ಬೆಂಗಳೂರು: ನ್ಯಾಯ ಕೇಳಿ ಬಂದ ಯುವತಿಗೆ ಪೊಲೀಸ್ ಪೇದೆಯಿಂದ ಲೈಂಗಿಕ ಕಿರುಕುಳ

ಪ್ರಿಯಕರ ನನಗೆ ಮೋಸ ಮಾಡಿದ್ದು, ನ್ಯಾಯ ಕೊಡಿಸಿ ಎಂದ 24 ವರ್ಷದ ಯುವತಿಗೆ ಪೊಲೀಸ್ ಪೇದೆಯೊಬ್ಬ ಲೈಂಗಿಕ ಕಿರುಕುಳ ನೀಡಿದ ಪ್ರಕರಣ...

Published: 09th May 2019 12:00 PM  |   Last Updated: 09th May 2019 06:26 AM   |  A+A-


24-year-old Bengaluru woman alleges sexual harassment by constable

ವಿಜಯ್ ರಾಥೋಡ್

Posted By : LSB LSB
Source : The New Indian Express
ಬೆಂಗಳೂರು: ಪ್ರಿಯಕರ ನನಗೆ ಮೋಸ ಮಾಡಿದ್ದು, ನ್ಯಾಯ ಕೊಡಿಸಿ ಎಂದ 24 ವರ್ಷದ ಯುವತಿಗೆ ಪೊಲೀಸ್ ಪೇದೆಯೊಬ್ಬ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ನ್ಯಾಯ ಕೇಳಿ ಪೊಲೀಸ್ ಠಾಣೆಗೆ ಬಂದ ಯುವತಿಗೆ ವಿಜಯ್ ರಾಥೋಡ್ ಎಂಬ ಪೇದೆ, ತನ್ನೊಂದಿಗೆ  ಅಡ್ಜೆಸ್ಟ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಯುವತಿ ಹಾಗೂ ವಿಜಯ್ ರಾಥೋಡ್ ನಡುವೆ ನಡೆದ ಆಡಿಯೋ ಸಂಭಾಷಣೆ ರೆಕಾರ್ಡ್ ಆಗಿದ್ದು, ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿಜಯ್ ರಾಥೋಡ್ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿಗೆ ಯುವತಿಯೊಬ್ಬಳು  ತನ್ನ ಪ್ರಿಯಕರ ಮೋಸ ಮಾಡಿದ್ದಾನೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆಗೆ ತೆರಳಿದ್ದಳು. ಈ ವೇಳೆ ವಿಜಯ್ ನಿನಗೆ ಸಹಾಯ ಮಾಡುತ್ತೇನೆ. ಆದರೆ ನನ್ನ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎಂದು ಹೇಳಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.

ಪ್ರಿಯಕರಿಗೆ ಕೊಟ್ಟಿದ್ದ 50 ಲಕ್ಷ ಹಣ ವಾಪಸ್ ಕೊಡಿಸಿ ಎಂದು ಯುವತಿ ಪೇದೆ ಬಳಿ ಕೇಳಿಕೊಂಡಿದ್ದಾಳೆ. ಈ ವೇಳೆ ವಿಜಯ್ ನಿನಗೆ ನ್ಯಾಯ ಸಿಗಬೇಕೆಂದರೆ ನನ್ನ ಜೊತೆ ಅಡ್ಜೆಸ್ಟ್ ಆಗಬೇಕು ಎಂದು ಹೇಳಿದ್ದಾನೆ. ಆದರೆ ಯುವತಿ ಇದಕ್ಕೆ ಒಪ್ಪಲಿಲ್ಲ. ಆಗ ವಿಜಯ್ ಯುವತಿಗೆ ಕಿರುಕುಳ ನೀಡಿದ್ದಾನೆ. ಇಬ್ಬರೂ ಒಂದೇ ಜಾತಿ ಅಲ್ವಾ? ನಾವೇಕೆ ಜೊತೆ ಆಗಬಾರದು ಎಂದು ವಿಜಯ್ ಹಿಂಸೆ ಕೊಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ವಿಜಯ್ ರಾಥೋಡ್ ಅವರನ್ನು 10 ದಿನಗಳ ಹಿಂದೆ ಪೊಲೀಸ್ ಕಂಟ್ರೋಲ್ ರೂಮ್ ಗೆ ವರ್ಗಾವಣೆ ಮಾಡಲಾಗಿತ್ತು. ಮಾಧ್ಯಮಗಳಲ್ಲಿ ವರದಿ ಬಂದ ನಂತರ ನನ್ನ ಗಮನ ಬಂದಿದೆ. ನಾನು ಆ ಮಹಿಳೆಗೆ ಫೋನ್ ಮಾಡಿ, ಮಾತನಾಡಿದ್ದೇನೆ. ಪೊಲೀಸ್ ಪೇದೆ ವಿರುದ್ಧ ಠಾಣೆಗೆ ಬಂದು ದೂರು ನೀಡುವುದಾಗಿ ಹೇಳಿದ್ದಾರೆ ಎಂದು ವಿವೇಕನಗರ ಪೊಲೀಸ್ ಇನ್ಸ್ ಪೆಕ್ಟರ್ ರಫಿಕ್ ಕೆಎನ್ ಅವರು ತಿಳಿಸಿದ್ದಾರೆ. 

ಮಹಿಳೆ ಪೊಲೀಸ್ ಪೇದೆ ವಿರುದ್ಧ ಇನ್ನೂ ದೂರು ನೀಡಿಲ್ಲ. ಹೀಗಾಗಿ ಆರೋಪಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಹಿಳೆ ದೂರು ನೀಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp