ಮೋದಿ ಜೀವನಾಧಾರಿತ ಚಿತ್ರ ಬಿಡುಗಡೆ: ರಾಜ್ಯ ಕಾಂಗ್ರೆಸ್ ನಾಯಕರಿಂದ ಚುನಾವಣಾ ಆಯೋಗಕ್ಕೆ ಮನವಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ವಿವೇಕ್ ಒಬೆರಾಯ್ ಅಭಿನಯದ "ನರೇಂದ್ರ ಮೋದಿ" ಚಿತ್ರವು ಯಾವುದೇ ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿರುವ ದೃಶ್ಯಗಳನ್ನು ಹೊಂದಿದೆಯೇ....
ನರೇಂದ್ರ ಮೋದಿ ಚಿತ್ರದಲ್ಲಿ ವಿವೇಕ್ ಒಬೆರಾಯ್
ನರೇಂದ್ರ ಮೋದಿ ಚಿತ್ರದಲ್ಲಿ ವಿವೇಕ್ ಒಬೆರಾಯ್
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ವಿವೇಕ್ ಒಬೆರಾಯ್ ಅಭಿನಯದ "ನರೇಂದ್ರ ಮೋದಿ" ಚಿತ್ರವು ಯಾವುದೇ ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿರುವ ದೃಶ್ಯಗಳನ್ನು ಹೊಂದಿದೆಯೇ, ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ಮೇಲೆ ಈ ಚಿತ್ರ ಯಾವುದೇ ಪ್ರಭಾವ ಬೀರುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗ್ಗಿ ಏಪ್ರಿಲ್ 5 ರಂದುಚುನಾವಣಾ ಆಯೋಗ ಚಿತ್ರವನ್ನು ಪೂರ್ವವೀಕ್ಷಣೆ(preview ) ಮಾಡಬೇಕೆಂದು  ಕರ್ನಾಟಕ ಕಾಂಗ್ರೆಸ್ ಶನಿವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದೆ.
ಚಿತ್ರದ ಟ್ರೇಲರ್ ಆದ್ಗರಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಚಿತ್ರದಲ್ಲಿ ಹಿಂಸೆಯನ್ನು ವೈಭವೀಕರಿಸಲಾಗಿದೆ, ರಾಜಕೀಯ ಪಕ್ಷಗಳ ನಾಯಕರ ಜೀವನಚರಿತ್ರೆ ಬಿಡುಗಡೆಗೆ ಮುನ್ನ ಪೂರ್ವವೀಕ್ಷಣೆಗೆ  ಮತ್ತು ಅದರ ಬಿಡುಗಡೆಗೆ ಆಕ್ಷೇಪಣೆ ಸಲ್ಲಿಸಲುಲ್ ಅವಕಾಶ ನೀಡಬೇಕೆಂದು ಒತ್ತಾಯಿಸಿದೆ.
ಕೆಪಿಸಿಸಿ ಕಾರ್ಯದರ್ಶಿ ಎ. ನಟರಾಜ್ ಗೌಡ, ಉಪಾಧ್ಯಕ್ಷ ಎಸ್. ಅಹ್ಮದ್ಹಾಗೂ ಕಾರ್ಯದರ್ಶಿ (ಕಾನೂನು ಕೋಶ) ಸೂರ್ಯ ಮುಕುಂದರಾಜ್ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್  ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದ್ದಾರೆ.
"ಎಪ್ರಿಲ್ 11 ರಂದು ಏಳು ಹಂತದ ಲೋಕಸಭೆ ಚುನಾವಣೆ ಪ್ರಾರಂಭವಾಗಲಿದೆ.ಇದಕ್ಕೆ ಕೆಲದಿನಗಳ ಮೊದಲು ಏಪ್ರಿಲ್ 5 ರಂದು ಮೋದಿ ಜೀವನಾಧಾರಿತ ಚಿತ್ರ ಬಿಡುಗಡೆಯಾಗುತ್ತಿದೆ."
ಮೋದಿಯವರ ಪಕ್ಷ (ಬಿಜೆಪಿ) ಎರಡನೆಯ ಅವಧಿಗೆ ಅಧಿಕಾರಕ್ಕೇರಲು ಬಯಸುತ್ತಿದ್ದು ಚಿತ್ರ ಬಿಡುಗಡೆಯ ಸಮಯ ಪ್ರಶ್ನಾರ್ಹವಾಗಿದೆ ಎಂದು ಪಕ್ಷ ಹೇಳಿದೆ.
ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ನಂತರ ಚಿತ್ರವನ್ನು ಏಪ್ರಿಲ್ 12ರಂದು ಬಿಡುಗಡೆಯಾಗಲಿದೆ.
ಇನ್ನೊಂದೆಡೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಜೀವನಾಧಾರಿತ ಚಿತ್ರ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ ಎಂದು  ಎಂಎನ್ಎಸ್ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com