ಯಾದಗಿರಿ: ಬಾಲ್ಯ ವಿವಾಹ ತಡೆಗಟ್ಟಿದ್ದ ಅಧಿಕಾರಿಗಳು, ಪೊಲೀಸರು

ಜಿಲ್ಲೆಯ ಅಂಚಿನ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ಹಾಗೂ ಪೊಲೀಸರು ತಡೆಗಟ್ಟಿದ್ದಾರೆ.
ಅಪ್ರಾಪ್ತ ಬಾಲಕಿಯ ಜೊತೆಗೆ ಪೋಷಕರು, ಅಧಿಕಾರಿಗಳು
ಅಪ್ರಾಪ್ತ ಬಾಲಕಿಯ ಜೊತೆಗೆ ಪೋಷಕರು, ಅಧಿಕಾರಿಗಳು
ಯಾದಗಿರಿ: ಜಿಲ್ಲೆಯ ಅಂಚಿನ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ಹಾಗೂ ಪೊಲೀಸರು ತಡೆಗಟ್ಟಿದ್ದಾರೆ.
ಯಾದಗಿರಿ  ತಾಲೂಕಿನ ಕೌಲೂರಿನ ಅಪ್ರಾಪ್ತ ಬಾಲಕಿಯನ್ನು ಅವರ ಕುಟುಂಬದವರಿಗೆ ಕೊಟ್ಟು ಶಾಹಪುರ ತಾಲೂಕಿನ ನೈಕಾಲಿನ ಚರ್ಚ್ ವೊಂದರಲ್ಲಿ ಬಲವಂತವಾಗಿ ಮದುವೆ ಮಾಡಲಾಗುತಿತ್ತು. ಸ್ಥಳೀಯ ಮಹಿಳಾ ಸಂಘಟನೆಯಿಂದ ಈ ಮಾಹಿತಿಯನ್ನು ತಿಳಿದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ಯಾದಗಿರಿ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಪ್ರಾಪ್ತ ವಯಸ್ಸಿಗೆ ಬರುವವರೆಗೂ ಮದುವೆ ಮಾಡುವುದಿಲ್ಲ ಎಂದು ಪೋಷಕರಿಂದ ಮುಚ್ಚಳಿಕೆಯನ್ನು ಪೊಲೀಸರು ಹಾಗೂ ಅಧಿಕಾರಿಗಳು ಬರೆಸಿಕೊಂಡಿದ್ದಾರೆ. ದಾಳಿಯ ಮಾಹಿತಿ ತಿಳಿದ ಪೋಷಕರು ಅಪ್ರಾಪ್ತ ಬಾಲಕಿಯನ್ನು ಎಲ್ಲಿಯೂ ಬಚ್ಚಿಟ್ಟಿದ್ದರು. ನಂತರ ಪೊಲೀಸರ ಸಹಾಯದಿಂದ ಆ ಬಾಲಕಿಯನ್ನು ರಕ್ಷಿಸಲಾಗಿದ್ದು, ಮಕ್ಕಳ ಕಲ್ಯಾಣ ಸಮುದಾಯದಲ್ಲಿ ಇರಿಸಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಜಿಲ್ಲಾ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ ನಿರ್ದೇಶಕ ರಘುವೀರ್ ಸಿಂಗ್  ಹೇಳಿದ್ದಾರೆ.
ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಯಶಸ್ವಿಯಾದ ಅಧಿಕಾರಿಗಳ ತಂಡಕ್ಕೆ ಜಿಲ್ಲಾಧಿಕಾರಿ ರಾವ್ ಅಭಿನಂದಿಸಿದ್ದು, ಬಾಲಕಿಯ ಸುರಕ್ಷತೆಗೆ ಇಲಾಖೆ ಗಮನ ಹರಿಸುವುದಾಗಿ  ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com