ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಶಂಕಿತ ವ್ಯಕ್ತಿ ಪತ್ತೆ

ಮೆಜೆಸ್ಟಿಕ್​​ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡು ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಕೊನೆಗೂ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮೆಜೆಸ್ಟಿಕ್​​ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡು ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದು, ರಾಜಸ್ಥಾನ ಮೂಲದ ಸಾಜಿದ್​ ಖಾನ್ ನನ್ನು ವಶಕ್ಕೆ ಪಡೆದಿರುವುದಾಗಿ ಶನಿವಾರ ಪೊಲೀಸರು ತಿಳಿಸಿದ್ದಾರೆ.
​38 ವರ್ಷದ ಸಾಜಿದ್ ಖಾನ್ ನನ್ನು ಆರ್ ಟಿ ನಗರದಲ್ಲಿ ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಕಳೆದ ಸೋಮವಾರ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಪತ್ತೆಯಾಗಿದ್ದ. ಶಂಕಿತ ವ್ಯಕ್ತಿಯ ಪತ್ತೆಗಾಗಿ ಸಿಲಿಕಾನ್​ ಸಿಟಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು.
ಸಾಜಿದ್ ಖಾನ್ ಮೆಟ್ರೋ ನಿಲ್ದಾಣದ ಮೆಟಲ್ ಡಿಟೆಕ್ಟರ್ ಬಳಿ ಬಂದಾಗ ಬೀಪ್ ಸೌಂಡ್ ಬಂದಿದೆ. ಇದರಿಂದ ಆತಂಕಗೊಂಡ ಸಾಜಿದ್ ಖಾನ್ ವಾಪಸ್ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ವಶದಲ್ಲಿರುವ ಸಾಜಿದ್​ ಖಾನ್​ ರಂಜಾನ್ ಹಿನ್ನೆಲೆಯಲ್ಲಿ ದಾನ(ಝಕಾತ್ ) ಸ್ವೀಕರಿಸಲು ಬಂದಿದ್ದಾಗಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಭಿಕ್ಷಾಟನೆಗಾಗಿ ಮಡದಿ ಹಾಗೂ ಮಕ್ಕಳ ಸಮೇತ ಬಂದಿದ್ದು, ಪ್ರತಿವರ್ಷವೂ ರಂಜಾನ್ ವೇಳೆಗೆ ಬೆಂಗಳೂರಿಗೆ ಬಂದು ಭಿಕ್ಷಾಟನೆ ಮಾಡುವುದಾಗಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com