ಸರ್ಕಾರಿ ಪ್ರಾಧ್ಯಾಪಕರಿಗೆ ಬಂಪರ್; 7ನೇ ವೇತನಾ ಆಯೋಗ ಶಿಫಾರಸ್ಸು ಜಾರಿ

ಕರ್ನಾಟಕ ಸರ್ಕಾರ ಸರ್ಕಾರಿ ಪ್ರಾಧ್ಯಾಪಕರಿಗೆ ಸಿಹಿಸುದ್ದಿ ನೀಡಿದ್ದು, 2016 ರ ಜನವರಿ 1 ರಿಂದ ಪೂರ್ವಾನ್ವಯವಾಗುವಂತೆ ಯುಜಿಸಿ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕ ಸರ್ಕಾರ ಸರ್ಕಾರಿ ಪ್ರಾಧ್ಯಾಪಕರಿಗೆ ಸಿಹಿಸುದ್ದಿ ನೀಡಿದ್ದು, 2016 ರ ಜನವರಿ 1 ರಿಂದ ಪೂರ್ವಾನ್ವಯವಾಗುವಂತೆ ಯುಜಿಸಿ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಯುಜಿಸಿಯ 7 ನೇ ವೇತನಾ ಆಯೋಗದ ಶಿಫಾರಸಿನಂತೆ ಇದೀಗ ಸರ್ಕಾರಿ ಪ್ರಾಧ್ಯಾಪಕರು ಹಾಗೂ ಸಹ ಪ್ರಾಧ್ಯಾಪಕರ ಸರಾಸರಿ ಶೇ. 22 ರಿಂದ 28 ರಷ್ಟು ವೇತನ ಪರಿಷ್ಕರಣೆಯಾಗಿದೆ. ಸಿಎಂ ಹೆಚ್.ಡಿ. ಕುಮಾರಸ್ವಾಮಿ ಫೆ. 8 ರಂದು ಮಂಡಿಸಿದ ಬಜೆಟ್ ನಲ್ಲಿ ಸರ್ಕಾರಿ/ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿವಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ತತ್ಸಮಾನ ವೃಂದಗಳ ವೇತನ ಭತ್ಯೆಗಳನ್ನು ಕೇಂದ್ರದ 7 ನೇ ವೇತನ ಆಯೋಗದ ಶಿಫಾರಸುಗಳನ್ವಯ ಪರಿಷ್ಕರಿಸಲಾಗುವುದು ಎಂದು ಘೋಷಿಸಿದ್ದರು.
ಅದರಂತೆ, ಕಳೆದ ಸಚಿವ ಸಂಪುಟ ಸಭೆಯಲ್ಲಿ ಉದ್ದೇಶಿತ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿತ್ತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದು ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
ಮಾಸಿರ 15 ಸಾವಿರ ರೂಗಳಿಂದ 35 ಸಾವಿರ ರೂಗಳ ವೇತನ ಪಡೆಯುತ್ತಿದ್ದ ಪ್ರಾಧ್ಯಾಪಕರು ಇದೀಗ 57,700 ರೂ ಗಳಷ್ಟು ವೇತನ ಪಡೆಯಲಿದ್ದಾರೆ. ಇಲಾಖೆಯ ಮೂಲಗಳು ನೀಡಿರುವ ಮಾಹಿತಿ ಅನ್ವಯ ಗರಿಷ್ಟ ವೇತನ ಮಿತಿ 1.82 ಲಕ್ಷ ರೂಗಳಾಗಿದೆ. ಅಂತೆಯೇ 39,000 ರೂ ವೇತನ ಪಡೆಯುತ್ತಿದ್ದ ಹಿರಿಯ ಪ್ರಾಧ್ಯಾಪಕರು 68,900 ರಿಂದ ಗರಿಷ್ಟ 2,05, 500 ರೂ ವೇತನ ಪಡೆಯಲಿದ್ದಾರೆ. ಅಂತೆಯೇ ಸಹಾಯಕ ಪ್ರಾದ್ಯಾಪಕರೂ ಕೂಡ 1,31,400 ರೂ ದಿಂದ 2,17,100 ರೂವರೆಗೂ ವೇತನ ಪಡೆಯಲಿದ್ದಾರೆ. 
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಪ್ರೊ.ಮಂಜುನಾಥ್ ಅವರು, ಸರ್ಕಾರದ ನಿರ್ಧಾರದಿಂದಾಗಿ ಸಂತಸವಾಗಿದೆ. ಈ ನಿರ್ಧಾರಕ್ಕಾಗಿ ನಾವು ಸಾಕಷ್ಟು ವರ್ಷಗಳಿಂದ ಕಾಯುತ್ತಿದ್ದೆವು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com