ಮೂರು ಪ್ರತ್ಯೇಕ ಅವಘಡ: ಐವರು ಯುವಕರು ನೀರು ಪಾಲು

ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಇಂದು ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ ಐವರು ಯುವಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

Published: 13th May 2019 12:00 PM  |   Last Updated: 13th May 2019 07:22 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : UNI
ಚಾಮರಾಜನಗರ: ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಇಂದು ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ   ಐವರು ಯುವಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸಮೀಪದ ಬಲಮುರಿ ಪಿಕ್ ನಿಕ್ ಸ್ಥಳದಲ್ಲಿ ಇಬ್ಬರು ಯುವಕರು ಮುಳುಗಿದ್ದಾರೆ. ಮತ್ತಿಬ್ಬರು ಯುವಕರು ಕೊಡಗು ಜಿಲ್ಲೆಯ ಚೆಕ್ಲಿಹೊಳೆ ಅಣೆಕಟ್ಟು ಬಳಿ ನೀರಿನಲ್ಲಿ  ಜಲ ಸಮಾಧಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಸುವರ್ಣವತಿ ಜಲಾಶಯದಲ್ಲಿ ಮತ್ತೊಬ್ಬ ಯುವಕ ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾನೆ.  

ಬಲಮುರಿಯ ಕಾವೇರಿ ನದಿಯಲ್ಲಿ ಮೃತಪಟ್ಟವರನ್ನು ಅಜಿತ (19) ಮತ್ತು ಶಿವ (19), ಇಬ್ಬರೂ ಮೈಸೂರಿನವರು ಎಂದು ಗುರುತಿಸಲಾಗಿದೆ. ಒಟ್ಟು ಆರು ಯುವಕರು ಭಾನುವಾರ ಸಂಜೆ  ಈಜಲು ಹೋಗಿದ್ದಾಗ ಈ ಘಟನೆ ಜರುಗಿದೆ. ಇಬ್ಬರ ದೇಹಗಳನ್ನೂ ಹೊರತೆಗೆದು ಕುಟುಂಬದ ಸದಸ್ಯರ ವಶಕ್ಕೆ ಒಪ್ಪಿಸಲಾಗಿದೆ.

ಕೊಡಗು ಜಿಲ್ಲೆಯ ಬಳಿಯ ಚೆಕ್ಲಿಹೊಳೆ ಜಲಾಶಯದ ಹಿನ್ನೀರಿನಲ್ಲಿ ಈಜುಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಅವರನ್ನು ನಂದೀಶ್ ಮತ್ತು ಪವನ್ ಎಂದು ಗುರುತಿಸಲಾಗಿದೆ. ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೇಹಗಳನ್ನು ಹೊರ ತೆಗೆದಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp