ಬೇಸಿಗೆಯಲ್ಲಿ ನೀರಿನ ಬಳಕೆಗೆ ಕೊಪ್ಪಳದ ಈ ಗ್ರಾಮವೇ ಮಾದರಿ!

ಬೇಸಿಗೆಯಲ್ಲಿ ನೀರಿನ ಹಾಹಾಕಾರವನ್ನು ಹೇಗೆ ಬಗೆಹರಿಸಿಕೊಳ್ಲಬಹುದು ಎನ್ನುವುದನ್ನು ಕೊಪಳ ಜಿಲ್ಲೆಯ ಈ ಗ್ರಾಮವನ್ನು ನೋಡಿ ಕಲಿಯಬೇಕು.
ತುಗ್ಗಲದೋಣಿ ಗ್ರಾಮದ ಬಾವಿ
ತುಗ್ಗಲದೋಣಿ ಗ್ರಾಮದ ಬಾವಿ
ಕೊಪ್ಪಳ: ಬೇಸಿಗೆಯಲ್ಲಿ ನೀರಿನ ಹಾಹಾಕಾರವನ್ನು ಹೇಗೆ ಬಗೆಹರಿಸಿಕೊಳ್ಲಬಹುದು ಎನ್ನುವುದನ್ನು ಕೊಪಳ ಜಿಲ್ಲೆಯ ಈ ಗ್ರಾಮವನ್ನು ನೋಡಿ ಕಲಿಯಬೇಕು.ಕುಷ್ಟಗಿ ತಾಲೂಕಿನ ತುಗ್ಗಲದೋಣಿ ಗ್ರಾಮಸ್ಥರು ಜೀವನದ ಒಂದು ಮಾರ್ಗವಾಗಿ ನೀರಿನ ನ್ಯಾಯಯುತ ಬಳಕೆಯನ್ನು ಕಂಡುಕೊಂಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಶರಣಬಸವೇಶ್ವರ ದೇವಾಲಯದ ಮುಂದಿನ ಬಾವಿಯೇ ಗ್ರಾಮಸ್ಥರಿಗೆ ನೀರಿನ ಪ್ರಮುಖ ಮೂಲವಾಗಿದೆ.
ನಾವು ಬಾವಿಯ ಸುತ್ತಲೂ ಸ್ವಚ್ಚತೆ ಕಾಪಾಡಿಕೊಳ್ಳುತೇವೆ, ನೀರಿನ ನ್ಯಾಯೌತ ಬಳಕೆಗಾಗಿ ಗ್ರಾಮದ ಹಿರಿಯರು ಒತಾಯಿಸಿದ್ದಾರೆ ಎಂದು ಬಸವಂತಪ್ಪ ಅಂಗಡಿ, ಶರಣಪ್ಪ ಗಟ್ಟಿ ಒಂದೇ ದನಿಯಲ್ಲಿ ಹೇಳಿದ್ದಾರೆ.
ಇದೆಲ್ಲವೂ ಪ್ರಾರಂಭವಾಗಿದು ಎರಡು ವರ್ಷಗಳ ಕೆಳಗೆ, ಕೆಲವು ಯುವಕರು ಕೊಳವೆ ಬಾವಿಯ ನೀರನ್ನು "ವ್ಯರ್ಥ" ಮಾಡುತ್ತಿದ್ದದ್ದನ್ನು ಕಂಡ ಗ್ರಾಮದ ಹಿರಿಯರು ನೀರಿನ ಸದ್ಬಳಕೆ ಮಾರ್ಗವನ್ನು ಬೋಧಿಸಿದ್ದಾರೆ. ಅಲ್ಲದೆ ಕೊಳವೆ ಬಾವಿಯಿಂದ ನೀರು ಸಂಗ್ರಹಿಸಿ ಅದನ್ನು ಬಾವಿಯಲ್ಲಿ ಶೇಖರಿಸಲು ತೀರ್ಮಾನಿಸಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಅವರು ವಿದ್ಯುತ್ ಪಂಪ್ ಸೆಟ್ ಬಳಸಿ ನೀರನ್ನೆತ್ತುವ ಬದಲು ರಾಟೆ ಹಾಗೂ ಕೊಡಪಾನ ಬಳಸಿಯೇ ನೀರೆತ್ತುವಂತೆ ಅವರು ಗ್ರಾಮಸ್ಥರೊಗೆ ಒತ್ತಾಯಿಸಿದ್ದಾರೆ. ಹೀಗೆ ಮಾಡುವುದರಿಂದ ಬೇಸಿಗೆಯಲ್ಲಿ  ನೀರಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದೆಂದು ಅವರು ಕಂಡುಕೊಂಡರು. ಸಾಮಾನ್ಯವಾಗಿ ಮೋಟಾರ್ ನಿಂದ ನೀರೆತ್ತದೆ ಕೊಡಪಾನ ಬಳಸಿ ಎತ್ತುವದರಿಂಡ ಭೂಮಿಯಲ್ಲಿನ ನೀರಿನ ಸವಕಳಿ ಕಡಿಮೆಯಾಗಲಿದೆ ಎಂದು ಅವರು ಭಾವಿಸಿದ್ದಾರೆ.
1,500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕಳೆದೆರಡು ವರ್ಷಗಳಿಂದ ಈ ಕ್ರಮ ಅನುಸರಿಸಲಾಗುತ್ತಿದೆ.ಗ್ರಾಮ ಪಂಚಾಯತ್ ಅಧಿಕಾರಿಯ ಪ್ರಕಾರ, ಈ ಗ್ರಾಮವು ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ಕಾಣುತ್ತಿಲ್ಲ.ಇನ್ನು ಈ ವಿಚಾರದಲ್ಲಿ ಪಂಚಾಯತ್ ಸಹ ಗ್ರಾಮಸ್ಥರಿಗೆ ಸಹಕರಿಸಿದೆ ಎಂದು ಗ್ರಾಮದ ನಿವಾಸಿ ಕಮಲಮ್ಮ ಹೇಳಿದ್ದಾರೆ.
ಬಾವಿಯ ಸುತ್ತಲೂ ಶುಚಿತ್ವವನ್ನು ಕಾಫಾಡಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಲಲಾಗಿದ್ದು  ಗ್ರಾಮಸ್ಥರು ಬಾವಿಯ ನೀರೆತ್ತುವ ವೇಳೆ ಪಾದರಕ್ಷೆ ಧರಿಸುವುದಿಲ್ಲ. ಬಟ್ಟೆ ಮತ್ತು ಪ್ರಾಣಿಗಳನ್ನು ತೊಳೆಯಲು ಇಲ್ಲಿ ಅನುಮತಿಸುವುದಿಲ್ಲ."ನೀರನ್ನು ಎತ್ತುವ ಸಂದರ್ಭದಲ್ಲಿ ಒಮ್ಮೆ ಒಂದು ವ್ಯಕ್ತಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗುವುದು" ಶಾಲಾ ವಿದ್ಯಾರ್ಥಿಯೊಬ್ಬ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com