ಆನ್ ಲೈನ್ ನಲ್ಲಿ ರೋಗಿಗಳ ಸಮಾಲೋಚನೆ ಕಾನೂನುಬಾಹಿರ: ವೈದ್ಯಕೀಯ ಮಂಡಳಿ

ಇಂದು ಬಹುತೇಕ ವಹಿವಾಟುಗಳು ಆನ್ ಲೈನ್ ನಲ್ಲಿ ನಡೆಯುತ್ತಿರುವಾಗ ವೈದ್ಯರನ್ನು ಸಹ ಆನ್ ಲೈನ್ ...

Published: 14th May 2019 12:00 PM  |   Last Updated: 14th May 2019 01:59 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಬೆಂಗಳೂರು: ಇಂದು ಬಹುತೇಕ ವಹಿವಾಟುಗಳು ಆನ್ ಲೈನ್ ನಲ್ಲಿ ನಡೆಯುತ್ತಿರುವಾಗ ವೈದ್ಯರನ್ನು ಸಹ ಆನ್ ಲೈನ್ ನಲ್ಲಿ ಸಂಪರ್ಕಿಸಿ ಸಲಹೆ ಪಡೆಯುವ ಕಾಲ ಬಂದಿದೆ. ಆದರೆ ಇದು ಕಾನೂನುಬಾಹಿರವೆಂದು ಕರ್ನಾಟಕ ವೈದ್ಯಕೀಯ ಮಂಡಳಿ ಎಚ್ಚರಿಕೆ ನೀಡಿದೆ.

ವೈದ್ಯರು ರೋಗಿಗಳನ್ನು ಮುಖತಃ ಕಂಡು ಅವರನ್ನು ಶಾರೀರಿಕವಾಗಿ ಪರೀಕ್ಷಿಸಿಯೇ ಔಷಧಿಗಳನ್ನು ನೀಡಬೇಕು ಎಂಬುದು ವೈದ್ಯಕೀಯ ನಿಯಮವಾಗಿದ್ದು ಆನ್ ಲೈನ್ ನಲ್ಲಿ ಮಾಡಿದರೆ ಅದು ವೈದ್ಯಕೀಯ ನಿಯಮಕ್ಕೆ ವಿರುದ್ಧವಾಗುತ್ತದೆ.

ಆನ್ ಲೈನ್ ನಲ್ಲಿ ರೋಗಿಯ ಆರೋಗ್ಯ ಸಮಸ್ಯೆ ಕೇಳಿಕೊಂಡು ಅದಕ್ಕೆ ಚಿಕಿತ್ಸೆ ನೀಡಿದರೆ ಅದು ಮತ್ತೊಂದು ಕಾಯಿಲೆಗೆ ಅಥವಾ ಮತ್ತಷ್ಟು ಆರೋಗ್ಯ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆಯಿದೆ. ಅದೊಂದು ರೀತಿಯಲ್ಲಿ ರೋಗಿಗಳ ಜೀವನದ ಜೊತೆ ಆಟವಾಡಿದಂತೆ ಎಂದು ವೈದ್ಯಕೀಯ ಮಂಡಳಿಯ ಪತ್ರಿಕಾ ಹೇಳಿಕೆ ತಿಳಿಸಿದೆ.

ಆನ್ ಲೈನ್ ಸಮಾಲೋಚನೆಯಿಂದ ರೋಗಿಗಳು ಮತ್ತು ವೈದ್ಯರ ಸಮಯ ಮತ್ತು ಹಣ ಉಳಿತಾಯ ಮಾಡಬಹುದು. ರೋಗಿಗಳ ಫಾಲೋ ಅಪ್ ಗೆ ಸುಲಭವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ತಂತ್ರಜ್ಞಾನ ಅಭಿವೃದ್ಧಿ ಹೊಂದಿದ ಮಾತ್ರಕ್ಕೆ ರೋಗಿಗಳನ್ನು ಆನ್ ಲೈನ್ ನಲ್ಲಿ ಚಿಕಿತ್ಸೆ ನೀಡಿದರೆ ಸಾಕಾಗುತ್ತದೆ ಎಂದರ್ಥವಲ್ಲ. ಹೀಗಾಗಿ ಅದನ್ನು ಮಾಡುವಂತಿಲ್ಲ ಎಂದು ಕರ್ನಾಟಕ ವೈದ್ಯಕೀಯ ಮಂಡಳಿ ಹೇಳಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp