ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿಪಡಿಸುವ ಅಭಿಯಾನ, ನಟರು, ಉದ್ಯಮಿಗಳು ಸಾಥ್!

ಹಲವು ನಟರು, ಕಾರ್ಪೊರೇಟರ್ ಗಳು, ಹಳೆ ವಿದ್ಯಾರ್ಥಿಗಳೆಲ್ಲ ಒಟ್ಟಾಗಿದ್ದಾರೆ, ಅದು ರಾಜ್ಯಾದ್ಯಂತ ...
ಹಾಸನದ ಚನ್ನರಾಯಪಟ್ಟಣದಲ್ಲಿ ತಾವು ದತ್ತು ಪಡೆದುಕೊಂಡ ಶಾಲೆಯ ಗೋಡೆಯಲ್ಲಿ ಚಿತ್ರ ಬಿಡಿಸುತ್ತಿರುವ ನಟಿ ಪ್ರಣಿತಾ ಸುಭಾಷ್
ಹಾಸನದ ಚನ್ನರಾಯಪಟ್ಟಣದಲ್ಲಿ ತಾವು ದತ್ತು ಪಡೆದುಕೊಂಡ ಶಾಲೆಯ ಗೋಡೆಯಲ್ಲಿ ಚಿತ್ರ ಬಿಡಿಸುತ್ತಿರುವ ನಟಿ ಪ್ರಣಿತಾ ಸುಭಾಷ್
ಬೆಂಗಳೂರು; ಹಲವು ನಟರು, ಕಾರ್ಪೊರೇಟರ್ ಗಳು, ಹಳೆ ವಿದ್ಯಾರ್ಥಿಗಳೆಲ್ಲ ಒಟ್ಟಾಗಿದ್ದಾರೆ, ಅದು ರಾಜ್ಯಾದ್ಯಂತ ಇರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು. ಇದಕ್ಕೆ ಕಾರಣಕರ್ತೃ ಒಬ್ಬ ವ್ಯಕ್ತಿ. ಅವರು ಕುಂದಾಪುರ ಮೂಲದ ಬೆಂಗಳೂರಿನಲ್ಲಿ ಹೂಡಿಕೆ ಬ್ಯಾಂಕರ್ ವೃತ್ತಿಯಲ್ಲಿರುವ ಅನಿಲ್ ಶೆಟ್ಟಿ.
ಸರ್ಕಾರಿ ಶಾಲೆಗಳನ್ನು ರಕ್ಷಿಸಿ ಎಂಬ ಮಿಸ್ಡ್ ಕಾಲ್ ಅಭಿಯಾನವನ್ನು ಅನಿಲ್ ಶೆಟ್ಟಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಆರಂಭಿಸಿದ್ದರು. ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಬಯಸುವವರು ಒಂದು ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಬೇಕು. ಈ ಅಭಿಯಾನ ಸಾಕಷ್ಟು ಯಶಸ್ಸು ಗಳಿಸಿ ಅನಿಲ್ ಶೆಟ್ಟಿ ಜೊತೆ ಹಲವು ಸ್ವಯಂ ಸೇವಕರು ನಂತರದ ದಿನಗಳಲ್ಲಿ ಸೇರಿಕೊಂಡರು.
ಈ ಸ್ವಯಂ ಸೇವಕರು ಇಂದು ರಾಜ್ಯದ ಕನಿಷ್ಠ 13 ಶಾಲೆಗಳನ್ನು ದತ್ತು ಪಡೆದುಕೊಂಡು ಅದರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ 49 ಸಾವಿರ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದಿದ್ದರೂ ಕೂಡ ಕೆಲವು ಶಾಲೆಗಳನ್ನು ದತ್ತು ಪಡೆದು ಮಾದರಿ ಶಾಲೆಗಳನ್ನಾಗಿ ರೂಪಾಂತರಿಸಿ ಬದಲಾವಣೆ, ಜಾಗೃತಿ ಮೂಡಿಸಬಹುದು ಎಂಬುದು ನಮ್ಮ ಬಯಕೆಯಾಗಿದೆ. ಹಲವು ಸಿನಿಮಾ ಕ್ಷೇತ್ರದಲ್ಲಿನ ಕಲಾವಿದರು ಸಹ ನಮ್ಮ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎಂದರು ಅನಿಲ್ ಶೆಟ್ಟಿ.
ಈ ಸ್ವಯಂ ಸೇವಕರು, ಮಕ್ಕಳಿಗೆ 12ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡಬೇಕೆಂದು ಮತ್ತು ಹೆಣ್ಣು ಮಕ್ಕಳಿಗೆ ಉಚಿತ ಪದವಿ ಶಿಕ್ಷಣ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಡಾ ಕೆ ಕಸ್ತೂರಿರಂಗನ್ ಸಲ್ಲಿಸಿದ ಹೊಸ ಶಿಕ್ಷಣ ನೀತಿ ವರದಿಯನ್ನು ಜಾರಿಗೆ ತರಬೇಕೆಂಬುದು ತಂಡದವರ ಒತ್ತಾಸೆಯಾಗಿದೆ.
ಈ ತಂಡದ ಕೆಲಸದಿಂದ ಪ್ರೇರೇಪಿತರಾಗಿ ನಟಿ ಪ್ರಣಿತಾ ಸುಭಾಷ್ ಎರಡು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನಲ್ಲಿರುವ ಮತ್ತು ಹಾಸನದ ಚನ್ನರಾಯಪಟ್ಟಣದ ಬಾಲುಘಟ್ಟ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅವುಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶಾಲೆಗೆ ನೀರಿನ ಸಂಪರ್ಕ, ಇಂಗ್ಲಿಷ್ ಬೋಧಕರ ನೇಮಕ ಮಾಡಲು ನೋಡುತ್ತಿದ್ದಾರೆ. ನನ್ನ ಬಳಿಕ ಹಲವು ನಟರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.  ಎಂದರು ಪ್ರಣಿತಾ ಸುಭಾಷ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com