ವರುಣ ದೇವನ ಸಂತೃಪ್ತಿಗೊಳಿಸಲು ಗೊಡ್ಡು ಸಂಪ್ರದಾಯಕ್ಕೆ ಮೊರೆ ಹೋದ ತುಮಕೂರು ಗ್ರಾಮಸ್ಥರು!

ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಗೆ ಬರಗಾಲ ಬಂದಿದೆ. ಬೋರ್ ವೆಲ್ ಗಳಲ್ಲಿ ನೀರು ಬತ್ತಿ ಹೋಗುತ್ತಿವೆ...
ಪಾವಗಡ ಗ್ರಾಮಸ್ಥರಿಂದ ಪೂಜೆ
ಪಾವಗಡ ಗ್ರಾಮಸ್ಥರಿಂದ ಪೂಜೆ
ತುಮಕೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಗೆ ಬರಗಾಲ ಬಂದಿದೆ. ಬೋರ್ ವೆಲ್ ಗಳಲ್ಲಿ ನೀರು ಬತ್ತಿ ಹೋಗುತ್ತಿವೆ. ತುಮಕೂರಿನ ಪಾವಗಡ ತಾಲ್ಲೂಕಿನ ಜನರು ಮಳೆದೇವರು ವರುಣನ ಮೊರೆ ಹೋಗಿದ್ದಾರೆ.
ಪೂಜೆ, ಪುನಸ್ಕಾರ ಮಾಡಿ ದೇವರನ್ನು ಒಲಿಸಿಕೊಳ್ಳುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಮದ ಗಡಿಯಲ್ಲಿರುವ ದೊಡ್ಡ ಬಂಡೆ ಕಲ್ಲೊಂದನ್ನು ಉರುಳಿಸಿ ತಂದು ಮತ್ತೊಂದು ಗ್ರಾಮಕ್ಕೆ ಅಡ್ಡಲಾಗಿ ಇಟ್ಟಿದ್ದಾರೆ.ಬಂಡೆಯನ್ನು ಉರುಳಿಸಿದರೆ ಮಳೆ ಬರುತ್ತದೆ ಎಂಬ ಮೂಢನಂಬಿಕೆ ಇಲ್ಲಿನ ಗ್ರಾಮಸ್ಥರದ್ದು. ಕಳೆದ ಭಾನುವಾರ ಬೆಳಗ್ಗೆ ಬೆಳ್ಳಿಬಟ್ಟಲು ಗ್ರಾಮಸ್ಥರು ಈ ಸಂಪ್ರದಾಯವನ್ನು ತರಾತುರಿಯಿಂದ ಮಾಡಿ ಮುಗಿಸಿದ್ದಾರೆ.
ಸಣ್ಣ ಗುಂಡಿಯೊಂದನ್ನು ತೋಡಿ ಪ್ಲಾಸ್ಟಿಕ್ ಶೀಟನ್ನು ಅದರ ಮೇಲಿಟ್ಟಿದ್ದಾರೆ, ಗ್ರಾಮದೇವತೆಯನ್ನು ಗುಂಡಿಯ ಹತ್ತಿರ ಮೆರವಣಿಗೆಯಲ್ಲಿ ತಂದು ವಿಶೇಷ ಪೂಜೆ ಮಾಡಿದ್ದಾರೆ. ಅರ್ಚಕ ಪಾಳಯ್ಯನ ಮಾರ್ಗದರ್ಶನದಂತೆ ಗ್ರಾಮದಿಂದ 4 ಕಿಲೋ ಮೀಟರ್ ದೂರದಲ್ಲಿರುವ ಅಕ್ಕಮ್ಮ ಬೆಟ್ಟದ ತಪ್ಪಲಿನಲ್ಲಿರುವ ಸಣ್ಣ ಕೊಳದಿಂದ ನೀರನ್ನು ತಂದು ಗ್ರಾಮದಲ್ಲಿ ತೋಡಿದ ಗುಂಡಿಗೆ ನೀರನ್ನು ಗ್ರಾಮಸ್ಥರು ಸುರಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪ್ರಖ್ಯಾತ ಗೌಡಚಂದ್ರ ಮಾರಮ್ಮ ದೇವತೆಯ ಮೂರ್ತಿಯನ್ನು ಗ್ರಾಮಕ್ಕೆ ತಂದು ಅದರ ಮುಖವನ್ನು ಗುಡ್ಡದ ಮೇಲಿರುವ ಕೊಳ್ಳದ ನೀರಿನಿಂದ ತೊಳೆದು ಪೂಜೆ ಸಲ್ಲಿಸಲಾಯಿತು.
ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಿರಿಜಾ ಸತ್ಯನಾರಾಯಣ ಮತ್ತು ಸದಸ್ಯರಾದ ರಾಜಣ್ಣ ಮತ್ತು ಲಿಂಗಯ್ಯ ಸಭೆ ಸೇರಿ ಜಲ್ದಿ ಪೂಜೆ ಮಾಡುವ ಕುರಿತು ತೀರ್ಮಾನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com