ಪ್ರಶ್ನೆಪತ್ರಿಕೆ ಎಡವಟ್ಟು: ಬೆಂಗಳೂರಿನ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವಜಾ

ಶಾಲಾ ಪ್ರಶ್ನೆಪತ್ರಿಕೆಯಲ್ಲಿ ರೈತರ ಮಿತ್ರ ಯಾರು ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಎಚ್.ಡಿ,. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ,.ಎಸ್. ಯಡಿಯೂರಪ್ಪ ಆಯ್ಕೆಗಳನ್ನು ನಿಡಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟು ಮಾಡಿದ್ದ,,,,
ಪ್ರಶ್ನೆಪತ್ರಿಕೆ ಎಡವಟ್ಟು: ಬೆಂಗಳೂರಿನ  ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವಜಾ
ಪ್ರಶ್ನೆಪತ್ರಿಕೆ ಎಡವಟ್ಟು: ಬೆಂಗಳೂರಿನ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವಜಾ
ಬೆಂಗಳೂರು: ಶಾಲಾ ಪ್ರಶ್ನೆಪತ್ರಿಕೆಯಲ್ಲಿ ರೈತರ ಮಿತ್ರ ಯಾರು ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಎಚ್.ಡಿ,. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ,.ಎಸ್. ಯಡಿಯೂರಪ್ಪ ಆಯ್ಕೆಗಳನ್ನು ನಿಡಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟು ಮಾಡಿದ್ದ ಮೌಂಟ್ ಕಾರ್ಮೆಲ್ ಇಂಗ್ಲಿಷ್ ಹೈಸ್ಕೂಲ್ ನ ಅಧ್ಯಾಪಪಕನನ್ನು ಶಾಲಾ ಆಡಳಿತ ಮಂಡಳಿ ಹುದ್ದೆಯಿಂದ ವಜಾಗೊಳಿಸಿದೆ.
"ಪ್ರಶ್ನೆ ಪತ್ರಿಕೆ ತಯಾರಿಸುವ ಸಂಪೂರ್ಣ ಜವಾಬ್ದಾರಿ ಸಿಬಂದಿ ವರ್ಗಕ್ಕೆ ಸೇರಿದ್ದಾಗಿತ್ತು. ಹಾಗಾಗಿ ಈ ಪ್ರಶ್ನೆಪತ್ರಿಕೆ ತಯಾರಿಸಿದ್ದ ಶಿಕ್ಷಕನನ್ನು ಹುದ್ದೆಯಿಂದ ವಜಾಗೊಳಿಸಿದ್ದೇವೆ"ಶಾಲಾ ಪ್ರಾಂಶುಪಾಲ ರಾಘವೇಂದ್ರ ಇಲ್ಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
8 ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ "ರೈತನ ಮಿತ್ರ ಯಾರು?" ಎಂಬ ಪ್ರಶ್ನೆ ಇದ್ದು ಇದಕ್ಕೆ ಆಯ್ಕೆಗಳನ್ನಾಗಿ ಕುಮಾರಸ್ವಾಮಿ, ಎರೆಹುಳ ಹಾಗೂ ಯಡಿಯೂರಪ್ಪ ಎಂದು ಪ್ರಕಟಿಸಲಾಗಿತ್ತು.  ಈ ಪ್ರಶ್ನೆ  ಹಾಗು ಆಯ್ಕೆಗಳುರಾಜ್ಯಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗೆ ಕಾರಣವಾಗಿದ್ದವು.
ಆಡಳಿತ ಮಂಡಳಿಯ ಕಣ್ತಪ್ಪಿನಿಂದ ಈ ಪ್ರಶ್ನೆಯನ್ನು  ಪರೀಕ್ಷೆಯಲ್ಲಿ ಸೇರಿಸಲಾಗಿದೆ ಎಂದು ಪ್ರಾಶುಪಾಲರು ಹೇಳಿದ್ದಾರೆ. ಅಂತೆಯೇ ಪರೀಕ್ಷೆಯಲ್ಲಿನ ಪ್ರಶ್ನೆಯು ಯಾವುದೇ ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಉತ್ತೇಜಿಸುವಂತಹಾ ಉದ್ದೇಶದಿಂದ ಕೂಡಿಲ್ಲ ಎಂದೂ  ಶಾಲಾ ಆಡಳಿತವು ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com