ಬೆಂಗಳೂರು: ಅತ್ಯಾಚಾರಕ್ಕೆ ಸಹಕರಿಸದ ಮಹಿಳೆಯ ಕೊಲೆಗೆ ಯತ್ನ, ಕಾಮುಕನ ಬಂಧನ

ಅತ್ಯಾಚಾರಕ್ಕೆ ಸಹಕರಿಸದ ಮಹಿಳೆಯ ಕತ್ತು ಹಿಸುಕಿ ಕೊಲ್ಲಲು ಮುಂದಾದ ವ್ಯಕ್ತಿಯೊಬ್ಬ ಆಕೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ "ಸತ್ತಳು" ಎಂದು ಭಾವಿಸಿ ಪೋಲೀಸ್ ಠಾಣೆಯಲ್ಲಿ ಶರಣಾಗಿರುವ ಘಟನೆ ಬೆಂಗಳುರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಅತ್ಯಾಚಾರಕ್ಕೆ ಸಹಕರಿಸದ ಮಹಿಳೆಯ ಕತ್ತು ಹಿಸುಕಿ ಕೊಲ್ಲಲು ಮುಂದಾದ ವ್ಯಕ್ತಿಯೊಬ್ಬ ಆಕೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ "ಸತ್ತಳು" ಎಂದು ಭಾವಿಸಿ ಪೋಲೀಸ್ ಠಾಣೆಯಲ್ಲಿ ಶರಣಾಗಿರುವ ಘಟನೆ ಬೆಂಗಳುರಿನಲ್ಲಿ ನಡೆದಿದೆ.
ಸುಮಾ ( (42), ಮನೆಗೆಲಸ ಮಾಡಿಕೊಂಡಿದ್ದು ಬುಧವಾರ ಶೌಚಾಲಯ ಶುಚಿಗೊಳಿಸುವ ವೇಳೆ ವ್ಯಕ್ತಿ ಅವಳ ಕತ್ತು ಹಿಸುಕಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಆ ವೇಳೆ ಸುಮಾ ಪ್ರಜ್ಞಾಹೀನ ಲಾಗಿ ಬಿದ್ದದ್ದನ್ನು ಕಂಡು ಆಕೆ ಸತ್ತು ಹೋದಳೆಂದು ಬಾವಿಸಿದ ಆತ ಪರಪ್ಪನ ಅಗ್ರಹಾರ ಪೋಲೀಸರಲ್ಲಿ ಆಗಮಿಸಿ ”ತಾನು ತನ್ನ ಪತ್ನಿಯನ್ನು ಕೊಂದಿದ್ದಾಗಿಯೂ, ತನ್ನನ್ನು ಬಂಧಿಸಿ’ ಎಂದೂ ಕೇಳಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೋಲೀಸರು ಆತನೊಡನೆ ಘಟನಾ ಸ್ಥಳಕ್ಕೆ ಆಗಮಿಸಿದಾಗ ಸುಮಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದದ್ದು ತಿಳಿದಿದೆ.
ಘಟನೆ ವಿವರ
ಕಾಶಿ (35) ಆರೋಪಿಯಾಗಿದ್ದು ಈತ ತನ್ನ ಪತ್ನಿ ಎಂದು ಹೇಳಿಕೊಂಡ ಸುಮಾ (ಹೆಸರು ಬದಲಿಸಿದೆ) ಗೆ ಸಾಕಷ್ಟು ಹಲ್ಲೆ ನಡೆಸಿದ್ದ.ತನಿಖಾ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಕಾಶಿ ಪೊಲೀಸ್ ಠಾಣೆಗೆ ಬುಧವಾರ ಬೆಳಗ್ಗೆ 9 ಗಂಟೆಗೆ ಬಂದು ತನ್ನ ಹೆಂಡತಿಯನ್ನು ಕೊಂದದ್ದಕ್ಕಾಗಿ ಶರಣಾಗಲು ಬಯಸಿದ್ದ. ಕರ್ತವ್ಯ ನಿರತ ಅಧಿಕಾರಿಗಳು ಕೂಡಲೇ ಅವನನ್ನು ಆ ಸ್ಥಳಕ್ಕೆ ಕರೆದೊಯ್ದಾಗ  ಮನೆಯ ಟೆರೇಸ್ ನಲ್ಲಿ ಸುಮಾ ಪ್ರಜ್ಞಾಹೀನರಾಗಿದ್ದರು. "ಅವಳು ಇನ್ನೂ ಜೀವಂತವಾಗಿರುವುದಾಗಿ ನಾವು ಕಂಡುಕೊಂಡಿದ್ದೇವೆ ಮತ್ತು ಸೇಂಟ್ ಜಾನ್ಸ್ ಹಾಸ್ಪಿಟಲ್ ಗೆ ಚಿಕಿತ್ಸೆಗಾಗಿ ಸೇರಿಸಿದ್ದೇವೆ" ಅವರು ಹೇಳಿದ್ದಾರೆ.
ಸುಮಾ ಚಾಟ್ ಶಾಪ್ ಒಂದರ ಒಡತಿಯಾಗಿದ್ದು ಆಕೆ ಹೇಳಿದಂತೆ ಕಾಶಿ ಅವಳ ಪತಿಯಲ್ಲ. ಬದಲಿಗೆ ಹಲವು ವರ್ಷಗಳಿಂದ ಅವನು ಆಕೆಯನು ಬಂಧಿಸಿಟ್ಟಿದ್ದಾನೆ. ಆಕೆ ಒಬ್ಬಂಟಿಗಳಾಗಿರುವ ವೇಳೆ ಕಾಶಿ ಆಗಾಗ ಅವಲ ಮನೆಗೆ ಬರುತ್ತಿದ್ದ. ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ಸುಮಾ ಸಹ ಅವನನ್ನು ಹೊಡೆದು ಪೋಲೀಸರಿಗೆ ದೂರು ಸಲ್ಲಿಸಬೇಕೆಂದುಕೊಂಡಿದ್ದಳು. ಆದರೆ ಕಾಶಿ ಆಕೆಹ್ಗೆ ಕಿರುಕುಳ ನೀಡುತ್ತಿದ್ದ,. ಈ ನಡುವೆ ಕಾಶಿ ಜತೆಗೆ ಸುಮಾಗೆ ಅಕ್ರಮ ಸಂಬಂಧವಿದೆ ಎಂದು ತಪ್ಪಾಗಿ ಭಾವಿಸಿದ್ದ ಸುಮಾಳ ಪತಿ ಕಳೆದ ನಾಲ್ಕು ವರ್ಷಗಳ ಹಿಂದೆ ಆಕೆಯನ್ನು ತೊರೆದಿದ್ದ. ಆ ನಂತರ ಕಾಶಿ ಪ್ರತಿ ದಿನವೂ ಸುಮಾಳ ಮನೆಗೆ ಭೇಟಿಕೊಡಲಾರಂಭಿಸಿದ್ದಾನೆ.
ಮೂರು ವರ್ಷಗಳ ಹಿಂದೆ, ಅವಳು ಕೆಲಸದ ಸ್ಥಳದಲ್ಲಿರುವಾಗ ಅವಳ ಹಿಂದೆ ಬಿದ್ದ ಕಾಶಿ ಅವಳನ್ನು ಮರದ ಹಿಂದೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.ಆಕೆ ಪೊಲೀಸರಿಗೆ ದೂರು ನೀಡಿದರೆ  ಅವಳ ಮಕ್ಕಳನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾನೆ.ಭಯಭೀತವಾದ ಸುಮಾ ತನ್ನ ಮನೆಗೆ  ಬರುವುದನ್ನು ನಿಲ್ಲಿಸಲು ಕಾಶಿಗೆ ಮನವಿ ಮಾಡಿದ್ದಾರೆ.  ಆ ನಂತರದಲ್ಲಿ ಆತ ಮನೆಗೆ ಬರುವುದನ್ನು ಬಿಟ್ಟರೂ ತಾನು ಕೆಲಸ ಮಾಡುವ ಸ್ಥಳಕ್ಕೆ ಆಗಮಿಸುತ್ತಾನೆ. ಆಗಾಗ ಪೊದೆಗಳ ಹಿಂದೆ, ಮರದ ನೆರಳಲ್ಲಿ ನನ್ನ ಮೇಲೆ ಆಕ್ರಮಣ ನಡೆಸುತ್ತಾನೆ ಎಂದು ಸುಮಾ ವಿವರಿಸಿದ್ದಾರೆ.
ಕಡೆಯಲ್ಲಿ ನಾನು ಕಾಶಿ ತನ್ನ ಕುಟುಂಬಕ್ಕೆ ಸೇರಿದವನೆಂದು ಅರಿತೆ, ಆತ ನನಗೆ ಸೋದರ ಸಂಬಂಧಿಯಾಗಬೇಕಿತ್ತು.. ನಾನು ಅವನನ್ನು ಸಂಪೂರ್ಣವಾಗಿ  ದೂರವಿಡಲು ತೀರ್ಮಾನಿಸಿದೆ.ಆದರೆ ಕಾಶಿ ಮತ್ತೆ ನನ್ನ ಮನೆಗೆ ಆಗಮಿಸಲು ಪ್ರಾರಂಭಿಸಿದ್ದ. ಆಗೊಮ್ಮೆ ನಾನು, ನನ್ನ ಮಕ್ಕಳು, ನನ್ನ ತಾಯಿ ಸೇರಿ ಅವನನ್ನು ಹೊಡೆದಿದ್ದು ಪೋಲೀಸರಿಗೆ ದೂರು ಸಲ್ಲಿಸಿದ್ದೆವು. ಅದಾಗಿ ಎರಡು ತಿಂಗಳು ಮೌನವಾಗಿದ್ದ  ಆತ ಮತ್ತೆ ನನಗೆ ಕಿರುಕುಳ ನಿಡುವುದನ್ನು ಮುಂದುವರಿಸಿದ್ದ. ಎಂದು ಸುಮಾ ವಿವರಿಸಿದರು.
ಕಾಶಿ ಓರ್ವ ಕಾರ್ಮಿಕನಾಗಿದ್ದು ಆತ ತನ್ನ ಮಕ್ಕಳೊಡನೆ ವಾಸವಿದ್ದ. ಇದೀಗ ಪೋಲೀಸರು ಕೊಲೆ ಯತ್ನ ಪ್ರಕರಣದಲ್ಲಿ ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com