ಹೈಕೋರ್ಟ್ ನಲ್ಲಿ ವಕೀಲೆ ಕೊಲೆ: ಲಾಯರ್ ಗೆ ಜೀವಾವಧಿ ಶಿಕ್ಷೆ ಖಚಿತಪಡಿಸಿದ ಉಚ್ಚ ನ್ಯಾಯಾಲಯ!

ರಾಜ್ಯ ಹೈಕೋರ್ಟ್‌ನ ಒಂದನೇ ಮಹಡಿಯಲ್ಲಿ ವಕೀಲೆ ನವೀನಾ ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ...
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
ಬೆಂಗಳೂರು: ರಾಜ್ಯ ಹೈಕೋರ್ಟ್‌ನ ಒಂದನೇ ಮಹಡಿಯಲ್ಲಿ ವಕೀಲೆ ನವೀನಾ ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ವಕೀಲ ಎಸ್‌.ಎಲ್‌ ರಾಜಪ್ಪ ಗೆ ಜೀವಾವಧಿ ಶಿಕ್ಷೆಯನ್ನು ಖಚಿತಪಡಿಸಿದೆ.
ನ್ಯಾಯಮೂರ್ತಿ ಕೆ,ಎನ್ ಫಣೀಂದ್ರ ಎಚ್ ಬಿ ಪ್ರಭಾಕರ ಶಾಸ್ತ್ರಿ ಅವರನ್ನೊಳಗೊಂಡ ವಿಭಾಗೀಯ ಪೀಠ ಸೆಷನ್ಸ್ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ 34 ವರ್ಷದ ರಾಜಪ್ಪ ಸೆಷನ್ಸ್ ಕೋರ್ಟ್ ನ ತೀರ್ಪು ಪ್ರಶ್ನಿಸಿ  ಮೇಲ್ಮನವಿ ಸಲ್ಲಿಸಿದ್ದರು. ಅಧೀನ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿರುವ ಹೈಕೋರ್ಟ್, ಜೀವಾವಧಿ ಮತ್ತು 5,500 ರು ದಂಡ ವಿಧಿಸಿದೆ.
2010ರ ಜು.8ರ ಮಧ್ಯಾಹ್ನ 1.45ರಲ್ಲಿ ಹೈಕೋರ್ಟ್‌ 1ನೇ ಮಹಡಿಯ ಕೋರ್ಟ್‌ ಹಾಲ್‌ 4ರ ಬಳಿ ಘಟನೆ ನಡೆದಿತ್ತು. ವಿಲ್ಸನ್‌ ಗಾರ್ಡನ್‌ನಲ್ಲಿ ವಾಸವಿದ್ದ ಕೋಲಾರ ಜಿಲ್ಲೆ ಸಿಗಲಪಾಳ್ಯ ಗ್ರಾಮದ ರಾಜಪ್ಪ, ನವೀನಾ ಅವರನ್ನು ಪ್ರೀತಿಸುತ್ತಿದ್ದರು. ನವೀನಾ ಕೊಲೆಯಾಗುವ ಕೆಲವು ತಿಂಗಳ ಹಿಂದೆ ಹಿರಿಯ ವಕೀಲ ಪ್ರಕಾಶ್‌ ಶೆಟ್ಟಿ ಎಂಬುವರ ಬಳಿ ಪ್ರಾಕ್ಟೀಸ್‌ಗೆ ಸೇರಿದ್ದರು. ಹಿರಿಯ ವಕೀಲರ ಜತೆ ಸಲುಗೆಯಿಂದ ಇದ್ದಾಳೆ ಎಂದು ನಂಬಿದ ರಾಜಪ್ಪ, ನವೀನಾಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. 
ಜು.8ರಂದು ಕೋರ್ಟ್‌ ಹಾಲ್‌ 4ರ ಬಳಿ ನವೀನಾ ನಿಂತಿದ್ದ ಸ್ಥಳಕ್ಕೆ ತೆರಳಿದ ರಾಜಪ್ಪ, ಮದುವೆ ವಿಷಯ ಮಾತಾಡಿದ್ದ. ಈ ವೇಳೆ ಮಾತು ಬೆಳೆದು ಮೊದಲೇ ಯೋಜನೆ ಮಾಡಿದಂತೆ ತಾನು ತಂದಿದ್ದ ಚಾಕುವಿನಿಂದ ಆಕೆಯ ಎದೆ, ಹೊಟ್ಟೆ ಮತ್ತು ಕುತ್ತಿಗೆಗೆ ಇರಿದಿದ್ದಾರೆ. ಬಳಿಕ ವಿಷಮಿಶ್ರಿತ ಮದ್ಯ ಸೇವಿಸಿ ಪಕ್ಕದಲ್ಲಿದ್ದ ಶೌಚಗೃಹಕ್ಕೆ ಹೋಗಿ ಬಾಗಿಲು ಹಾಕಿಕೊಂಡಿದ್ದರು.
ಕೊಲೆ ಪ್ರಕರಣ ದಾಖಲಿಸಿಕೊಂಡ ವಿಧಾನಸೌಧ ಠಾಣೆ ಪೊಲೀಸರು, ತನಿಖೆ ಪೂರ್ಣಗೊಳಿಸಿ 2011ರಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com