ಕುದುರೆ ವ್ಯಾಪಾರ ಪ್ರಕರಣ: ಎಸಿಬಿ ಪ್ರಶ್ನೆಗೆ ಉತ್ತರಿಸಲು ಹೆಚ್ಚುವರಿ ಕಾಲಾವಕಾಶ ಕೇಳಿದ ಶ್ರೀನಿವಾಸಗೌಡ

ಕುದುರೆ ವ್ಯಾಪಾರ ಪ್ರಕರಣಕ್ಕೆ ಸಂಬಂಧಿಸಿ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡರನ್ನು ಬೆಂಗಳೂರು ಭ್ರಷ್ಟಾಚಾರ ವಿರೋಧಿ ದಳ (ಎಸಿಬಿ) ವಿಚಾರಣೆ ನಡೆಸಿದೆ.
ಶ್ರೀನಿವಾಸಗೌಡ
ಶ್ರೀನಿವಾಸಗೌಡ
ಬೆಂಗಳೂರು: ಕುದುರೆ ವ್ಯಾಪಾರ ಪ್ರಕರಣಕ್ಕೆ ಸಂಬಂಧಿಸಿ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡರನ್ನು ಬೆಂಗಳೂರು ಭ್ರಷ್ಟಾಚಾರ ವಿರೋಧಿ  ದಳ (ಎಸಿಬಿ)  ವಿಚಾರಣೆ ನಡೆಸಿದೆ. ಆ ವೇಳೆ ಶ್ರೀನಿವಾಸ ಗೌಡ ಎಸಿಬಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ತಮಗೆ ಹೆಚ್ಚುವರಿ ಕಾಲಾವಕಾಶ ಬೇಕಿದೆ ಎಂದು ಕೇಳಿದ್ದಾರೆ. ಹೀಗಾಗಿ ಗುರುವಾರ ವಿಚಾರಣೆ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ.
ಬಿಜೆಪಿಯ 'ಆಪರೇಷನ್ ಕಮಲ- 2' ವೇಳೆ ಬಿಜೆಪಿ ಶಾಸಕರು ಕಾಂಗ್ರೆಸ್ ಶಾಸಕರಿಗೆ 5 ಕೋಟಿ ರೂ.ಆಫರ್ ನೀಡಿದ್ದಾರೆಂದು .ಹಾಗೂ ಶಾಸಕ ಸ್ಥಾನ ತೊರೆದು ಬಂದರೆ  25 ಕೋಟಿ ರೂ. ನಿಡುವುದಾಗಿಯೂ ಆಮಿಷ ಒಡ್ಡಿದ್ದರೆಂದು ಅವರು ಆರೋಪಿಸಿದ್ದರು.
ಇದಕ್ಕೆ ಮುನ್ನ ಎಸಿಬಿ ಶ್ರೀನಿವಾಸಗೌಡರಿಗೆ ಹಲವು ಬಾರಿ ನೋಟೀಸ್ ನೀಡಿದ್ದರೂ ಅವರು ಉತ್ತರಿಸಲು ವಿಫಲರಾಗಿದ್ದರೆಂದು ಮೂಲಗಳು ಹೇಳಿದೆ.ಇತ್ತೀಚೆಗೆ ನೀಡಿದ್ದ ಹದಿನೈದು ದಿನದ ಕಾಲಾವಕಾಶವೂ ಮುಗಿದ ಕಾರಣ ಅವರೀಗ ಅಧಿಕಾರಿಗಳ ಮುಂದೆ ಹಾಜರಾಗಬೇಕಾಗಿದೆ.  ಅದೇ ವೇಳೆ ತನಿಖಾಧಿಕಾರಿಗಳಿಗೆ ತಮಗೆ ಉತ್ತರಿಸಲು ಇನ್ನಷ್ಟು ಕಾಲಾವಕಾಶಕ್ಕಾಗಿ ಸಹ ಶಾಸಕರು ಮನವಿ ಮಾಡಿದ್ದಾರೆ.
ಬಿಜೆಪಿ ಮುಖಂಡರಾದ ವಿಶ್ವನಾಥ್, ಅಶ್ವತ್ ನಾರಾಯಣ್ ಮತ್ತು ಯೋಗೇಶ್ವರ್ ಅವರುಗಳು ಕಾಂಗ್ರೆಸ್ ಶಾಸಕರು ತಮ್ಮ ಪಕ್ಷದಿಂದ ರಾಜೀನಾಮೆ ಸಲಿಸಿ ಬಿಜೆಪಿ ಸೇರಿದ್ದರೆ  25 ಕೋಟಿ ರೂ.ಗಳನ್ನು ನೀಡಿರುವುದಾಗಿ ಆಮಿಷ ಒಡ್ಡಿದ್ದಾರೆಂದು ಶ್ರೀನಿವಾಸ್ ಆರೋಪಿಸಿದ್ದಾರೆ. ಅದರಲ್ಲಿ 5 ಕೋಟಿ ರೂ. ಮುಂಗಡ ಪಾವತಿಯಾಗಿರಲಿದೆ ಎಂದೂ ಅವರು ಹೇಳಿದ್ದಾರೆ. ಶಾಸಕಾಂಗ ಸಭೆಯ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಈ ಕುದುರೆ ವ್ಯಾಪಾರ, ನಡೆದಿದೆ ಎಂದು ಅವರು ಆರೊಪಿಸಿದ್ದು ಇವರ ಹೇಳಿಕೆಯ ಪ್ರೇರಣೆಯಿಂದ ಸಾಮಾಜಿಕ ಕಾರ್ಯಕರ್ತರೊಬ್ಬರು ಎಸಿಬಿಗೆ ಈ ಕುರಿತು ದೂರು ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com