ಪಿಯು ಪರೀಕ್ಷೆಗೆ ಲೇಟಾಗುತ್ತೆಂದು ಓನ್ ವೇಯಲ್ಲಿ ಬಂದ ವಿದ್ಯಾರ್ಥಿನಿ, ಅಡ್ಡಗಟ್ಟಿ ಪೊಲೀಸ್ ಮಾಡಿದ್ದೇನು ಗೊತ್ತ?

ದ್ವಿತೀಯ ಪಿಯುಸಿ ಪರೀಕ್ಷೆಗೆ ವಿಳಂಬವಾಗುತ್ತದೆ ಎಂದು ವಿದ್ಯಾರ್ಥಿಯೊರ್ವಳು ನಿಯಮ ಉಲ್ಲಂಘಿಸಿ ಬೈಕ್ ಓಡಿಸಿದ್ದರ ಪರಿಣಾಮ ಆಕೆಯನ್ನು ಪೊಲೀಸರು ಮಧ್ಯೆ ತಡೆದು ನಿಲ್ಲಿಸಿದ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಳಗಾವಿ: ದ್ವಿತೀಯ ಪಿಯುಸಿ ಪರೀಕ್ಷೆಗೆ ವಿಳಂಬವಾಗುತ್ತದೆ ಎಂದು ವಿದ್ಯಾರ್ಥಿಯೊರ್ವಳು ನಿಯಮ ಉಲ್ಲಂಘಿಸಿ ಬೈಕ್ ಓಡಿಸಿದ್ದರ ಪರಿಣಾಮ ಆಕೆಯನ್ನು ಪೊಲೀಸರು ಮಧ್ಯೆ ತಡೆದು ನಿಲ್ಲಿಸಿದ ಪ್ರಸಂಗ ಬೆಳಗಾವಿಯಲ್ಲಿ ನಡೆದಿದೆ.
ಪಿಯುಸಿ ವಿದ್ಯಾರ್ಥಿನಿಯೊರ್ವಳು ಓನ್ ವೇಯಲ್ಲಿ ಬರುತ್ತಿರುವುದನ್ನು ಗಮನಿಸಿದ ಸಂಚಾರಿ ಪೊಲೀಸರು ಆಕೆಯನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಪರೀಕ್ಷೆಗೆ ಲೇಟಾಗುತ್ತೆ ಅಂತ ಓನ್ ವೇಯಲ್ಲಿ ಬಂದಿದ್ದಾಗಿ ಹೇಳಿದ್ದಾಳೆ. ಈ ವೇಳೆ ಸ್ಥಳೀಯರು ಅಲ್ಲಿ ಜಮಾಯಿಸಿ ಆಕೆಯನ್ನು ಬಿಟ್ಟು ಬಿಡಿ ಎಂದು ಹೇಳಿದ್ದಾರೆ. 
ಆದರೆ ಮೊದಲಿಗೆ ಪೊಲೀಸ್ ಕಾನಿಸ್ಟೇಬಲ್ ಆಕೆಯನ್ನು ಡಾಕ್ಯುಮೆಂಟ್ ತೋರಿಸಿ, ದಂಡ ಕಟ್ಟುವಂತೆ ಹೇಳಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಉತ್ತರ ಸಂಚಾರಿ ಪೊಲೀಸ್ ಇನ್ ಪೆಕ್ಟರ್ ಆರ್ ಆರ್ ಪಾಟೀಲ್ ಅವರು ವಿದ್ಯಾರ್ಥಿನಿಯಿಂದ ಹಾಲ್ ಟಿಕೆಟ್ ಪಡೆದು ಪರಿಶೀಲಿಸಿ ಕೂಡಲೇ ಆಕೆಯನ್ನು ಕಾಲೇಜು ಹತ್ತಿರ ಬಿಟ್ಟು ಬರುವಂತೆ ಕಾನಿಸ್ಟೇಬಲ್ ಗೆ ಸೂಚಿಸಿದ್ದಾರೆ. ಅಂತೆ ಕಾನಿಸ್ಟೇಬಲ್ ವಿದ್ಯಾರ್ಥಿನಿಯನ್ನು ಸರಿಯಾಗಿ ಸಮಯಕ್ಕೆ ಕಾಲೇಜಿಗೆ ಬಿಟ್ಟು ಬಂದಿದ್ದಾರೆ.
ಒಟ್ಟಿನಲ್ಲಿ ಸಂಚಾರಿ ಪೊಲೀಸರು ತಮ್ಮ ಕರ್ತವ್ಯವನ್ನು ನಿಭಾಯಿಸುವುದರ ಜೊತೆಗೆ ವಿದ್ಯಾರ್ಥಿನಿಯ ಭವಿಷ್ಯಕ್ಕೂ ಯಾವುದೇ ತೊಂದರೆ ಆಗಬಾರದೆಂದು ನೋಡಿಕೊಂಡಿರುವುದು ಸ್ಥಳೀಯ ಮೆಚ್ಚುಗೆಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com