ವಿಧೇಯತೆಗೆ ಮತ್ತೊಂದು ಹೆಸರಾಗಿದ್ದ ಸಿ.ಎಸ್. ಶಿವಳ್ಳಿ ಅವರ ರಾಜಕೀಯ ಗುರು ಬಂಗಾರಪ್ಪ!

ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನಸಾಮಾನ್ಯರೊಂದಿಗೆ ಗುರುತಿಸಿಕೊಂಡ,ಅವರ ಕಷ್ಟ-ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಜನನಾಯಕರಾಗಿ ...

Published: 23rd March 2019 12:00 PM  |   Last Updated: 23rd March 2019 12:18 PM   |  A+A-


Shivalli

ಶಿವಳ್ಳಿ

Posted By : SD SD
Source : The New Indian Express
ಹುಬ್ಬಳ್ಳಿ: ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನಸಾಮಾನ್ಯರೊಂದಿಗೆ ಗುರುತಿಸಿಕೊಂಡ,ಅವರ ಕಷ್ಟ-ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಜನನಾಯಕರಾಗಿ ಗುರುತಿಸಿಕೊಂಡವರು ಸಚಿವ ಸಿ.ಎಸ್‌.ಶಿವಳ್ಳಿ, ರಾಜಕೀಯ ಸರ್ಕಲ್ ನಲ್ಲಿ ಅತಿ ವಿನಮ್ರವಾಗಿ ನಡೆದುಕೊಳ್ಳುತ್ತಿದ್ದ ಜಂಟಲ್ ಮ್ಯಾನ್ ಎಂದು ಅವರ ಆಪ್ತ ವಲಯದಲ್ಲಿ ಕೇಳಿ ಬರುವ ಮಾತು.

ಸಾಧಾರಣವಾಗಿ ವಿಧ್ಯಾಭ್ಯಾಸ ಪಡೆದಿದ್ದ ಶಿವಳ್ಳಿ ಡಾ. ರಾಜ್ ಕುಮಾರ್ ಯುವಕ ಸಂಘ ಆರಂಭಿಸುವ ಮೂಲಕ ತಮ್ಮ ಸಾರ್ವಜನಿಕ ಜೀವನ ಆರಂಭಿಸಿದ್ದರು,

1999ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಯತ್ನಿಸಿದ್ದರು. ಬಂಗಾರಪ್ಪ ಅವರು ಸಾಕಷ್ಟು ಯತ್ನಿಸಿದ್ದರೂ ಶಿಷ್ಯನಿಗೆ ಟಿಕೆಟು ಕೊಡಿಸಲು ಸಾಧ್ಯವಾಗಿರಲಿಲ್ಲ. ಬಂಗಾರಪ್ಪನವರ ಪ್ರೋತ್ಸಾಹದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಿವಳ್ಳಿ, ಘಟಾನುಘಟಿಗಳನ್ನು ಮಣಿಸಿ ಸುಮಾರು 10,508 ಮತಗಳ ಅಂತರದಿಂದ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

1994ರ ವಿಧಾನಸಭೆ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದ ಅಭ್ಯರ್ಥಿಯಾಗಿಸಿದ್ದರು. ಆ ಚುನಾವಣೆಯಲ್ಲಿ ಶಿವಳ್ಳಿಯವರು 19,700ಕ್ಕೂ ಹೆಚ್ಚು ಮತ ಪಡೆದು 2ನೇ ಸ್ಥಾನ ಪಡೆಯುವ ಮೂಲಕ ಕ್ಷೇತ್ರದ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

2004ರ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ತೀವ್ರ ಯತ್ನ ನಡೆಸಿದರೂ ಸಿಗದಿದ್ದಾಗ ಮತ್ತೂಮ್ಮೆ ಪಕ್ಷೇತರರಾಗಿ ಸ್ಪರ್ಧಿಸಿ ಸೋಲುಂಡಿದ್ದರು. 2008ರಲ್ಲಿ ಕಾಂಗ್ರೆಸ್‌ ನಿಂದ ಟಿಕೆಟು ದೊರೆತಿತ್ತಾದರೂ ಗೆಲುವು ಸಾಧ್ಯವಾಗಿರಲಿಲ್ಲ. 2013ರಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ, ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ವಿಧಾನಸಭೆಗೆ ತೆರಳಿದ್ದರು. 2018ರಲ್ಲೂ ಸತತ ಎರಡನೇ ಹಾಗೂ ಒಟ್ಟಾರೆ ಮೂರನೇ ಗೆಲುವು ಪಡೆದಿದ್ದರು. 

ಕುರುಬ ಸಮುದಾಯದವರು ಎಂಬ ಕಾರಣಕ್ಕೆ ಶಿವಳ್ಳಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 
Stay up to date on all the latest ರಾಜ್ಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp