ಉತ್ತರ ಕನ್ನಡ ಕರಾವಳಿಯಲ್ಲಿ ಮೀನುಗಳ ಬರ, ಮೀನುಗಾರರು ಕಂಗಾಲು

ಕಳೆದ ಎರಡು ವಾರಗಳಿಂದ ಅರಬ್ಬಿ ಸಮುದ್ರದಲ್ಲಿ ಉತ್ತಮ ಮೀನುಗಳು ಸಿಗದ ಕಾರಣ ಉತ್ತರ ಕನ್ನಡ ಜಿಲ್ಲಾ ಮೀನುಗಾರರು ಕಂಗಾಲಾಗಿದ್ದಾರೆ.
ಕಾರವಾರದಲ್ಲಿ ಲಂಗರು ಹಾಕಿದ ಮೀನುಗಾರಿಕೆ  ದೋಣಿಗಳು
ಕಾರವಾರದಲ್ಲಿ ಲಂಗರು ಹಾಕಿದ ಮೀನುಗಾರಿಕೆ ದೋಣಿಗಳು
ಕಾರವಾರ: ಕಳೆದ ಎರಡು ವಾರಗಳಿಂದ ಅರಬ್ಬಿ ಸಮುದ್ರದಲ್ಲಿ ಉತ್ತಮ ಮೀನುಗಳು ಸಿಗದ ಕಾರಣ ಉತ್ತರ ಕನ್ನಡ ಜಿಲ್ಲಾ ಮೀನುಗಾರರು ಕಂಗಾಲಾಗಿದ್ದಾರೆ.ಸುಮಾರು 90 ಶೇಕಡ ಸಮುದ್ರ ಮೀನುಗಾರಿಕೆ ದೋಣಿಗಳು ಮೀನುಗಾರಿಕೆ ನಿಲ್ಲಿಸಿ ಕಾರವಾರ ಬಂದರಿನಲ್ಲಿ ಲಂಗರು ಹಾಕಿವೆ.
ಕಳೆದ ವರ್ಷದಂತೆ ಮೀನುಗಾರರು ಈ ವರ್ಷ ಸಹ ಫೆಬ್ರವರಿಯಲ್ಲಿ ಮೀನುಗಳ ಬರಗಾಲ ಪ್ರಾರಂಭವಾಗಿದೆ.ಬಹುತೇಕ ಯಾಂತ್ರಿಕೃತ ದೋಣಿಗಳು ಮೇ ತಿಂಗಳಿನ ಅಂತ್ಯದ ಮುಂಚೆಯೇ ಮೀನುಗಾರಿಕೆಯನ್ನು ಸ್ಥಗಿತಗೊಂಡಿದೆ ಇದರ ಫಲವಾಗಿ, ಮಾರುಕಟ್ಟೆಯಲ್ಲಿಮೀನುಗಳ ಕೊರತೆಯಿಂದಾಗಿ ಜಿಲ್ಲೆಯು ಹಲವು ವಿಧದ ಮೀನುಗಳ ಬೆಲೆಗಳಲ್ಲಿ ಹೆಚ್ಚಳವಾಗಿದೆ. ಮೀನುಗಾರ್ರ ಸಮುದಾಯ ಮುಖಂಡ ರಾಜು ತಾಂಡೇಲ್ ಮಾತನಾಡಿ ಕಳೆದ ಎರಡು ವರ್ಷಗಳಿಂದ ವಿಶೇಷವಾಗಿ ಫೆಬ್ರವರಿಯಲ್ಲಿ ಮೀನುಗಳ ಬರವನ್ನು ಎದುರಿಸುತ್ತಿದ್ದೇವೆ ಎಂದರು.
"ಆಳ ಸಮುದ್ರದ ಮೀನುಗಾರರು ಈ ಸಮಯದಲ್ಲಿ ಮೀನುಗಾರಿಕೆ ನಿಲ್ಲಿಸುತ್ತಾರೆ. ಅವರಿಗೆ ಉತ್ತಮ ಮೀನುಗಳು ಸಿಗುವುದಿಲ್ಲ ಎನ್ನುವುದು ಗೊತ್ತಾಗಿದೆ.ಮೀನುಗಾರಿಕೆಗಾಗಿ ಸಮುದ್ರಕ್ಕೆ ದೋಣಿ ಕಳುಹಿಸಲು, ಪ್ರತಿ ಬಾರಿ ಕನಿಷ್ಠ 1 ಲಕ್ಷ ಹೂಡಿಕೆಯ ಅಗತ್ಯವಿರುತ್ತದೆ. ಒಂದು ಲಕ್ಷ ರು. ಮೌಲ್ಯದ ಮೀನುಗಳನ್ನು ಅವರು ಹಿಡಿಯಲು ಸಾಧ್ಯವಾಗದಿದ್ದರೆ, ದೋಣಿ ಮಾಲೀಕರು ಭಾರೀ ನಷ್ಟ ಅನುಭವಿಸುತ್ತಾರೆ " ಅವರು ಹೇಳಿದ್ದಾರೆ.ಮೀನುಗಾರಿಕೆ ದೋಣಿಗಳು ಸೀಮಿತ ಮೀನುಗಾರಿಕಾ ಪ್ರದೇಶದಲ್ಲಿ ತೊಡಗಿಸಿಕೊಂಡಿವೆ ಮತ್ತು ಕೆಲವರಿಂದ ಅವೈಜ್ಞಾನಿಕ ಮೀನುಗಾರಿಕಾ  ವ್ಚಟುವಟಿಕೆಗಳು ಹೆಚ್ಚುತ್ತಿದೆ.ಇದು ಇತರೆ ವೃತ್ತಿಪರ ಮೀನುಗಾರರ, ಮಿನು ಮಾರಾಟಗಾರರ ಮೇಲೆ ಪರಿಣಾಮವನ್ನುಂಟುಮಾಡಿದೆ ಎಂದು ತಜ್ಞರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com