ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕ ಐದು ಪಟ್ಟು ಹೆಚ್ಚಳ

ಖಾಸಗಿ ಕಾಲೇಜುಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್ ಗಳ ಶುಲ್ಕವನ್ನು ಇತ್ತೀಚೆಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಖಾಸಗಿ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್ ಗಳ ಶುಲ್ಕವನ್ನು ಇತ್ತೀಚೆಗೆ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕವನ್ನು 5 ಪಟ್ಟು ಹೆಚ್ಚಿಸಿದೆ.
ಈ ಮೂಲಕ ಕ್ಲಿನಿಕಲ್ ಕೋರ್ಸ್ ಗಳ ಶುಲ್ಕ ಮುಂದಿನ ಶೈಕ್ಷಣಿಕ ವರ್ಷದಿಂದ 20 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೆ ಏರಿಕೆಯಾಗಲಿದೆ. ಪಾರಾ ಕ್ಲಿನಿಕಲ್ ಪಿಜಿ ವೈದ್ಯಕೀಯ ಕೋರ್ಸ್ ಗಳ ಶುಲ್ಕ 10 ಸಾವಿರದಿಂದ 50 ಸಾವಿರಕ್ಕೆ ಏರಿಕೆಯಾಗಲಿದೆ. ಪ್ರಿ ಕ್ಲಿನಿಕಲ್ ಕೋರ್ಸ್ ಗಳ ಸ್ನಾತಕೋತ್ತರ ಕೋರ್ಸ್ ಬೆಲೆ 20 ಸಾವಿರ ರೂಪಾಯಿ ಆಗಲಿದೆ.
ಕಳೆದ ವರ್ಷ ಈ ಕೋರ್ಸ್ ಶುಲ್ಕ ವರ್ಷಕ್ಕೆ ಕೇವಲ 5 ಸಾವಿರಗಳಿತ್ತು. ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತು ಯೂನಿವರ್ಸಿಟಿ ಶುಲ್ಕ ಪ್ರತ್ಯೇಕ ಕಟ್ಟಬೇಕು. ಆರು ವರ್ಷಗಳ ಹಿಂದೆ ಶುಲ್ಕ ಹೆಚ್ಚಳ ಮಾಡಲಾಗಿತ್ತು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ ಗಿರೀಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com