ಬೆಂಗಳೂರು: ಆಟೋ ಚಾಲಕನ​ ಮನೆ ಮೇಲೆ ಐಟಿ ದಾಳಿ, ಸಂಪತ್ತು ನೋಡಿ ಅಧಿಕಾರಿಗಳಿಗೇ ಶಾಕ್

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿಢೀರ್ ಶ್ರೀಮಂತನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ಆಟೋ ಚಾಲಕರೊಬ್ಬರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ...
ಸುಬ್ರಮಣಿ
ಸುಬ್ರಮಣಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿಢೀರ್ ಶ್ರೀಮಂತನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ಆಟೋ ಚಾಲಕರೊಬ್ಬರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸುಬ್ರಮಣಿ ದಿಢೀರ್​ ಶ್ರೀಮಂತನಾದ ಆಟೋ ಡ್ರೈವರ್​. ನಗರದಲ್ಲಿ ಆಟೋ ಓಡಿಸಿಕೊಂಡಿದ್ದ ಸುಬ್ರಮಣಿ ವೈಟ್​​ ಫೀಲ್ಡ್​ನಲ್ಲಿ ವಿಲ್ಲಾ ಖರೀದಿಸಿದ್ದರು.  ಆಟೋ ಡ್ರೈವರ್​ ಆಗಿ ಲಕ್ಸುರಿಯಾಗಿ ಜೀವನ ನಡೆಸುತ್ತಿದ್ದ ಆಟೋ ಡ್ರೈವರ್​ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ಏ.16ರಂದು ದಾಳಿ ನಡೆಸಿದರು.
ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆ ಆಧಾರದಲ್ಲಿ ಸಂಪತ್ತಿನ ಮೂಲದ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಆಟೋ ಚಾಲಕನಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ವಿಚಾರಣೆಗೆ ಹಾಜರಾಗಲು ನೋಟಿಸ್ ಸಹ ನೀಡಿದ್ದಾರೆ.
ವೈಟ್ ಫೀಲ್ಡ್ ಸಮೀಪವಿರುವ ಆಟೋ ಚಾಲಕ ಕೋಟಿ ಕೋಟಿ ಬೆಲೆಬಾಳುವ ವಿಲ್ಲಾ, ಮನೆ ಖರೀದಿ ಮಾಡಿದ್ದು, ತೆರಿಗೆ ವಂಚಿಸಿದ್ದರು. ಈತ ಆಟೋ ಚಾಲಕರಿಗೆ ಫೈನಾನ್ಸ್ ಮಾಡುತ್ತಿದ್ದ ಎನ್ನಲಾಗಿದೆ. ಮಾಹಿತಿ ಪಡೆದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com