ಬೆಂಗಳೂರು: ರಕ್ತದಾನ ಮಾಡಿ ಶಿಕ್ಷಕಿಯ ಜೀವವುಳಿಸಿದ್ದ ಪೋಲೀಸ್ ಅಧಿಕಾರಿಗೆ ಸನ್ಮಾನ

ಹಲ್ಲೆಗೊಳಗಾಗಿದ್ದ ಶಿಕ್ಷಕಿಗೆ ರಕ್ತದಾನ ಮಾಡಿ ಜೀವ ಉಳಿಸಿದ ಗಿರಿನಗರ ಠಾಣೆ ಇನ್ಸ್ ಪೆಕ್ಟರ್ ಸಿಎ ಸಿದ್ದಲಿಂಗಯ್ಯ ಅವರನ್ನು ನಗರದ ಪೋಲಿಸ್ ಕಮೀಷನರ್ ಟಿ. ಸುನೀಲ್ ಕುಮಾರ್ ಸನ್ಮಾನಿಸಿ ಗೌರವಿಸಿದ್ದಾರೆ.
ಬೆಂಗಳೂರು ಪೊಲೀಸ್ ಕಮೀಷನರ್ ಟಿ ಸುನೀಲ್ ಕುಮಾರ್ ಹಾಗೂ ಇನ್ಸ್ ಪೆಕ್ಟರ್ ಸಿಎ ಸಿದ್ದಲಿಂಗಯ್ಯ
ಬೆಂಗಳೂರು ಪೊಲೀಸ್ ಕಮೀಷನರ್ ಟಿ ಸುನೀಲ್ ಕುಮಾರ್ ಹಾಗೂ ಇನ್ಸ್ ಪೆಕ್ಟರ್ ಸಿಎ ಸಿದ್ದಲಿಂಗಯ್ಯ
ಬೆಂಗಳೂರು: ಹಲ್ಲೆಗೊಳಗಾಗಿದ್ದ ಶಿಕ್ಷಕಿಗೆ ರಕ್ತದಾನ ಮಾಡಿ ಜೀವ ಉಳಿಸಿದ ಗಿರಿನಗರ ಠಾಣೆ ಇನ್ಸ್ ಪೆಕ್ಟರ್ ಸಿಎ ಸಿದ್ದಲಿಂಗಯ್ಯ ಅವರನ್ನು ನಗರದ ಪೋಲಿಸ್ ಕಮೀಷನರ್ ಟಿ. ಸುನೀಲ್ ಕುಮಾರ್ ಸನ್ಮಾನಿಸಿ ಗೌರವಿಸಿದ್ದಾರೆ. ಇನ್ನು ಶಿಕ್ಷಕಿ ತನುಜಾ ಅವರ ಮೇಲೆ ಹಲ್ಲೆ ನಡೆಸಿದ್ದ ಆರೊಪಿ ಶೇಖರ್ ಸಹ ಅದೇ ದಿನ ಪೋಲೀಸರಿಗೆ ಸಿಕ್ಕಿದ್ದು ಆತನನ್ನು ಜೈಲಿಗಟ್ಟಲಾಗಿದೆ.
ಶೇಖರ್ ತನ್ನನ್ನು ವಿವಾಹವಾಗಲು ನಿರಾಕರಿಸಿದ್ದಕ್ಕಾಗಿ ತನುಜಾ ಅವರ ಮೇಲೆ ಮಾರಕಾಸ್ತ್ರಗಳಿಂಡ ಹಲ್ಲೆ ನಡೆಸಿದ್ದ. 
"ಪೋಲೀಸ್ ಇನ್ಸ್ ಪೆಕ್ಟರ್ ಹಾಗೂ ಅವರ ತಂಡ ಬಹುದೊಡ್ಡ ಕೆಲಸ ಮಾಡಿದೆ.ಈ ಬಗೆಯ ಕಾರ್ಯ ಜನರಲ್ಲಿ ಪೊಲೀಸ್ ಇಲಾಖೆಯಕುರಿತು ಧನಾತ್ಮಕ ಭಾವನೆಯನ್ನು ಮೂಡಿಸಲಿದೆ.ಡಿ.ಜಿ ಮತ್ತು ಐ.ಜಿ.ಪಿ, ಸಿದ್ದಲಿಂಗಯ್ಯ ಅವರ ಕಾಯಕವನ್ನು ಮೆಚ್ಚಿದ್ದಾರೆ.ಅಲ್ಲದೆ ಅವರಿಗೆ 25,000 ರೂ. ಬಹುಮಾನವನ್ನು ಘೋಷಿಸಿದ್ದಾರೆ.. ನಾನು ಸಿದ್ದಲಿಂಗಯ್ಯ ಮತ್ತು ಡೆಪ್ಯುಟಿ ಇನ್ಸ್ ಪೆಕ್ಟರ್ ವಿನಯ್ ಸೇರಿದಂತೆ ಮಹಿಳೆಯ ಜೀವ ಉಳಿಸಿದ್ದ ತಂಡಕ್ಕೆ 50,000 ರೂ ಬಹುಮಾನ ನೀಡಿದ್ದೇನೆ." ಪೋಲಿಸ್ ಕಮೀಷನರ್ ಟಿ. ಸುನೀಲ್ ಕುಮಾರ್ ಹೇಳಿದ್ದಾರೆ.
ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ಶೇಕರ್ ಗುರುವಾರ ಸಂಜೆ ತನುಜಾ ಎಂಬ ಶಿಕ್ಷಕಿಯ ಮೇಲೆ ಮಾರಕಾಸ್ತ್ರ ಬಳಸಿ ಹಲ್ಲೆ ಮಾಡಿದ್ದನು. ಆಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತನುಜಾ ಅವರಿಗೆ ಇನ್ಸ್ ಪೆಕ್ಟರ್ ಸಿದ್ದಲಿಲ್ಂಗಯ್ಯ ತಾವೇ ರಕ್ತ ನೀಡಿ ಪ್ರಾಣ ಕಾಪಾಡಿದ್ದರು. ಇನ್ನು ಸಿದ್ದಲಿಂಗಯ್ಯ ಅವರ ಕಾರ್ಯಕ್ಕೆ ಹಿರಿ, ಕಿರಿಯ ಪೋಲೀಸ್ ಅಧಿಕಾರಿಗಳಷ್ತೇ ಅಲ್ಲದೆ ಬೆಂಗಳೂರು ದಕ್ಷಿಣ ವಿಭಾಗದ  ಡಿಸಿಪಿ ಅಣ್ಣಾಮಲೈ ಸಹ ಶ್ಲಾಘನೆ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com