ಧಾರವಾಡ: ವ್ಯಕ್ತಿಯೊಬ್ಬ ಬದುಕುಳಿತ್ತೀನಾ ಇಲ್ವಾ ಅಂತ ಅವಶೇಷಗಳಡಿ ಸಿಲುಕಿದ್ದಾಗ ತೆಗೆದುಕೊಂಡ ಸೆಲ್ಫಿ, ವೈರಲ್!

ಧಾರವಾಡದಲ್ಲಿ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡ ಕುಸಿದು 17 ಜನರು ಮೃತಪಟ್ಟಿದ್ದು ಈ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾಗ...

Published: 25th March 2019 12:00 PM  |   Last Updated: 25th March 2019 01:41 AM   |  A+A-


ಸಂಗ್ರಹ ಚಿತ್ರ

Posted By : VS
Source : The New Indian Express
ಧಾರವಾಡ: ಧಾರವಾಡದಲ್ಲಿ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡ ಕುಸಿದು 17 ಜನರು ಮೃತಪಟ್ಟಿದ್ದು ಈ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾಗ ವ್ಯಕ್ತಿಯೋರ್ವ ಬದುಕುಳಿತ್ತೀನಾ ಇಲ್ಲ ಅಂತಾ ಸೆಲ್ಫಿ ತೆಗೆದುಕೊಂಡಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಟ್ಟಡದ ಅವಶೇಷದಡಿ ಸಿಲುಕಿ ಪವಾಡ ಸದೃಶ್ಯ ಬದುಕಿ ಬಂದಿದ್ದ ಮಂಜುನಾಥ್ ಯಾವಗಲ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ್ದು ನಾನು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾಗ ತುಂಬಾ ಆತಂಕಗೊಂಡಿದ್ದೆ. ನನಗೆ ಒಳಗೆ ಅಲುಗಾಡಲು ನನಗೆ ಜಾಗವಿದಿದ್ದರಿಂದ ನಾನು ಈ ವೇಳೆ ಸೆಲ್ಫಿ ತೆಗೆದುಕೊಂಡಿದ್ದೆ ಎಂದು ಹೇಳಿದ್ದಾರೆ.
ನಾನು ಮೊಬೈಲ್ ತೆಗೆದು ನೋಡಿದಾಗ ಅದರಲ್ಲಿ ಸಿಗ್ನಲ್ ಇದ್ದಿದ್ದನ್ನು ಗಮನಿಸಿದೆ. ಕೂಡಲೇ ನಾನು ಬದುಕಿರುವುದನ್ನು ನನ್ನ ಕುಟುಂಬಸ್ಥರಿಗೆ ತಿಳಿಸುವ ಸಲುವಾಗಿ ಸೆಲ್ಫಿ ತೆಗೆದುಕೊಂಡು ಕಳುಹಿಸಿದೆ. 9 ಗಂಟೆಗಳ ಕಾಲ ನಾನು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ವೇಳೆ ನಾನು ಓಂ ನಮಃ ಶಿವಾಯ ಎಂದು ಶಿವನಾಮವನ್ನು ಪಠಿಸುತ್ತಿದ್ದೆ ಎಂದು ಹೇಳಿದ್ದಾರೆ.
Stay up to date on all the latest ರಾಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp