ಬೇಸಿಗೆಯಲ್ಲಿ ಬೆಂಗಳೂರಿನ ಪಾನ ಪ್ರಿಯರಿಗೆ ಕಾಡಲಿದೆ 'ಬಿಯರ್' ಕೊರತೆ: ಚುನಾವಣೆ, ಮಾಫಿಯಾ ಕಾರಣ!

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ದೇಶಾದ್ಯಂತ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಬೇಸಿಗೆಯಲ್ಲಿ ಪಾನ ಪ್ರಿಯರಿಗೆ ಬಿಯರ್ ಬಿಸಿ ಎದುರಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ದೇಶಾದ್ಯಂತ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಬೇಸಿಗೆಯಲ್ಲಿ ಪಾನ ಪ್ರಿಯರಿಗೆ ಬಿಯರ್ ಬಿಸಿ ಎದುರಾಗಲಿದೆ.
ಹೌದು ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಅಂಗಡಿ ಮಾಲೀಕರಿಗೆ ಕಟ್ಟು ನಿಟ್ಟಿನ ಆದೇಶ ನೀಡಲಾಗಿದ್ದು ಇಂತಿಷ್ಟೇ ಮದ್ಯ ಮಾರಾಟ ಮಾಡಬೇಕು ಎಂದು ಆದೇಶಿಸಲಾಗಿದೆ. ಇನ್ನು ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಮದ್ಯದ ಆಮಿಷ ನೀಡುವ ಸಲುವಾಗಿ ಮದ್ಯವನ್ನು ಕ್ರೂಢೀಕರಿಸುವ ಮಾಫಿಯಾಗೆ ಕಡಿವಾಣ ಹಾಕುವ ಸಲುವಾಗಿ ಆಯೋಗ ಸರ್ವಪ್ರಯತ್ನವನ್ನು ಮಾಡಿದೆ.
ಇನ್ನು ಬೇಸಿಗೆಯಲ್ಲಿ ಬಿಯರ್ ಮಾರಾಟ ದ್ವಿಮುಖವಾಗಿರುತ್ತದೆ. ಆದರೆ ಈ ಬಾರಿ ಬೇಸಿಗೆಯಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಬಿಯರ್ ಮಾರಾಟದ ಮೇಲೆ ದೊಡ್ಡ ಮಟ್ಟದ ಪರಿಣಾಮ ಉಂಟಾಗಲಿದೆ ಎಂದು ಎಂಆರ್ಪಿ ಔಟ್ ಲೇಟ್ ಮಾಲೀಕ ವಿಕ್ರಂ ಜಗದೀಶ್ ಹೇಳದ್ದಾರೆ.
ಇನ್ನು ಎಂಆರ್ಪಿ ಔಟ್ ಲೇಟ್ ಗಳಲ್ಲಿ ಬಿಯರ್ ಮಾರಾಟಕ್ಕೆ ಕಡಿವಾಣ ಹಾಕಿರುವುದರಿಂದ ಕೆಲ ಶಾಪ್ ಗಳಲ್ಲಿ ಬಿಯರ್ ಮಾರಾಟ ಮಾಫಿಯಾ ಜೋರಾಗಿ ನಡೆಯುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com