ಮಹಿಳಾ ಶಿಕ್ಷಕಿಯರ ಹೆರಿಗೆ ರಜೆಯಿಂದಾಗಿ ಕಡಿಮೆ ಫಲಿತಾಂಶ: ಬಾಗಲಕೋಟೆ ಡಿಡಿಪಿಐ

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆ ಕಡಿಮೆ ಪಲಿತಾಂಶ ಪಡೆದಿರುವುದಕ್ಕೆ ಮಹಿಳಾ ಶಿಕ್ಷಕಿಯರೇ ನೇರ ಹೊಣೆ ಎಂದು ಬಾಗಲಕೋಟೆ ಡಿಡಿಪಿಐ ಬಿಎಚ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆ ಕಡಿಮೆ ಪಲಿತಾಂಶ ಪಡೆದಿರುವುದಕ್ಕೆ ಮಹಿಳಾ ಶಿಕ್ಷಕಿಯರೇ ನೇರ ಹೊಣೆ ಎಂದು ಬಾಗಲಕೋಟೆ ಡಿಡಿಪಿಐ ಬಿಎಚ್ ಗೋನಾಳ್ ಹೇಳಿದ್ದಾರೆ.
ಮಹಿಳಾ ಶಿಕ್ಷಕಿಯರು ಹೆರಿಗೆ ರಜೆಗೆಂದು 5 ತಿಂಗಳು ಹೋಗುತ್ತಾರೆ, ಹೀಗಾಗಿ ಅವರ ಸ್ಥಾನಕ್ಕೆ ಬೇರೆಯವರನ್ನು ಕರೆತರುವುದು ಕಷ್ಟ,  ನಾವು ಮೊದಲ 15 ಜಿಲ್ಲೆಗಳ ಪಟ್ಟಿಯಲ್ಲಿ ಬಾಗಲಕೊಟೆ ಹೆಸರು ಇರುತ್ತದೆಂದು ನಂಬಿದ್ದೇವು, ಆದರೆ 27ನೇ ಸ್ಥಾನದಲ್ಲಿವೆ. ಈ ವರ್ಷ ಮೊದಲಿನಿಂದಲೇ ಕೆಲಸ ಆರಂಭಿಸುತ್ತೇವೆ,  ಮೊದಲ ತಿಂಗಳಿನಿಂದಲೇ  ಸಿದ್ಧತೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದ ಒಟ್ಟು ಫಲಿತಾಂಶದಲ್ಲಿ ಬಾಗಲಕೋಟೆ 27ನೇ ಸ್ಥಾನ ಪಡೆದು ಕೊಂಡಿದೆ.ಶೇಕಡವಾರು 75.28 ಫಲಿತಾಂಶ ಬಂದಿದೆ, ಕಳೆದ ವರ್ಷ 25 ನೇ ಸ್ಥಾನದಲ್ಲಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com