅರಮನೆ ನಗರಿ ಮತ್ತು ಹೈದರಾಬಾದ್‍ಗೆ ಭೇಟಿ ನೀಡುವ ಪ್ರವಾಸಿಗರ ಬಹುದಿನಗಳ ಬೇಡಿಕೆ ಈ  ಸೇವೆಯಿಂದ ಈಡೇರಿದೆ ಎಂದು ಹೇಳಿದ್ದಾರೆ.

ಈ ರೈಲಿನಲ್ಲಿ ಒಟ್ಟು 24 ಬೋಗಿಗಳಿದ್ದು,  ಮೊದಲ ದರ್ಜೆಯ ಒಂದು ಎಸಿ ಬೋಗಿ, ಎರಡನೇ ದರ್ಜೆಯ ಎರಡು ಎಸಿ ಬೋಗಿಗಳು, ಮೂರು ಸ್ತರದ  ನಾಲ್ಕು ಎಸಿ ಬೋಗಿಗಳು, 12 ಸ್ಲೀಪರ್ ಬೋಗಿಗಳು, ಮೂರು ಸಾಮಾನ್ಯ ಬೋಗಿಗಳನ್ನು  ಒಳಗೊಂಡಿರುತ್ತದೆ.

ಈ ರೈಲು ಕೆಎಸ್ಆರ್ ಬೆಂಗಳೂರು-ಮೈಸೂರು ನಡುವೆ ಎಕ್ಸ್ ಪ್ರೆಸ್‍  ಆಗಿ ಸಂಚರಿಸಲಿದ್ದು, ಕೆಎಸ್ಆರ್ ಬೆಂಗಳೂರು-ಕಾಚಿಗೂಡ ನಡುವೆ ಸೂಪರ್ ಫಾಸ್ಟ್ ಎಕ್ಸ್  ಪ್ರೆಸ್‍ ಆಗಿ ಸಂಚರಿಸಲಿದೆ.
ಮೈಸೂರಿನಿಂದ ಮಧ್ಯಾಹ್ನ 2.45 ಕ್ಕೆ ಹೊರಡಲಿರುವ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣವನ್ನು ಸಂಜೆ 6.20 ಕ್ಕೆ ತಲುಪಲಿದೆ. ಅದೇ ರೀತಿ  ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಬೆಳಿಗ್ಗೆ 6.40ಕ್ಕೆ ಹೊರಡಲಿರುವ ರೈಲು ಮೈಸೂರು ನಿಲ್ದಾಣವನ್ನು 9.40ಕ್ಕೆ ತಲುಪಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com