ಶಿವಮೊಗ್ಗ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಅನುಮಾನಾಸ್ಪದ ಸಾವು

ವಿಚಾರಣಾಧೀನ ಖೈದಿಯೊಬ್ಬ ಜೈಲಿನಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

Published: 16th May 2019 12:00 PM  |   Last Updated: 16th May 2019 08:00 AM   |  A+A-


File Image

ಸಂಗ್ರಹ ಚಿತ್ರ

Posted By : RHN RHN
Source : The New Indian Express
ಶಿವಮೊಗ್ಗ: ವಿಚಾರಣಾಧೀನ ಖೈದಿಯೊಬ್ಬ ಜೈಲಿನಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಗುರುವಾರ ನಡೆದ ಘಟನೆಯಲ್ಲಿ ಮೃತನನ್ನು ಭದ್ರಾವತಿಯ ನಿವಾಸಿ ಇರ್ಫಾನ್ (30) ಎಂದು ಗುರುತಿಸಲಾಗಿದೆ.ಇರ್ಫಾನ್ ನನ್ನು ಕಳೆದ ವರ್ಷ ಪೋಕ್ಸೋ ಕಾಯ್ದೆಯಡಿ ಸಾಗರದಲ್ಲಿ ಬಂಧಿಸಲಾಗಿತ್ತು.

ಇರ್ಫಾನ್ ಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಗುರುವಾರ ಬೆಳಿಗ್ಗೆ ಆತನನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬೆಳಿಗ್ಗೆ ಸುಮಾರು 8 ಗಂಟೆಗೆ ನಿಧನನಾಗಿದ್ದಾನೆ ಎಂದು ಪೋಲೀಸರು ಹೇಳಿದ್ದಾರೆ. 

ಈ ನಡುವೆ ಇರ್ಫಾನ್ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದು ಪೋಲೀಸರ ನಿರ್ಲಕ್ಷದ ಕುರಿತು ದೂರಿದ್ದಾರೆ.

ಸ್ಥಳಕ್ಕೆ ಪೋಲೀಸ್ ಅಧೀಕ್ಷಕಿ ಅಶ್ವಿನಿ ಎಂ. ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಪ್ರಾರಂಭವಾಗಿದ್ದು ಹೆಚ್ಚಿನ ವಿವರ ತಿಳಿಯಬೇಕಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp