ರೌಡಿ ಲಕ್ಷ್ಮಣ ಕೊಲೆ ಹಿಂದೆ 'ಸುಂದರಿ'ಯ ಕೈವಾಡ, ಜೆಡಿಎಸ್ ನಾಯಕಿಯ ಪುತ್ರಿ ಬಂಧನ

ಹಾಡ ಹಗಲೇ ನಡೆದ ಶ್ರೀಮಂತ ರೌಡಿ ಶೀಟರ್ ಲಕ್ಷ್ಮಣ ಬರ್ಬರ ಕೊಲೆ ಪ್ರಕರಣದಲ್ಲಿ ಸುಂದರಿಯೊಬ್ಬಳ ಕೈವಾಡವಿರುವುದು...
ವರ್ಷಣಿ - ಲಕ್ಷ್ಮಣ
ವರ್ಷಣಿ - ಲಕ್ಷ್ಮಣ
ಬೆಂಗಳೂರು: ಹಾಡ ಹಗಲೇ ನಡೆದ ಶ್ರೀಮಂತ ರೌಡಿ ಶೀಟರ್ ಲಕ್ಷ್ಮಣ ಬರ್ಬರ ಕೊಲೆ ಪ್ರಕರಣದಲ್ಲಿ ಸುಂದರಿಯೊಬ್ಬಳ ಕೈವಾಡವಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ. 
ಲಕ್ಷ್ಮಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಜೆಡಿಎಸ್ ನಾಯಕಿಯ ಪುತ್ರಿ ವರ್ಷಿಣಿ ಸೇರಿದಂತೆ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದು, ಮಂಗಳವಾರ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.
ಆರೋಪಿಗಳ ವಿಚಾರಣೆ ನಡೆಸಿದ 1ನೇ ಎಸಿಎಂಎಂ ಕೋರ್ಟ್, ಆರು ಆರೋಪಿಗಳನ್ನು ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಮಾರ್ಚ್ 7ರಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ಹಾಡಹಗಲೇ ರೌಡಿ ಲಕ್ಷ್ಮಣನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದೇವರಾಜ್, ಹೇಮಂತ್, ಕ್ಯಾಟ್ ರಾಜ, ರೂಪೇಶ್ ಚೇತನ್ ಹಾಗೂ ವರ್ಷಿಣಿಯನ್ನು ಕಳೆದ ರಾತ್ರಿ ಬಂಧಿಸಿದ್ದರು.
ಲಕ್ಷ್ಮಣ ಕೊಲೆಯ ಹಿಂದೆ ವರ್ಷಿಣಿ ಕೈವಾಡ ಇದ್ದಿರುವುದನ್ನು ಪೊಲೀಸರು ತನಿಖೆ ವೇಳೆ ಪತ್ತೆಹಚ್ಚಿದ್ದಾರೆ. 
ಈ ವರ್ಷಿಣಿ ರೌಡಿಶೀಟರ್ ಮೋಟೆ ಹರೀಶ್ ಮಗಳು ಎಂದು ತಿಳಿದುಬಂದಿದ್ದು, ವರ್ಷಿಣಿ ತಾಯಿ ಪದ್ಮ ಸ್ಥಳೀಯ ಜೆಡಿಎಸ್ ಘಟಕದ ಅಧ್ಯಕ್ಷೆಯಾಗಿದ್ದಾರೆ.
ವರ್ಷಿಣಿ ರೂಪೇಶ್ ಜೊತೆಗೆ ಪ್ರೀತಿಸುತ್ತಿದ್ದಳು. ಆದರೆ ಆಕೆಯ ತಾಯಿ ಆತನನ್ನು ದೂರ ಮಾಡಿದ್ದಳು. ಅದಕ್ಕೆ ಲಕ್ಷ್ಮಣ ಸಹಾಯ ಕೋರಿದ್ದಳು. ಈ ರೂಪೇಶ್ ಸಣ್ಣ ಪುಟ್ಟ ಕಳ್ಳತನ ಪ್ರಕರಣ ಮಾಡಿಕೊಂಡು ರೌಡಿ ಶೀಟರ್ ಲಕ್ಷ್ಮಣ ಗ್ಯಾಂಗ್ ನಲ್ಲಿದ್ದ ಹುಡುಗನಾಗಿದ್ದ.
ವರ್ಷಿಣಿಯನ್ನು ರೂಪೇಶ್ ನಿಂದ ದೂರ ಮಾಡಿದ ಮೇಲೆ ಲಕ್ಷ್ಮಣ ಆಕೆಯೊಂದಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದ. ಆಕೆ ಆತನನ್ನು ನಂಬಿಸಿ ಬಲೆಗೆ ಹಾಕಿ ರೂಪೇಶ್ ಹಾಗೂ ತಂಡದವರಿಂದ ಆತನನ್ನು ಮುಗಿಸಲು ಸಂಚು ರೂಪಿಸಿದ್ದಳು.
ಎಂಬಿಬಿಎಸ್ ಓದಿ ಎಂಎಸ್ ಓದಲು ಲಂಡನ್ ಗೆ ಹೋಗಿದ್ದ ವರ್ಷಿಣಿ ರೌಡಿ ಲಕ್ಷ್ಮಣ್ ಗೆ ಬರಲು ಹೇಳಿ ಆ ಮಾಹಿತಿಯನ್ನು ರೂಪೇಶ್  ಗೆ ನೀಡಿ ಮಟಾಷ್ ಮಾಡಿಸಿದ್ದಾಳೆ. ಲಂಡನ್ ನಲ್ಲಿಯೇ ಇದ್ದು ಪ್ರಿಯತಮನ ಸಹಾಯದಿಂದ ಕೊಲೆ ಮಾಡಿಸಿದ್ದಾಳೆ.
ಇದೀಗ ವರ್ಷಿಣಿ ಹಾಗೂ ಆಕೆಯ ಪ್ರಿಯತಮ ರೂಪೇಶ್ ಸೇರಿ, ಕೊಲೆ ಪ್ರಮುಖ ಆರೋಪಿಗಳಾದ ಕ್ಯಾಟ್ ರಾಜಾ, ದೇವರಾಜ್, ಹೇಮಂತ್, ಚೇತನ್ ಸೇರಿ ಹಲವರನ್ನು ಬಂ‍‍ಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com