ಮಹಿಳೆಯನ್ನು ಅಪಹರಿಸಿದ ನಾಲ್ವರ ತಂಡ, ಪ್ರೇಮಿಯನ್ನು ನೋಡಿದ್ದಕ್ಕೆ ಥಳಿತ!

ತನ್ನ ಪ್ರೇಮಿಯನ್ನು ನೋಡಿದ್ದಕ್ಕಾಗಿ ನಾಲ್ವರ ತಂಡ ಮಹಿಳೆಯನ್ನು ಅಪಹರಿಸಿ ಥಳಿಸಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ.

Published: 16th May 2019 12:00 PM  |   Last Updated: 16th May 2019 06:55 AM   |  A+A-


Bengaluru: Gang of 4 abducts woman, beats her for seeing lover

ಮಹಿಳೆಯನ್ನು ಅಪಹರಿಸಿದ ನಾಲ್ವರ ತಂಡ, ಪ್ರೇಮಿಯನ್ನು ನೋಡಿದ್ದಕ್ಕೆ ಥಳಿತ!

Posted By : SBV SBV
Source : The New Indian Express
ಬೆಂಗಳೂರು: ತನ್ನ ಪ್ರೇಮಿಯನ್ನು ನೋಡಿದ್ದಕ್ಕಾಗಿ ನಾಲ್ವರ ತಂಡ ಮಹಿಳೆಯನ್ನು ಅಪಹರಿಸಿ ಥಳಿಸಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ. 

ವೈಟ್ ಫೀಲ್ಡ್ ನ ಬಿ. ನಾರಾಯಣಪುರದ ನಿವಾಸಿಯಾಗಿರುವ ಸಂತ್ರಸ್ತೆ ತನ್ನ ಮೇಲಿನ ಹಲ್ಲೆಯ ಕುರಿತು ಜೀವನ್ ಭೀಮಾ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಪತ್ನಿಯಿಂದ ದೂರವಾಗಿರುವ ಸಂತ್ರಸ್ತ ಮಹಿಳೆ ರಚನಾ (ಹೆಸರು ಬದಲಾವಣೆ ಮಾಡಲಾಗಿದೆ) ವೈಟ್ ಫೀಲ್ಡ್ ನಲ್ಲಿ ಮನೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸರಿಗೆ ಸಂತ್ರಸ್ತೆ ನೀಡಿರುವ ಮಾಹಿತಿಯ ಪ್ರಕಾರ 9 ತಿಂಗಳಿನಿಂದ ತಾನು ಕೃಷ್ಣ ಎಂಬಾತನನ್ನು ಇಷ್ಟಪಡುತ್ತಿದ್ದು ವಿವಾಹವಾಗಬೇಕಿಂದದ್ದರು. ಆದರೆ ಕೆಲವು ತಿಂಗಳುಗಳಿಂದ ಆಕೆ ತನ್ನ ಪ್ರೇಮಿಯನ್ನು ಭೇಟಿ ಮಾಡಲು ಆಗಿರಲಿಲ್ಲ. ಇದನ್ನು ಅರಿತ ತನ್ನ ಸ್ನೇಹಿತೆ ಸುಷ್ಮಾ (ಹೆಸರು ಬದಲಾವಣೆ) ತನ್ನ ಪತಿ ಬಸವರಾಜುಗೆ ತಿಳಿಸಿ ತನ್ನ ಸ್ನೇಹಿತೆಗೆ ಕೃಷ್ಣನನ್ನು ಭೇಟಿ ಮಾಡಿಸುವಂತೆ ಮನವಿ ಮಾಡಿದ್ದರು. ಭೇಟಿ ಮಾಡಲು ತೆರಳಿದಾಗ ನಾಲ್ವರ ತಂಡ ಆಕೆಯನ್ನು ಚಾಕುವಿನಿಂದ ಬೆದರಿಸಿ ಹೊಸಕೋಟೆಗೆ ಕರೆದೊಯ್ದಿದ್ದಾರೆ. ಈ ಪೈಕಿ ಕೆಲವರು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರೆ, ಮತ್ತೋರ್ವ ಕೃಷ್ಣನನ್ನು ಭೇಟಿ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಮಧ್ಯರಾತ್ರಿ 3 ಗಂಟೆ ವೇಳೆಗೆ  ಆಕೆ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾಳೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp