ಪ್ರಗತಿಪರ ರೈತ ಕೆಸಿ ಶಿವರಾಮೇಗೌಡ ನಿಧನ

ಖ್ಯಾತ ಕೃಷಿ ತಜ್ಞ ಮತ್ತು ಪ್ರಗತಿಪರ ರೈತ ಕೆಸಿ ಶಿವರಾಮೇಗೌಡ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 67 ವರ್ಷವಯಸ್ಸಾಗಿತ್ತು. ಮೃತರು ಪತ್ನಿ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಡ್ಯ: ಖ್ಯಾತ ಕೃಷಿ ತಜ್ಞ ಮತ್ತು ಪ್ರಗತಿಪರ ರೈತ ಕೆಸಿ ಶಿವರಾಮೇಗೌಡ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ  67 ವರ್ಷವಯಸ್ಸಾಗಿತ್ತು. ಮೃತರು  ಪತ್ನಿ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ. 
ಕೃಷಿ ಸಾಧನೆಗಾಗಿ ಕೇಂದ್ರ ಸರ್ಕಾರದ 'ಕೃಷಿ ಪಂಡಿತ್' ಪ್ರಶಸ್ತಿ  ಸ್ವೀಕರಿಸಿದ್ದ ಅವರು, ಕೃಷಿ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಹೊಸದಿಲ್ಲಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಪ್ರವಾಸ ಮಾಡಿದ್ದರು. ಆಕಾಶವಾಣಿಯ ಕೃಷಿ ದರ್ಶನ್ ಕಾರ್ಯಕ್ರಮದಲ್ಲಿ ಅವರು ನಿಯಮಿತವಾಗಿ ಪಾಲ್ಗೊಂಡಿದ್ದರು. 20 ಕ್ಕಿಂತಲೂ ಹೆಚ್ಚು ರಾಷ್ಟ್ರೀಯ ಕೃಷಿ ವಿಚಾರ ಸಂಕಿರಣದಲ್ಲಿ ಭಾಗಿಯಾಗಿ ಪ್ರೌಢಿಮೆ ಮೆರೆದಿದ್ದರು. 
ಕೆಸಿ ಶಿವರಾಮೇಗೌಡ ಹೊಸ ತಂತ್ರಜ್ಞಾನವನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು  ಪ್ರಮುಖ ಪ್ರೇರಣೆಯಾಗಿದ್ದು  ತಂತ್ರಜ್ಞಾನ ಮತ್ತು ಅದರ ಬಳಕೆ ಬಗ್ಗೆ ತಿಳಿದುಕೊಳ್ಳಲು ರಾಜ್ಯಾದ್ಯಂತ ಅವರ ಮನೆಯ ಬಾಗಿಲಿಗೆ ರೈತರು ಬರುತ್ತಿರುವುದು ಅವರ ಸರಳತೆ ಮತ್ತು ಮತ್ತು ಜನಪ್ರಿಯತೆ ಸಾಕ್ಷಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com