ಉಪನ್ಯಾಸಕರಿಗೆ ಸಿಹಿ ಸುದ್ದಿ: 7ನೇ ವೇತನ ಆಯೋಗ ಶಿಫಾರಸಿಗೆ ರಾಜ್ಯ ಸರ್ಕಾರ ಅಸ್ತು

ಕಡೆಗೂ ರಾಜ್ಯ ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ಉಪನ್ಯಾಸಕರಿಗೆ ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರುಇಗೆ ತರಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕಡೆಗೂ ರಾಜ್ಯ ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ಉಪನ್ಯಾಸಕರಿಗೆ ಸರ್ಕಾರ ಏಳನೇ ವೇತನ ಆಯೋಗದ ಶಿಫಾರಸುಗಳನ್ನು  ಜಾರುಇಗೆ ತರಲು ಮುಂದಾಗಿದೆ. ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ವೇತನ ಪಾವತಿ ನಿಯಮದಡಿ ವೇತನ ಪಡೆಯುವ ಉಪನ್ಯಾಸಕರಿಗೆ ಪರಿಷ್ಕೃತ ವೇತನ ಪ್ರಮಾಣದ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಅಧಿಕೃತ ಆದೇಶ ನೀಡಿದೆ.
ಇದರೊಂದಿಗೆ, `15,000 ಮತ್ತು` 35,000 ವೇತನ ಪಡೆಯುತ್ತಿದ್ದ ಉಪನ್ಯಾಸಕರು ಈಗ ತಿಂಗಳಿಗೆ 57,700 ರೂ. ವೇತನ ಪಡೆಯಲಿದ್ದಾರೆ.ಉನ್ನತ ಶಿಕ್ಷಣ ಇಲಾಖೆಯ ವಿವರಗಳ ಪ್ರಕಾರ, ಉಪನ್ಯಾಸಕರ ಗರಿಷ್ಠ ವೇತನ 1.82 ಲಕ್ಷ. ಆಗಿರಲಿದೆ.
ಇನ್ನು ಹಿರಿಯ ಸಹಾಯಕ ಪ್ರಾದ್ಯಾಪಕರು 39,000 ರು. ಬದಲಿಗೆ 68,900  ರು. ವೇತನ ಪಡೆಯಲಿದ್ದಾರೆ. ಇವರಿಗೆ ಗರಿಷ್ಠ 2,05, 500 ರು. ವೇತನಪಡೆಯಲಿದ್ದಾರೆ. ಅಸೋಸಿಯೇಟ್ ಪ್ರಾಧ್ಯಾಪಕರು ಈಗ 1,31,400 ರಿಂದ 2,17,100 ವರೆಗೆ ಪಡೆಯಲಿದ್ದಾರೆ.
ಸರ್ಕಾರದ ಅಧಿಸೂಚನೆ ಪ್ರಕಾರ, "ಈ ಪರಿಷ್ಕೃತ ವೇತನ ಶಿಕ್ಷಕರು, ಗ್ರಂಥಾಲಯ ಸಿಬ್ಬಂದಿಗಳು ಶಾರೀರಿಕ ಶಿಕ್ಷಣ ಸಿಬ್ಬಂದಿ ಮತ್ತು ಸರ್ಕಾರದ ಸಂಸ್ಥೆಗಳಲ್ಲಿ ಸಮಾನ ಕೇಡರ್ ಸಿಬ್ಬಂದಿಗೆ ಮಾತ್ರ ಅನ್ವಯಿಸಲಿದೆ. ಶಿಕ್ಷಕರಾಗಿ ನೇಮಕಾತಿಗೆ ಕನಿಷ್ಠ ಅರ್ಹತೆ  ಮೇಲೆ ಯುಜಿಸಿ ನಿಯಮಾವಳಿಗಳನ್ನು ಪೂರೈಸದವರಿಗೆ ಈ ಪರಿಷ್ಕೃತ ವೇತನ ಪ್ರಮಾಣ ಅನ್ವಯಿಸುವುದಿಲ್ಲ. "
"ನಾವು ಇದಕ್ಕಾಗಿ ಬಹುದೀರ್ಘಕಾಲದಿಂದ ಕಾಯುತ್ತಿದ್ದೆವು. ಈಗ ಬಹು ಸಂತೋಷವಾಗಿದ್ದೇವೆ," ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಪ್ರೊ. ಮಂಜುನಾಥ್  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com