ಕಾರವಾರ: ತ್ರಿಭುಜ ಬೋಟ್‌ನ ಅವಶೇಷಗಳ ಫೋಟೋ ಬಿಡುಗಡೆ ಮಾಡಿದ ನೌಕಾಪಡೆ

ಏಳು ಮೀನುಗಾರರ ಸಹಿತ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷಗಳು 140 ದಿನಗಳ ಬಳಿಕ ಮಹಾರಾಷ್ಟ್ರದ ಮಾಲ್ವಾನ್‌ ಪ್ರದೇಶದ
ಅವಶೇಷದ ಚಿತ್ರ - ಸಂಗ್ರಹ ಚಿತ್ರ
ಅವಶೇಷದ ಚಿತ್ರ - ಸಂಗ್ರಹ ಚಿತ್ರ
ಕಾರವಾರ: ಏಳು ಮೀನುಗಾರರ ಸಹಿತ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷಗಳು 140 ದಿನಗಳ ಬಳಿಕ ಮಹಾರಾಷ್ಟ್ರದ ಮಾಲ್ವಾನ್‌ ಪ್ರದೇಶದ ಸಮುದ್ರದ ಆಳದಲ್ಲಿ ಪತ್ತೆಯಾಗಿದ್ದು, ಭಾರತೀಯ ನೌಕಾಪಡೆ ಅದರ ಚಿತ್ರಗಳನ್ನು ಗುರುವಾರ ಬಿಡುಗಡೆ ಮಾಡಿದೆ.
ಡಿಸೆಂಬರ್ 15ರಂದು ಮಲ್ಪೆಯಿಂದ ಹೊರಟಿದ್ದ ಬೋಟ್, ತಿಂಗಳುಗಳೇ ಕಳೆದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ನೌಕಾಪಡೆ ಸಹಾಯ ಪಡೆದು ಶೋಧ ಕಾರ್ಯ ನಡೆಸಿದಾಗ ಮೇ 3ರಂದು ಮಾಲ್ವಾನ್ ಬಳಿ ಅದರ ಅವಶೇಷಗಳು ಪತ್ತೆಯಾಗಿದ್ದವು.
ಮಾಲ್ವಾನ್‌ ವ್ಯಾಪ್ತಿಯ 30 ಕಿ.ಮೀ. ದೂರದಲ್ಲಿ 60 ಮೀಟರ್‌ ಆಳದಲ್ಲಿ ಬೋಟ್‌ನ ಅವಶೇಷ ಪತ್ತೆಯಾಗಿದೆ ಎಂದು ಕಾರವಾರ ನೇವಲ್‌ ಬೇಸ್‌ ಅಧಿಕಾರಿಗಳು ಉಡುಪಿ ಜಿಲ್ಲಾ ಪೊಲೀಸರಿಗೆ ಲಿಖಿತವಾಗಿ ಮಾಹಿತಿ ನೀಡಿದ್ದಾರೆ.
ಮೀನುಗಾರಿಕೆ ಬೋಟ್ ಅವಶೇಷಗಳು ಮಾತ್ರ ಪತ್ತೆಯಾಗಿದ್ದು, ಬೋಟ್ ನಲ್ಲಿದ್ದ ಏಳು ಮೀನುಗಾರರ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com