ಬೆಂಗಳೂರು: ಹಲ್ಲೆಗೊಳಗಾದ ಶಿಕ್ಷಕಿಗೆ ಪೋಲೀಸ್ ಅಧಿಕಾರಿಯಿಂದ ರಕ್ತದಾನ, ಡಿಸಿಪಿ ಅಣ್ಣಾಮಲೈ ಶ್ಲಾಘನೆ

ದುಷ್ಕರ್ಮಿಗಳಿಂಡ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯೊಬ್ಬರಿಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದ ಪೊಲೀಸ್​​ ಇನ್ಸ್​​ಪೆಕ್ಟರ್ ಗೆ ದಕ್ಷಿಣ ವಿಭಾಗ ಡಿಸಿಪಿ ...
ಪೊಲೀಸ್​​ ಇನ್ಸ್​​ಪೆಕ್ಟರ್  ಸಿದ್ದಲಿಂಗಯ್ಯ ಹಾಗೂ ಡಿಸಿಪಿ ಅಣ್ಣಾಮಲೈ
ಪೊಲೀಸ್​​ ಇನ್ಸ್​​ಪೆಕ್ಟರ್ ಸಿದ್ದಲಿಂಗಯ್ಯ ಹಾಗೂ ಡಿಸಿಪಿ ಅಣ್ಣಾಮಲೈ
ಬೆಂಗಳೂರು: ದುಷ್ಕರ್ಮಿಗಳಿಂಡ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯೊಬ್ಬರಿಗೆ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದ ಪೊಲೀಸ್​​ ಇನ್ಸ್​​ಪೆಕ್ಟರ್ ಗೆ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಶಹಬಾಸ್ ಹೇಳಿದ್ದಾರೆ.
ಇಂದು ಬೆಳಗಿನ ಜಾವ ನಡೆದ ಘಟನೆಯಲ್ಲಿ ಹೊಸಕೆರೆಹಳ್ಳಿ ಶಾಲಾ ಶಿಕ್ಷಕಿಯಾಗಿದ್ದ ತನುಜಾ ತೀವ್ರವಾಗಿ ಗಾಯಗೊಂಡಿದ್ದರು.
ಘಟನೆ ಹಿನ್ನೆಲೆ
ಬೆಂಗಳೂರು ಹೊಸಕೆರೆಹಳ್ಳಿಯಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ಶಿಕ್ಷಕಿಯಾಗಿದ್ದ ತನುಜಾ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ.ಹಲ್ಲೆಗೊಳಗಾದ ತನುಜ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ.
ಈ ಮಾಹಿತಿ ಪಡೆದ ಗಿರಿನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯ  ತಕ್ಷಣ ಸ್ಥಳಕ್ಕೆ ಧಾವಿಸಿದ್ದಲ್ಲದೆ ತನುಇಜಾರನ್ನು ಆಸ್ಪತ್ರೆಗೆ ದಾಖಲಿಒಸಿದ್ದಾರೆ. ಹೆಚ್ಚುವರಿ ಚಿಕಿತ್ಸೆಗಾಗಿ ತನುಜಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು  ಆಗ ರಕ್ತಸ್ರಾವದಿಂದ ನಿತ್ರಾಣವಾಗಿದ್ದ ಶಿಕ್ಷಕಿಗೆ ತಕ್ಷಣ ರಕ್ತ ಅಗತ್ಯವೆಂದು ವೈದ್ಯರು ಹೇಳಿದ್ದಾರೆ.  ಆಗ ತಮ್ಮ ರಕ್ತ ಶಿಕ್ಷಕಿ ತನುಜಾ ಅವರಿಗೆ ಹೊಂದಿಕೆಯಾಗುವುದೆಂದು ಅರಿತ ಸಿದ್ದಲಿಂಗಯ್ಯ ತಾವೇ ರಕ್ತ ಕೊಟ್ಟು ಮಹಿಳಾ ಶಿಕ್ಷಕಿಯ ಜೀವ ಉಳಿಸಿದ್ದಾರೆ.
ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕಿ ಪ್ರಾಣಾಪಾಯದಿಂದ ಪಾರಾಗಿದ್ದು ಇನ್ಸ್‌ಪೆಕ್ಟರ್ ಸಿದ್ದಲಿಂಗಯ್ಯ ಅವರ ಕಾರ್ಯಕ್ಕೆ ಹಿರಿ, ಕಿರಿಯ ಪೋಲೀಸ್ ಅಧಿಕಾರಿಗಳು ಮೆಚುಗೆ ಸೂಚಿಸಿದ್ದಾರೆ. ಇದೇ ರೀತಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಸಹ ಸಿದ್ದಲಿಂಗಯ್ಯ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com