ಬೆಂಗಳೂರು: ಹಸೆಮಣೆ ಏರುವ ಆಸೆ ತೋರಿಸಿ ಆನ್ಲೈನ್ ವಧುವಿನಿಂದ 18 ಲಕ್ಷ ವಂಚನೆ!

ತಾನು ವಿವಾಹವಾಗಬೇಕೆಂಬ ಉದ್ದೇಶದಿಂಡ ಮ್ಯಾಟ್ರಿಮೊನಿಯಲ್ ಜಾಲತಾಣದಲ್ಲಿ ಟೆಕ್ಕಿಯೊಬ್ಬ ನೊಂದಾಯಿಸಿಕೊಂಡು ಯುವತಿಯ ಕುಟುಂಬಕ್ಕೆ 18 ಲಕ್ಷ ರೂ ನೀಡಿ ಭಾರೀ ವಂಚನೆಗೆ ಒಳಗಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ತಾನು ವಿವಾಹವಾಗಬೇಕೆಂಬ ಉದ್ದೇಶದಿಂಡ ಮ್ಯಾಟ್ರಿಮೊನಿಯಲ್ ಜಾಲತಾಣದಲ್ಲಿ ಟೆಕ್ಕಿಯೊಬ್ಬ ನೊಂದಾಯಿಸಿಕೊಂಡು ಯುವತಿಯ ಕುಟುಂಬಕ್ಕೆ 18 ಲಕ್ಷ ರೂ ನೀಡಿ ಭಾರೀ ವಂಚನೆಗೆ ಒಳಗಾಗಿದ್ದಾರೆ. ಬೆಂಗಳೂರು ಎಲೆಕ್ಟ್ರಾನಿಕ್ಸ್ ಸಿಟಿಯ ನಿವಾಸಿ ಜ್ಯೋತಿ ಕೃಷ್ಣನ್ (35)  ಹೀಗೆ ವಂಚನೆಗೀಡಾದ ಯುವತ. ಇವರು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದು ಮಾರ್ಚ್ 2013 ರಂದು ಮ್ಯಾಟ್ರಿಮೊನಿಯಲ್ ವೆಬ್ ತಾಣದಲ್ಲಿ ಮ್ಮನ್ನು ನೋಂದಾಯಿಸಿಕೊಂಡಿದ್ದು ರಮ್ಯಾ ನಾಯರ್ ಎಂಬಾಕೆಯ ಪರಿಚಯ ಮಾಡಿಕೊಂಡಿದ್ದರು.
ಕೃಷ್ಣನ್ ತಾವು ರಮ್ಯಾ ಪ್ರೊಫೈಲ್ ನಲ್ಲಿರುವ ಸಂಖ್ಯೆಗೆ ಕರೆ ಮಾಡಿದಾಗ ಆಕೆಯ ತಂದೆ ಕುಂಜೀರಾಮನ್ ಸಂಪರ್ಕಕ್ಕೆ ಬಂದಿದ್ದರು.ಆಗ ಕೃಷ್ಣನ್ ತಾವು ಅವರ ಮಗಳ ಪ್ರೊಫೈಲ್ ಇಷ್ತಪಟ್ಟಿದ್ದಾಗಿ ಹೇಳೀದಾಗ ಕುಂಜೀರಾಮನ್ ಸಹ ತಮ್ಮ ಮಗಳಿಗೆ ನಿಮ್ಮನ್ನು ವಿವಾಹವಾಗಲು ಅಡ್ಡಿ ಇಲ್ಲ ಎಂದಿದ್ದಾರೆ. ಆದರೆ ಆಕೆ ಯುಪಿಎಸ್ಸಿ ಪರೀಕ್ಷೆ ಕಟ್ಟಿದ್ದು ಅವಳಿಗೆ ಐಎಎಸ್ ಅಧಿಕಾರಿಯಾಗಬೇಕೆನ್ನುವ ಮಹತ್ವಾಕಾಂಕ್ಷೆ ಇದೆ. ಇದೀಗ ಆಕೆ ಪರೀಕ್ಷೆ ತಯಾರಿಯಲ್ಲಿರುವ ಕಾರಣ ಎರಡು ವರ್ಷಗಳ ಬಳಿಕ ವಿವಾಹ ನೆರವೇರಿಸಲು ತೀರ್ಮಾನಿಸಿದೇವೆ ಎಂದಿದ್ದಾರೆ. ಅದರಂತೆ ಕೃಷ್ಣನ್ ತನ್ನ ಬಾಳಸಂಘಾತಿಯನ್ನು ವಿವಾಹವಾಗಲು ಎರಡು ವರ್ಷ ಕಾಯಲು ಸಹ ಒಪ್ಪಿಕೊಂಡಿದ್ದಾರೆ.
ನಾಯರ್ ಮತ್ತು ಕುಂಜೀರಾಮನ್ ನಿಯಮಿತವಾಗಿ ಕೃಷ್ಣನ್ ಜೊತೆ ಸಂಪರ್ಕದಲ್ಲಿದ್ದರು. ಹಾಗೆಯೇ ಪರಸ್ಪರ ವಿಶ್ವಾಸ ಬೆಳೆಸಿಕೊಂಡ ತಂದೆ-ಮಗಳು ತಮ್ಮ ಕುಟುಂಬದ ಆರ್ಥಿಕ, ಸಾಂಶರಿಕ ಸಮಸ್ಯೆಗಳನ್ನು ಹೇಳಿಕೊಂಡು ಕೃಷ್ಣನ್ ಅವರ ಮುಂದೆ ಕೆಲವಷ್ಟು ಹಣದ ಬೇಡಿಕೆಯನ್ನಿಟ್ಟಿದ್ದಾರೆ. ಇದಕ್ಕೆ ಪ್ರಾರಂಭದಲ್ಲಿ ಕೃಷ್ಣನ್ ಕುಂಜಿರಾಮನ್ ಅವರ ಖಾತೆಗೆ  3 ಲಕ್ಷ ರೂ. ಜಮೆ ಮಾಡಿದ್ದಾರೆ. ಇದಾಗಿ ಕೆಲವು ತಿಂಗಳ ಬಳಿಕ ಮತ್ತೆ ಕರೆ ಮಾಡಿದ್ದ ಕುಂಜಿರಾಮನ್ ತಮಗೆ ಆರೋಗ್ಯ ಸಮಸ್ಯೆಗಳಿದೆ ಎಂದು ಹೇಳಿದ್ದಲ್ಲದೆ ಮತ್ತೆ  3 ಲಕ್ಷ ರೂ. ನಿಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಂತೆ ಕೃಷ್ಣನ್ ಮತ್ತೆ  3 ಲಕ್ಷ ರೂ.ಹಣ ನೀಡಿದ್ದಾರೆ.
ರಜೆ ಮೇಲೆ ಭಾರತಕ್ಕೆ ಆಗಮಿಸಿದಾಗ ಕೃಷ್ಣನ್ ಹ್ಜತೆಗೆ ತಮ್ಮ ಮಗಳು ರಮ್ಯಾಳ ನಿಶ್ಚಿತಾರ್ಥ ನೆರವೇರಿಸುವ ಭರವಸೆ ನೀಡಿದ್ದ ಕುಂಜಿರಾಮನ್ ಮಾತನ್ನು ಕೃಷ್ಣನ್ ನಂಬಿದ್ದಾರೆ. ಹಾಗೆಯೇ ಸಮಯ ಕಳೆದಿದ್ದು ಮೂರು ವರ್ಷಗಳ ಬಳಿಕವೂ ಕೃಷ್ಣನ್ ಅವರಿಗೆ ಮದುವೆಗಾಗಿ ಇನ್ನಷ್ಟು ಅವಧಿ ಕಾಯುವಂತೆ ಹೇಳಿದ್ದಾರೆ. ಅದೇ ವೇಳೆ  2015 ರಿಂದ 2017ರ ನಡುವೆ ವೈದ್ಯಕೀಯ ತುರ್ತು ಅಗತ್ಯದ ನೆಪದಲ್ಲಿ ಕುಂಜಿರಾಮನ್ ಕೃಷ್ಣನ್ ಅವರಿಂದ ಸುಮಾರು 10 ಲಕ್ಷ ರೂ. ಹಣ ಪಡೆಇದ್ದಾರೆ.
ಇಷ್ಟಾಗುತ್ತಲೇ ರಮ್ಯಾ ನಾಯರ್ ಹಾಗೂ ಆಕೆಯ ತಂದೆ ಕುಂಜಿರಾಮನ್ ತಮ್ಮ ಮೊಬೈಲ್ ಸಂಖ್ಯೆಗಳನ್ನು ಬದಲಿಸಿಕೊಂಡಿದ್ದಾರೆ. ಇದರಿಂದ ಸಂಶಯಗೊಂಡ ಕೃಷ್ಣನ್ ಬೆಂಗಳೂರಿಗೆ ಆಗಮಿಸಿದ್ದಾರೆ. ಬಳಿಕ ರಮ್ಯಾ ನಾಯರ್ ಕುಟುಂಬದ ಜತೆ ಮಾತನಾಡಿದಾಗ ಅವರು ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಹಾಗೂ ವಿವಾಘ ನೆರವೇರಿಸಿಕೊಡುವುದಾಗಿ ಮತ್ತೆ ಭರವಸೆ ಇತ್ತಿದ್ದಾರೆ.  ಇದಾಗಿ ಫೆ.20ರಂದು  ಮತ್ತೆ ಕೃಷ್ಣನ್, ರಮ್ಯಾ ನಾಯರ್ ಮನೆಗೆ ತೆರಳಿದಾಗ ಅವರಾಗಲೇ ಮನೆ ಕಾಲಿ ಮಾಡಿಕೊಂಡು ಹೋಗಿರುವುದು ಪತ್ತೆಯಾಗಿದೆ.  ಆಘಾತಗೊಂಡ ಕೃಷ್ಣನ್ ನಾಯರ್ ಕುಟುಂಬದ ವಿರುದ್ಧ ವಂಚನೆ, ಪಿತೂರಿ ಪ್ರಕರಣವನ್ನು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com