ಹಿರಿಯ ಯಕ್ಷಗಾನ ಕಲಾವಿದ ನೆಬ್ಬೂರು ನಾರಾಯಣ ಭಾಗವತರು ಇನ್ನಿಲ್ಲ

ಬಡಗುತಿಟ್ಟು ಯಕ್ಷರಂಗದ ಹಿರಿಯ ಕಲಾವಿದ ನೆಬ್ಬೂರು ನಾರಾಯಣ ಭಾಗವತ ಅವರು ಶನಿವಾರ...

Published: 11th May 2019 12:00 PM  |   Last Updated: 11th May 2019 10:16 AM   |  A+A-


Senior artist Nebburu Narayana Bhagavatar

ನೆಬ್ಬೂರು ನಾರಾಯಣ ಭಾಗವತರು

Posted By : SUD SUD
Source : Online Desk
ಬೆಂಗಳೂರು: ಬಡಗುತಿಟ್ಟು ಯಕ್ಷರಂಗದ ಹಿರಿಯ ಕಲಾವಿದ ನೆಬ್ಬೂರು ನಾರಾಯಣ ಭಾಗವತ ಅವರು ಶನಿವಾರ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇವರ ನಿಧನದಿಂದ ಬಡಗುತಿಟ್ಟಿನ ಮೇರು ಭಾಗವತರ ಪರಂಪರೆ ಕೊಂಡಿಯೊಂದು ಕಳಚಿದೆ.

ತಮ್ಮ ಶ್ರೀಮಂತ ಕಂಠದಿಂದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ಪ್ರಸಿದ್ಧರಾದವರು ನೆಬ್ಬೂರು ನಾರಾಯಣ ಭಾಗವತರು. ಕೋಟ ಅಮೃತೇಶ್ವರಿ ಮೇಳ, ಇಡುಗುಂಜಿ ಕೆರೆಮನೆ ಮೇಳಗಳಲ್ಲಿ ಮೂರು ತಲೆಮಾರಿನ ಕಲಾವಿದರನ್ನು ಕುಣಿಸಿ, ಮೆರೆಸಿದ ಹೆಗ್ಗಳಿಕೆ ಇವರದ್ದು.

ಹೊರರಾಜ್ಯಗಳು ಮತ್ತು ಹೊರ ದೇಶಗಳಲ್ಲಿ ಕೂಡ ಯಕ್ಷಗಾನ ಪ್ರೇಮಿಗಳು ನೆಬ್ಬೂರು ನಾರಾಯಣ ಭಾಗವತರ ಕಂಠದ ಸವಿಯನ್ನು ಕೇಳಿ ಖುಷಿಪಟ್ಟಿದ್ದಾರೆ.

ನೆಬ್ಬೂರು ನಾರಾಯಣ ಭಾಗವತರ ನಿಧನಕ್ಕೆ ಯಕ್ಷಾಭಿಮಾನಿಗಳು ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಇವರು ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp