ಶಿವಮೊಗ್ಗ; ಮಂಗನ ಜ್ವರಕ್ಕೆ ಸಾಗರ ತಾಲ್ಲೂಕಿನಲ್ಲಿ 4 ಮಂದಿ ಬಲಿ

ಮಾರ್ಚ್ 1ರಿಂದ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಮಂಗನ ಜ್ವರದಿಂದ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ. ಸಾಗರ...

Published: 07th March 2019 12:00 PM  |   Last Updated: 07th March 2019 11:37 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಶಿವಮೊಗ್ಗ; ಮಾರ್ಚ್ 1ರಿಂದ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಮಂಗನ ಜ್ವರದಿಂದ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ. ಸಾಗರ ತಾಲ್ಲೂಕಿನ ಅರಲಗೋಡು ಅರಣ್ಯ ಪ್ರದೇಶದ ಸುತ್ತಮುತ್ತ ಇದು ಪತ್ತೆಯಾಗಿದೆ. ಕಳೆದ ಜನವರಿಯಿಂದ ಜಿಲ್ಲೆಯಲ್ಲಿ 10 ಮಂದಿ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತೀರ್ಥಹಳ್ಳಿ ಅರಣ್ಯ ಪ್ರದೇಶಕ್ಕೆ ಹೋಲಿಸಿದರೆ ಅರಲಗೋಡು ಅರಣ್ಯ ಪ್ರದೇಶದಲ್ಲಿ ಮಂಗನ ಜ್ವರ ಕಾಯಿಲೆ ತೀವ್ರವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ. ಅರಣ್ಯದ ಪರ್ವತ ಪ್ರದೇಶ ಸುತ್ತಮುತ್ತ ವಾಸಿಸುತ್ತಿರುವ ಜನರ ಮೇಲೆ ಇದು ತೀವ್ರ ಪರಿಣಾಮ ಬೀರುತ್ತಿದೆ. ಗಾಳಿಯಿಂದ ಸೋಂಕು ಜನವಸತಿ ಪ್ರದೇಶಗಳಿಗೆ ಅರಣ್ಯಗಳಿಂದ ಬೀಸಿ ಜನರು ಸೋಂಕಿಗೆ ತುತ್ತಾಗುತ್ತಾರೆ ಎಂದು ಹೇಳಿದರು.

ಕ್ಯಾಸನೂರು ಅರಣ್ಯ ಕಾಯಿಲೆ ಕಾಣಿಸಿಕೊಂಡ ನಂತರ 19 ಮಂಗಗಳಲ್ಲಿ ಸೋಂಕು ತಗುಲಿರುವುದು ವರದಿಯಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೀಟನಾಶಕ ಮತ್ತು ರಾಸಾಯನಿಕಗಳನ್ನು ಸಿಂಪಡಿಸುತ್ತಿದೆ ಎಂದು ಡಾ ಸುರಗಿಹಳ್ಳಿ ತಿಳಿಸಿದ್ದಾರೆ.

ಸೋಂಕು ತಗಲದಂತೆ ಕಾಡಿನಲ್ಲಿ ಬೆಂಕಿಯಿಡಲು ಉಪ ಆಯುಕ್ತ ಕೆ ಎ ದಯಾನಂದ್ ಆದೇಶ ನೀಡಿದ್ದಾರೆ.
Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp