ಚಿತ್ರದುರ್ಗ: ನ್ಯಾಯಾಲಯ ಕಟ್ಟಡದಿಂದ ಹಾರಿ ಅತ್ಯಾಚಾರ ಪ್ರಕರಣದ ಕೈದಿ ಸಾವು

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಆರೋಪಿಗಳಿಬ್ಬರು ಕಟ್ಟಡದಿಂದ ಜಿಗಿದಿದ್ದು, ಈ ವೇಳೆ ಒಬ್ಬ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ...

Published: 21st March 2019 12:00 PM  |   Last Updated: 21st March 2019 12:34 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : SD SD
Source : The New Indian Express
ಚಿತ್ರದುರ್ಗ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಆರೋಪಿಗಳಿಬ್ಬರು ಕಟ್ಟಡದಿಂದ ಜಿಗಿದಿದ್ದು, ಈ ವೇಳೆ ಒಬ್ಬ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಿರೇಗುಂಟನೂರು ಗ್ರಾಮದ ಸುನಿಲ್ ಮೃತ ವ್ಯಕ್ತಿ. ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ
ಸುನಿಲ್ ಗೆ ಮಣಿಕಂಠ, ವೀರಭದ್ರ, ಅವಿನಾಶ್ ಸಾಥ್ ನೀಡಿದ್ದರು. ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. 

ಜಿಲ್ಲಾ ಕೋರ್ಟ್ ನಲ್ಲಿ ವಿಚಾರಣೆ ನಡೆದು, ಮೊದಲನೇ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದ್ದು, ಉಳಿದ ಆರೋಪಿಗಳಿಗೆ 10 ವರ್ಷ ಸಜೆ, 10,000 ರೂ. ದಂಡ ವಿಧಿಸಲಾಗಿದೆ.

ನ್ಯಾಯಾಧೀಶರು ತೀರ್ಪು ಪ್ರಕಟಿಸಿದ ಬಳಿಕ ಸುನಿಲ್ ಮತ್ತು ವೀರಭದ್ರ ತಪ್ಪಿಸಿಕೊಳ್ಳಲು ಯತ್ನಿಸಿ ಕೋರ್ಟ್ ಕಟ್ಟಡದ ಮೇಲಿನಿಂದ ಹಾರಿದ್ದಾರೆ. ಕೈಯಲ್ಲಿ ಬೇಡಿ ಹಾಕಿದ್ದ ಕಾರಣ, ಸುನಿಲ್ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ವೀರಭದ್ರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp