ಮಂಗಳೂರು: ಕೊಲೆಯತ್ನ ನಡೆಸಿದ ಬರೋಬ್ಬರಿ 39 ವರ್ಷದ ಬಳಿಕ ಆರೋಪಿ ಅಂದರ್!

ಕೊಲೆ ಯತ್ನ ಪ್ರಕರಣವೊಂಡರಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬನನ್ನು ಬರೋಬ್ಬರಿ 39 ವರ್ಷಗಳ ಬಳಿಕ ಪೋಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಗಳೂರು: ಕೊಲೆ ಯತ್ನ ಪ್ರಕರಣವೊಂಡರಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬನನ್ನು ಬರೋಬ್ಬರಿ 39 ವರ್ಷಗಳ ಬಳಿಕ ಪೋಲೀಸರು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅವಿಲ್ ಡಿ'ಸೋಜಾ  (56) ಎನ್ನುವಾತನೇ ಆರೊಪಿಯಾಗಿದ್ದು ಈತ 17 ವರ್ಷದವನಿದ್ದಾಗ ಕೊಲೆ ಪ್ರಯತ್ನದಲ್ಲಿ ಭಾಗಿಯಾಗಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಜೆಪ್ಪಿಮೊಗರು ಸಮೀಪದ ಪದಪು ಅದಂಕುದ್ರು, ವಿನ ಡಿ'ಸೋಜಾಅಕ್ರಮ ಮದ್ಯ ವ್ಯವಹಾರದಲ್ಲಿ ತೊಡಗಿದ್ದ. ಆಗ ಅದನ್ನು ವಿರೋಧಿಸಿದ್ದ ದೂರುದಾರ ಗಣೇಶ್ ಶೆಟ್ಟಿಯನ್ನು 1980ರಲ್ಲಿ ಕೊಲೆ ಮಾಡುವುದಕ್ಕೆ ಯತ್ನಿಸಿದ್ದಾನೆ. ಆ ವೇಳೆ ಮಂಗಳೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆದಾಗ್ಯೂ, ಡಿ'ಸೋಜಾ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದ. ವರ್ಷಗಳು ಕಳೆದಂತೆ ಈ ಪ್ರಕರಣ ನ್ಯಾಯಾಲಯದಲ್ಲಿ ಧೂಳು ಹಿಡಿದು ಕೂತರೆ ಆರೋಪಿ ಡಿ'ಸೋಜಾ ಜೀವನೋಪಾಯಕ್ಕೆ ವಿದೇಶಕ್ಕೆ ತೆರಳಿದ್ದಲ್ಲದೆ ಇತ್ತೀಚೆಗೆ ಮತ್ತೆ ಭಾರತಕ್ಕೆ ಮರಳಿ ಬಂದು ಉಲ್ಲಾಳದಲ್ಲಿ ಮನೆಯನ್ನು ಕಟ್ಟಿ ವಾಸಿಸತೊಡಗಿದ್ದನು.
ಇದೀಗ ಆಟಿ ರೌಡಿ ಸ್ಕ್ವಾಡ್ ಬಾಕಿ ಉಳಿದಿರುವ ವಾರಂಟ್ ಗಳನ್ನು ಪರಿಶೀಲಿಸಿದಾಗ , ಡಿ'ಸೋಜಾ ಹೆಸರು ಕಾಣಿಸಿಕೊಂಡಿದೆ.ಆತನ ಇರುವಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರಿನ ದಕ್ಷಿಣ ಸಹಾಯಕ ಕಮೀಷನರ್ ನೇತೃತ್ವದ ತಂಡ ಅಂತಿಮವಾಗಿ ಗುರುವಾರ , ಡಿ'ಸೋಜಾ ನನ್ನು ಅವನ ಮನೆಯಿಂದ ಬಂಧಿಸಿ ಕರೆದೊಯ್ದಿದೆ.ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಡಿ.ಸಿ.ಪಿ.ಹನುಮಂತಾರಾಯ ಮತ್ತು ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com