ಬೆಳಗಾವಿ: ಎಣ್ಣೆ ಪಾರ್ಟಿಯಿಂದ ಬೇಸತ್ತ ಜನ: ಮಧ್ಯ ನಿಷೇಧಿಸಲು ಮುಂದಾದ ಗ್ರಾಮಸ್ಥರು!

ಬೆಳಗಾವಿ ನಗರದಿಂದ 22 ಕಿಮೀ ದೂರದಲ್ಲಿರುವ ರಕ್ಕಸಕೊಪ್ಪ ಎಂಬ ಪಿಕ್ನಿಕ್ ಸ್ಥಳಕ್ಕೆ ಬರುವ ಪ್ರವಾಸಿಗರಿಂದ ವಾರಾಂತ್ಯದ ದಿನಗಳಲ್ಲಿ ಇಲ್ಲಿನ ನಿವಾಸಿಗಳಿಗೆ ತೀವ್ರ ...

Published: 17th March 2019 12:00 PM  |   Last Updated: 17th March 2019 02:02 AM   |  A+A-


Villagers of Rakkaskoppa discussing a ban on consumption of alcohol.

ಮಧ್ಯ ಮಾರಾಟ ನಿಷೇಧಕ್ಕೆ ಸಭೆ ನಡೆಸುತ್ತಿರುವ ಗ್ರಾಮಸ್ಥರು

Posted By : SD SD
Source : The New Indian Express
ಬೆಳಗಾವಿ: ಬೆಳಗಾವಿ ನಗರದಿಂದ 22 ಕಿಮೀ ದೂರದಲ್ಲಿರುವ ರಕ್ಕಸಕೊಪ್ಪ ಎಂಬ ಪಿಕ್ನಿಕ್ ಸ್ಥಳಕ್ಕೆ ಬರುವ ಪ್ರವಾಸಿಗರಿಂದ ವಾರಾಂತ್ಯದ ದಿನಗಳಲ್ಲಿ ಇಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. 

ಇಲ್ಲಿಗೆ ಬರುವ ಪ್ರವಾಸಿಗರು ಆಲ್ಕೋಹಾಲ್ ಪಾರ್ಟಿ ಮಾಡುತ್ತಾರೆ, ಇದರಿಂದಾಗಿ ಈ ಗ್ರಾಮಸ್ಥರು ಬೇಸತ್ತಿದ್ದು, ಗ್ರಾಮದಿಂದಲೇ ಮದ್ಯಮಾರಾಟವನ್ನು ನಿಷೇಧಿಸಬೇಕೆಂದು ನಿರ್ಧರಿಸಿದ್ದಾರೆ.

200 ಮನೆಗಳಿರುವ ಈ ಗ್ರಾಮದಲ್ಲಿರುವ 1.200 ಮಂದಿ ವಾಸವಿದ್ದಾರೆ, ರಕ್ಕಸಕೊಪ್ಪ ಜಲಾಶಯದ ಹಸಿರು ಸಹ್ಯಾದ್ರಿ ಪರ್ವತ ಶ್ರೇಣಿ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಇಡೀ ಬೆಳಗಾವಿಗೆ ಈ ರಕ್ಕಸಕೊಪ್ಪ ಜಲಾಶಯದಿಂದ ನೀರು ಪೂರೈಸಲಾಗುತ್ತದೆ. ಇಲ್ಲಿನ ಸ್ಥಳೀಯರು ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳಲು, ಇಲ್ಲಿಗೆ ಆಗಮಿಸುತ್ತಾರೆ, ಹೊರಗಿನಿಂದ ಬಂದವರು ಇಲ್ಲಿ ಆಲ್ಕೋಹಾಲ್ ಖರೀದಿಸುತ್ತಾರೆ, ಹೀಗಾಗಿ ಇಲ್ಲಿನ ಪಿಕ್ನಿಕ್ ವಾತಾವರಣವನ್ನು ಬದಲಾಯಿಸುತ್ತಿದೆ.

ಇಲ್ಲಿ ಮಧ್ಯ ಮಾರಾಟ ಅನಧಿಕೃತವಾಗಿದ್ದು ,ಉಪದ್ರವ ಸೃಷ್ಟಿಸುತ್ತಿದೆ. ಜೊತೆಗೆ ಜಗಳಗಳು ನಡೆಯುತ್ತಿವೆ, ಸ್ಥಳೀಯ ಸಾರಾಯಿ ಅಂಗಡಿ ಮಾಲೀಕರೊಂದಿಗೆ ಜೊತೆಗೂಡಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾರೆ, ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಹೊರಗಿನಿಂದ ಪ್ರವಾಸಿಗರು ಬರುತ್ತಾರೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಇಲ್ಲಿ ಬಂದು ಮಧ್ಯ ಸೇವಿಸಿ ನೆಮ್ಮದಿ ಹಾಳು ಮಾಡುವುದಕ್ಕೆ ನಮ್ಮ ಸಮ್ಮತಿಯಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಅಭಿಪ್ರಾಯ ಪಡುತ್ತಾರೆ,

ಹೀಗಾಗಿ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಮಧ್ಯ ಮಾರಾಟ ನಿಷೇಧಿಸಲು ಚರ್ಚೆ ನಡೆಸಲಾಗಿದೆ, ಲೋಕಸಭೆ ಚುನಾವಣೆ ನಂತರ ಇದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ತೀರ್ಮಾನಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp