ಮಂಗಳೂರು: ಕಡಲ ತೀರದಲ್ಲಿ ಡಾಲ್ಫಿನ್ ಹಾಗೂ ಆಮೆ ಮೃತದೇಹ ಪತ್ತೆ !

ಎರಡು ಆಮೆಗಳು ಹಾಗೂ ಸತ್ತ ಡಾಲ್ಫಿನ್ ಮೃತದೇಹಗಳು ಸುರತ್ಲಕ್ ಸಮೀಪದ ಕಡಲ ತೀರದಲ್ಲಿ ಪತ್ತೆಯಾಗಿವೆ. ಸುರ್ತಕಲ್ ನ ಗುಡ್ಡೇಕೊಪ್ಪ ಬೀಚ್ ಬಳಿ ಒಂದು ...

Published: 15th May 2019 12:00 PM  |   Last Updated: 15th May 2019 10:29 AM   |  A+A-


A dog feeding on the dead dolphin that was washed ashore at Guddekopla beach

ಸತ್ತ ಆಮೆ ಮತ್ತು ಡಾಲ್ಫಿನ್

Posted By : SD SD
Source : The New Indian Express
ಮಂಗಳೂರು: ಎರಡು ಆಮೆಗಳು ಹಾಗೂ ಸತ್ತ ಡಾಲ್ಫಿನ್ ಮೃತದೇಹಗಳು ಸುರತ್ಲಕ್ ಸಮೀಪದ ಕಡಲ ತೀರದಲ್ಲಿ ಪತ್ತೆಯಾಗಿವೆ. ಸುರ್ತಕಲ್ ನ ಗುಡ್ಡೇಕೊಪ್ಪ ಬೀಚ್ ಬಳಿ ಒಂದು ಸಮುದ್ರ ಆಮೆ ಮತ್ತು ಡಾಲ್ಫಿನ್ ದೇಹ ಸಿಕ್ಕಿದೆ. ಮತ್ತೊಂದು ಆಮೆಯ ದೇಹ ಹೊಸಬೆಟ್ಟು ಬೀಚ್ ಬಳಿ ಸಿಕ್ಕಿದೆ.

ಬೀದಿ ನಾಯಿಗಳು ಮೃತದೇಹವನ್ನು ತಿನ್ನುತ್ತಿದ್ದನ್ನು ನೋಡಿದ ಸ್ಥಳೀಯರು, ದೇಹ ಕೊಳೆತ ಸ್ಥಿತಿಯಲ್ಲಿದ್ದನ್ನು ಗಮನಿಸಿದ್ದಾರೆ, ಮೃತದೇಹಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮೀನುಗಾರರ ಬಲೆಯಲ್ಲಿ ಸತ್ತ ದೇಹಗಳು ತೇಲಿ ಬಂದಿರುವುದು ಮೀನುಗಾರರಲ್ಲಿ ಭಯ ಮೂಡಿಸಿದೆ, ಕೆಲ ದಿನಗಳ ಹಿಂದೆ ಪಶ್ಚಿಮ ಕರಾವಳಿಯಲ್ಲಿ ಟಾರ್ ಆಯಿಲ್ ಕರಗಿ ಡಾಲ್ಫಿನ್ ಮತ್ತು ಆಮೆಗಳು ಸತ್ತಿರುವ ಶಂಕೆ ವ್ಯಕ್ತ ಪಡಿಸಿದ್ದಾರೆ. ಸಮುದ್ರದಲ್ಲಿ ಮಾಲಿನ್ಯವಾಗಿರುವ ಅನುಮಾನ ವ್ಯಕ್ತ ಪಡಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp