ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬೈಕನ್ನೇರಿ ರಾಜ್ಯ ಪ್ರವಾಸ ಹೊರಟ!

ಮುಂಬರುವ ಲೋಕಸಭೆ ಚುನಾವಣೆ ವೇಳೆ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವ್ಯಕ್ತಿಯೊಬ್ಬ ರಾಜ್ಯಾದ್ಯಂತ ಮೋಟಾರ್ ಸೈಕಲ್ ಏರಿ ಪ್ರವಾಸ ಮಾಡುತ್ತಿದ್ದಾರೆ.
ಬಸವರಾಜ್ ಎಸ್ ಕಲ್ಲುಸಕ್ಕರೆ
ಬಸವರಾಜ್ ಎಸ್ ಕಲ್ಲುಸಕ್ಕರೆ
ಶಿವಮೊಗ್ಗ: ಮುಂಬರುವ ಲೋಕಸಭೆ ಚುನಾವಣೆ ವೇಳೆ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವ್ಯಕ್ತಿಯೊಬ್ಬ ರಾಜ್ಯಾದ್ಯಂತ ಮೋಟಾರ್ ಸೈಕಲ್ ಏರಿ ಪ್ರವಾಸ ಮಾಡುತ್ತಿದ್ದಾರೆ.  ಬೆಂಗಳೂರು ಮೂಲದ ಸಮರ್ಥ ಕನ್ನಡಿಗರು ಸಂಘದ ಮುಖ್ಯ ಸಂಚಾಲಕ ಬಸವರಾಜ್ ಎಸ್ ಕಲ್ಲುಸಕ್ಕರೆ ಅವರು ಹೀಗೆ ಬೈಕ್ ಮೇಲೇರಿ ರಾಜ್ಯ ಪ್ರವಾಸ ಮಾಡುವ ಮೂಲಕ ಜನರಿಗೆ ಮತದಾನದತ್ತ ಆಸಕ್ತಿ ಮೂಡಿಸುತ್ತಿದ್ದಾರೆ. 
ಬುಧವಾರ ಅವರು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ವೇಳೆ ಪತ್ರಿಕೆಯೊಡನೆ ಮಾತನಾಡಿದ್ದಾರೆ. ಅವರು ಇದುವರೆಗೆ 20  ಜಿಲ್ಲೆಗಳ ಪ್ರವಾಸ ಮುಗಿಸಿದ್ದಾರೆ. ಸುಮಾರು 4,000 ಕಿ.ಮೀ. ಪ್ರಯಾಣಿಸಿದ್ದಾರೆ. ಬೆಂಗಳೂರಿಗೆ ಹಿಂತಿರುಗುವುದಕ್ಕೆ ಮುನ್ನ ಈ ಮಾಸಾಂತ್ಯದ ವೇಳೆಗೆ ಇನ್ನೂ 10 ಜಿಲ್ಲೆಗಳಿಗೆ ತೆರಳಲು ಯೋಜಿಸುತ್ತಿದ್ದಾರೆ. "ಫೆಬ್ರವರಿ 24 ರಂದು ನಾನು ಬೆಂಗಳೂರಿನಿಂದ ನನ್ನ ಪ್ರಯಾಣವನ್ನು ಆರಂಭಿಸಿದೆ. ಜಿಲ್ಲೆಯ ಮತ್ತು ತಾಲೂಕು ಪ್ರಧಾನ ಕಚೇರಿ ಮತ್ತು ಗ್ರಾಮಗಳಲ್ಲಿ ಜನರನ್ನು ಭೇಟಿಯಾಗಿ ಅವರು ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಬೇಕೆಂದು ಕೇಳುತ್ತಿದ್ದೇನೆ. ಎಂದು ಅವರು ಹೇಳಿದರು.
ಇನ್ನು ಕಲ್ಲುಸಕ್ಕರೆಯವರು ಮತದಾನ ಜಾಗೃತಿ ಮಾತ್ರವಲ್ಲದೆ ತಾವು ರಕ್ತದಾನ, ಪರಿಸರ ಜಾಗೃತಿಯ ಕುರಿತೂ ಜನರಿಗೆ ತಿಳುವಳಿಕೆ ನೀಡುತ್ತಿದ್ದಾರೆ. ಬಜಾಜ್ ಅವೆಂಜರ್ ಕ್ರೂಸ್ 220  ಬೈಕನ್ನೇರಿ ಸವಾರಿ ಹೊರಟಿರುವ ಇವರು ಮತದಾನದ ಜಾಗೃತಿಗಾಗಿ  ಗ್ರಾಮ ಪಂಚಾಯತ್ ಕಛೇರಿ, ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿಗೆ ಭೇಟಿ ನೀಡಿ ಕಾರ್ಯಕ್ರಮ ನೀಡುತ್ತಿದ್ದಾರೆ. ಇದರಿಂದ 100 ಶೇ ಮತದಾನವಾಗಬೇಕು ಎನ್ನುವುದನ್ನು ಅವರು ಖಾತರಿ ಪಡಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದ್ದಾರೆ.
"ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಹಳ್ಳಿಗಳಲ್ಲಿಯೂ ನಾನು ಭಾರೀ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದೇನೆ. ರಾಜ್ಯದ ಉಳಿದ ಭಾಗವನ್ನು ತಲುಪಲು ಮುಂದೆ ಮತ್ತೆ  3,000 ಕಿ.ಮೀ. ಪ್ರಯಾಣಿಸುತ್ತೇನೆ '' ಎಂದು ಅವರು ಹೇಳಿದರು. ಮತದಾನ ಕುರಿತು ತಾವು ಜಾಗೃತಿ ಮೂಡಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ ಎಂದ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಸಹ ತಾವಿದನ್ನು ಮಾಡಿದ್ದಾಗಿ ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com