ಉಡುಪಿ: ಎರಡು ವಾರಗಳಲ್ಲಿ ಬಾವಿ ತೋಡಿ ನೀರು ತರಿಸಿದ ಆಧುನಿಕ ಭಗೀರಥ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯ ಭುವನೇಶ ಗೌಡ ಬಾವಿ ತೋಡಿ 16 ದಿನಗಳಲ್ಲಿ ನೀರು ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ...
ಬಾವಿ ತೋಡುತ್ತಿರುವ ಯುವಕ
ಬಾವಿ ತೋಡುತ್ತಿರುವ ಯುವಕ
ಉಡುಪಿ: ನೀರಿನ ಕೊರತೆಯನ್ನು ನೀಗಿಸಲು 32 ವರ್ಷದ ವ್ಯಕ್ತಿ ಒಬ್ಬನೇ ಬಾವಿ ಕೊರೆದು ನೀರು ತರಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯ ಭುವನೇಶ ಗೌಡ ಬಾವಿ ತೋಡಿ 16 ದಿನಗಳಲ್ಲಿ ನೀರು ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಪ್ರತೀ ನಿತ್ಯ ಹಗಲು ಹೊತ್ತಿನಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡಿ ಪ್ರತೀ ದಿನ ತನ್ನ 5 ಸೆಂಟ್ಸ್ ಜಾಗದಲ್ಲಿ ಪ್ರತಿದಿನ ಸಂಜೆ 5.30ರಿಂದ 7.30ರವರೆಗೆ ಸ್ವಲ್ಪ ಸ್ವಲ್ಪವೇ ಮಣ್ಣು ಅಗೆದು ಒಟ್ಟು 18 ಅಡಿ ಬಾವಿ ತೋಡಿ ಎರಡು ಅಡಿ ನೀರು ಪಡೆದಿದ್ದಾರೆ. 
ದಿನ ನಿತ್ಯ ಕೂಲಿ ಕೆಲಸ ಮಾಡಿ ಬರುವ ಭುವನೇಶ್ ಸುಸ್ತಾದರೂ ಛಲ ಬಿಡದೆ ಪ್ರತೀ ದಿನ ಸಂಜೆಯಿಂದ ರಾತ್ರಿಯವರೆಗೆ ಮಣ್ಣು ಅಗೆದು, ಮಣ್ಣು ಹೊತ್ತು ಕೊಂಡು ಏಣಿ ಹತ್ತಿ ಮೇಲೆ ಬರುವಾಗ ನನ್ನ ಕರುಳು ಚುರುಕ್ ಅನ್ನುತ್ತಿತ್ತು. ಈ ಯುವಕನ ಸಾಧನೆ ಇತರರಿಗೆ ಮಾದರಿಯಾಗಿದೆ ಎಂದು ಸ್ಥಳೀಯ ನಿವಾಸಿ ವಿಠಲ್ ಹೇಳಿದ್ದಾರೆ, 
ಮುಂಡ್ಕೂರು ಗ್ರಾಮ ಪಂಚಾಯಿತಿ ಸಚ್ಚೇರಿಪೇಟೆ ಪಾವಂಜಿಗುಡ್ಡೆ ಸೈಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಿದ್ದು, ತೋಡಿದ್ದ ಬಾವಿಗಳಲ್ಲಿ 10-15 ಅಡಿಗಳಲ್ಲಿ ಬಂಡೆಯೇ ಬಂದಿರುವಾಗ ಏಕಾಂಗಿಯಾಗಿ ಶ್ರಮ ವಹಿಸಿ ತೋಡಿದ ಭುವನೇಶ ಅವರ ಬಾವಿಯಲ್ಲಿ ಜಲಧಾರೆ ಸಿಕ್ಕಿರುವುದು ಪವಾಡ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com