ಸುವರ್ಣ ತ್ರಿಭುಜ ದೋಣಿ ದುರಂತ: ನಾಪತ್ತೆಯಾದ ಮೀನುಗಾರನ ಸಹೋದರ ಆತ್ಮಹತ್ಯೆ

ಮಲ್ಪೆ ಬಂದರಿನಿಂದ ಮೀನಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ದೋಣಿ ಅವಘಡದಲ್ಲಿ ನಾಪತ್ತೆಯಾದ ಸಹೋದರನ ಚಿಂತೆಯಲ್ಲಿ ವಿಷ ಸೇವಿಸಿ...

Published: 16th May 2019 12:00 PM  |   Last Updated: 16th May 2019 06:07 AM   |  A+A-


Fishing vessel Suvarna Tribhuja tragedy: Missing-fisherman's brother dies

ಸುವರ್ಣ ತ್ರಿಭುಜ ದೋಣಿ

Posted By : LSB LSB
Source : UNI
ಉಡುಪಿ: ಮಲ್ಪೆ ಬಂದರಿನಿಂದ ಮೀನಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ದೋಣಿ ಅವಘಡದಲ್ಲಿ ನಾಪತ್ತೆಯಾದ ಸಹೋದರನ ಚಿಂತೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಭಟ್ಕಳ ನಿವಾಸಿ ಚಂದ್ರಶೇಖರ್ ಮೊಗೇರ(30) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ‌.

ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಮೀನುಗಾರರಲ್ಲಿ ಓರ್ವನಾದ ಭಟ್ಕಳದ ನಿವಾಸಿ ರಮೇಶ್ ಮೊಗೇರ ಅವರ ಸಹೋದರ ಚಂದ್ರಶೇಖರ್ ನಾಲ್ಕು ದಿನಗಳ ಹಿಂದೆ ಸಹೋದರ ಪತ್ತೆಯಾಗದ ಹಿನ್ನೆಲೆಯಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ಚಂದ್ರಶೇಖರ್ ಮೃತಪಟ್ಟಿದ್ದಾರೆ‌.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp