ಗದಗ ಜಿಲ್ಲೆಯ ಈ ಗ್ರಾಮಸ್ಥರು ನೀರಿಗಾಗಿ ಪ್ರತಿದಿನ 6 ಗಂಟೆ ನಿಲ್ಲಬೇಕು!

ಜಿಲ್ಲೆಯ ಈ ಗ್ರಾಮದ ಜನತೆ ಕೇಳುವುದು ಒಂದೇ ಅದು ಮೂಲಭೂತ ಅವಶ್ಯಕತೆಯಾದ ನೀರು. ತಮ್ಮ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗದಗ: ಜಿಲ್ಲೆಯ ಈ ಗ್ರಾಮದ ಜನತೆ ಕೇಳುವುದು ಒಂದೇ ಅದು ಮೂಲಭೂತ ಅವಶ್ಯಕತೆಯಾದ ನೀರು. ತಮ್ಮ ದಿನನಿತ್ಯದ ಕೆಲಸಗಳಿಗೆ ನೀರು ಸಂಗ್ರಹಿಸುವ ಮೂಲಕವೇ ಇಲ್ಲಿನ ಜನರ ದಿನಚರಿ ಆರಂಭವಾಗುವುದು. ಸರ್ಕಾರದ ನೀರಿನ ಟ್ಯಾಂಕ್ ಹತ್ತಿರ ನೀರು ತುಂಬಿಸಿಕೊಳ್ಳಲು ಹೆಂಗಸರು ಬೆಳ್ಳಂಬೆಳಗ್ಗೆಯೇ ಸರದಿಯಲ್ಲಿ ನಿಲ್ಲುತ್ತಾರೆ.
ಇದು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಕುಂದ್ರಳ್ಳಿ ಗ್ರಾಮದ ಕಥೆ. ಇಲ್ಲಿ ಸುಮಾರು 2 ಸಾವಿರದ 400 ಜನಸಂಖ್ಯೆಯಿದ್ದು ಇಲ್ಲಿನ ಮಹಿಳೆಯರು ನೀರಿಗಾಗಿ ಜಗಳ, ಕದನ ಮಾಡುವುದು ಸಾಮಾನ್ಯ ದೃಶ್ಯವಾಗಿದೆ. ನಿಗದಿತವಾಗಿ ಗ್ರಾಮಕ್ಕೆ ನೀರು ಒದಗಿಸುತ್ತೇವೆ ಎಂದು ಇಲ್ಲಿಗೆ ಭೇಟಿ ನೀಡಿದ ಹಲವು ಸರ್ಕಾರಿ ಅಧಿಕಾರಿಗಳು ಹೇಳಿದ್ದರು. ಆದರೆ ಅವರು ಯಾವತ್ತೂ ತಮ್ಮ ಮಾತನ್ನು ಉಳಿಸಿಕೊಂಡಿಲ್ಲ.
ಗ್ರಾಮಸ್ಥರು ತಮ್ಮ ದಿನನಿತ್ಯದ ಬಳಕೆಗೆ ನೀರು ಹಿಡಿದುಕೊಳ್ಳಲು 5-6 ಗಂಟೆ ಟ್ಯಾಂಕರ್ ಮುಂದೆಯೇ ಕಾಯಬೇಕಾಗುತ್ತದೆ. ಹಲವು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಕೆರೆ, ಸರೋವರಗಳಿದ್ದವು. ನೀರಿನ ಮೂಲಗಳು ಬತ್ತಿ ಹೋಗುತ್ತಿದ್ದಂತೆ ಬೋರ್ ವೆಲ್ ಗಳನ್ನು ಕೊರೆದರೆ ನೀರು ಸಿಗುತ್ತಿಲ್ಲ. ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುಹೋಗಿದೆ. ಪುರುಷರು ಕೆಲಸಕ್ಕೆ ಹೊರಟು ಹೋಗುವುದರಿಂದ ಮಹಿಳೆಯರೇ ಕುಡಿಯುವ ನೀರು ತರಬೇಕು ಎನ್ನುತ್ತಾರೆ ಗ್ರಾಮಸ್ಥೆ ಯೆಲ್ಲವ್ವ ಲಮಣಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com