ಧಾರವಾಡ ಕಟ್ಟಡ ದುರಂತ: ಜನರನ್ನು ಕಾಡುವ ಭೂತ-ಪ್ರೇತ ಕಥೆಗಳು!

ಕಳೆದ ಮಾರ್ಚ್ ತಿಂಗಳಲ್ಲಿ ಧಾರವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ಬಹುಮಹಡಿ ...

Published: 03rd May 2019 12:00 PM  |   Last Updated: 03rd May 2019 12:23 PM   |  A+A-


File pictures of the building which collapsed in Dharwad in March

ಮಾರ್ಚ್ ನಲ್ಲಿ ಧಾರವಾಡದಲ್ಲಿ ಕುಸಿದ ಕಟ್ಟಡ

Posted By : SUD SUD
Source : The New Indian Express
ಧಾರವಾಡ: ಕಳೆದ ಮಾರ್ಚ್ ತಿಂಗಳಲ್ಲಿ ಧಾರವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು ಬಿದ್ದು 19 ಮಂದಿ ಅಸುನೀಗಿದ ಘಟನೆ ನಂತರ ಪ್ರೇತ, ದೆವ್ವಗಳ ಕಥೆಗಳು ದುರಂತದ ಸ್ಥಳದಿಂದ ಹುಟ್ಟಿಕೊಳ್ಳಲಾರಂಭಿಸಿದೆ.

ಉಳಿದಿರುವ ಕಟ್ಟಡದ ಅಂಗಡಿಗಳ ಸುತ್ತಮುತ್ತ ಪ್ರೇತ ಮತ್ತು ಇತರ ದುಷ್ಟ ಶಕ್ತಿಗಳು ಓಡಾಡುತ್ತಿರಬಹುದು ಎಂಬ ಭೀತಿಯಿಂದ ಜನರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ರಸ್ತೆಯಲ್ಲಿ ಓಡಾಡಲೂ ಕೂಡ ಜನ ಹಿಂಜರಿಯುತ್ತಿದ್ದಾರೆ. ರಾತ್ರಿಯಾದ ಮೇಲಂತೂ ಹೊರಬರಲು ಭಯ. ದುರಂತ ನಡೆದ ಸ್ಥಳದಲ್ಲಿ ಕೆಟ್ಟ ಶಕ್ತಿಗಳು ಇದ್ದು ಯಾವ ದುರಂತ ಬೇಕಾದರೂ ನಡೆಯುವ ಸಾಧ್ಯತೆಯಿದೆ ಎಂಬ ಭೀತಿಯಿಂದ ಈ ರಸ್ತೆಯಲ್ಲಿ ಓಡಾಡದಂತೆ ಮನೆಯ ಹಿರಿಯ ಸದಸ್ಯರು ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾರೆ.

ನಾನು ಸಾಮಾನ್ಯವಾಗಿ ದೆವ್ವ, ಭೂತಗಳನ್ನು ನಂಬುವುದಿಲ್ಲ. ಆದರೆ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳುತ್ತೇನೆ. ಮಧ್ಯಾಹ್ನ ನಂತರ ಮತ್ತು ರಾತ್ರಿ ಹೊತ್ತು ಆ ರಸ್ತೆಯಲ್ಲಿ ಹೋಗಬೇಡ ಎಂದು ಪೋಷಕರು ಹೇಳುತ್ತಾರೆ. ಏನಾದರೂ ಕೆಟ್ಟದು ಆದರೆ ಎಂಬ ಭಯ ಅವರಿಗೆ. ನನ್ನಂತೆ ಹಲವು ಮನೆಗಳಲ್ಲಿ ಪೋಷಕರು ಮಕ್ಕಳಿಗೆ ಹೀಗೆ ಹೇಳುತ್ತಾರೆ ಎನ್ನುತ್ತಾರೆ ಕುಮಾರೇಶ್ವರ ನಗರದ ನಿವಾಸಿಯೊಬ್ಬರು.

ಕಟ್ಟಡ ಕುಸಿದು ಬಿದ್ದ ನಂತರ ಈ ಸ್ಥಳದಲ್ಲಿ ಮಾನವ ಸಂಚಾರ ಕಡಿಮೆಯಾಗಿದೆ. ಘಟನೆ ನಡೆಯುವುದಕ್ಕೆ ಮುನ್ನ ಈ ಪ್ರದೇಶದಲ್ಲಿದ್ದ ರೆಸ್ಟೊರೆಂಟ್, ಮೆಡಿಕಲ್ ಸ್ಟೋರ್ ಮತ್ತು ಬೇರೆ ಮಳಿಗೆಗಳಲ್ಲಿ ಜನಸಂದಣಿ ದಟ್ಟವಾಗಿತ್ತು. ಇಂದು ಕಟ್ಟಡವಿಲ್ಲದಿರುವುದು ಅಲ್ಲಿನ ವಾತಾವರಣವನ್ನೇ ಸಂಪೂರ್ಣ ಬದಲಾಯಿಸಿದೆ.
Stay up to date on all the latest ರಾಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp