ಎಕ್ಸ್ ಪ್ರೆಸ್ ವರದಿ ಫಲಶ್ರುತಿ: 85 ವರ್ಷದ ಸ್ವಾಭಿಮಾನಿ ಮಹಿಳೆಗೆ ಓದುಗರ ಸಹಾಯ ಹಸ್ತ

ಇದು ಎಕ್ಸ್ ಪ್ರೆಸ್ ವರದಿ ಫಲಶ್ರುತಿ! ಬೆಂಗಳೂರು ರಾಜಾಜಿನಗರದ ದೇವಕಮ್ಮನವರಿಗೆ 8 ಮಕ್ಕಳಿದ್ದೂ ಏಕಾಂಗಿ ಬದುಕು ನಡೆಸುತ್ತಾ ಪುಟ್ಟ ಅಂಗಡಿಯೊಂಡರಲ್ಲಿ ವ್ಯಾಪಾರ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರೆಂಬ ಅವರ ನೋವಿನ ಕಥೆಯನ್ನು "ನ್ಯೂ ಇಂಡಿಯನ್ ಎಕ್ಸ್ ಪ್ರೆಸ್"....
ದೇವಕಮ್ಮ
ದೇವಕಮ್ಮ
ಬೆಂಗಳೂರು: ಇದು ಎಕ್ಸ್ ಪ್ರೆಸ್ ವರದಿ ಫಲಶ್ರುತಿ! ಬೆಂಗಳೂರು ರಾಜಾಜಿನಗರದ ದೇವಕಮ್ಮನವರಿಗೆ 8 ಮಕ್ಕಳಿದ್ದೂ ಏಕಾಂಗಿ ಬದುಕು ನಡೆಸುತ್ತಾ ಪುಟ್ಟ ಅಂಗಡಿಯೊಂಡರಲ್ಲಿ ವ್ಯಾಪಾರ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರೆಂಬ ಅವರ ನೋವಿನ ಕಥೆಯನ್ನು "ನ್ಯೂ ಇಂಡಿಯನ್ ಎಕ್ಸ್ ಪ್ರೆಸ್" ಹಾಗೂ ಅದರ ಸಮೂಹದ ಆನ್ ಲೈನ್ ನ್ಯೂಸ್ ವೆಬ್ ಸೈಟ್ "ಕನ್ನಡಪ್ರಭ ಡಾಟ್ ಕಾಂ" ವರದಿ ಮಾಡಿದ್ದವು. ಇದೀಗ ಆ ವರದಿಯ ಪರಿಣಾಮವಾಗಿ 85 ವರ್ಷದ ದೇವಕಮ್ಮನವರಿಗೆ ಒಬ್ಬ ನಿವೃತ್ತ ಬ್ಯಾಂಕ್ ಉದ್ಯೋಗಿ, ಓರ್ವ ಇಂಜಿನಿಯರ್ ಹಾಗೂ ಇನ್ನೋರ್ವ ಬಹರೈನ್ ಮೂಲದ ಪರೋಪಕಾರಿ ವ್ಯಕ್ತಿಗಳು ಸೇರಿ ಅಂಗಡಿ ಹಾಗೂ ಮನೆ ನಿರ್ಮಿಸಿಕೊಳ್ಳಲು ಸಹಾಯ ಮಾಡಲು ಮುಂದಾಗಿದ್ದಾರೆ
ಎಂಟು ಮಕ್ಕಳಿದ್ದೂ ಯಾರೊಬ್ಬರ ನೆರವಿಲ್ಲದೆ ದೇವಕಮ್ಮ ರಾಜಾಜಿನಗರದಲ್ಲಿ ಪುಟ್ಟ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಆದರೆ ಅವರ ದುಡಿಮೆ ಹಣ ಅವರ ಖರ್ಚಿಗೆ ಸಾಲುವುದಿಲ್ಲ.ಈ ಕುರಿತಂತೆ ತಾಯಂದಿರ ದಿನದಂದು "ಕನ್ನಡಪ್ರಭ ಡಾಟ್ ಕಾಂ" ವಿಶೇಷ ಲೇಖನದಡಿಯಲ್ಲಿ "ತಾಯಂದಿರ ದಿನ: ಎಂಟು ಮಕ್ಕಳಿದ್ರೂ ಏಕಾಂಗಿ ಬದುಕು, 85 ವರ್ಷದ ಸ್ವಾಭಿಮಾನಿ ಮಹಿಳೆಯ ಕಥೆ-ವ್ಯಥೆ" ಎಂಬ ಲೇಖನ ಪ್ರಕಟಿಸಿತ್ತು.  ಆ ಲೇಖನದಲ್ಲಿ ದೇವಕಮ್ಮನವರ ಜೀವನದ ಹೋರಾಟವನ್ನು ಹೈಲೈಟ್ ಮಾಡಲಾಗಿತ್ತು. 16 ವರ್ಷಗಳ ಹಿಂದೆ ಅವರ ಪತಿ ಮರಣಿಸಿದ ನಂತರ ಆಕೆ ಅನುಭವಿಸಿದ ನೋವಿನ ಕಥೆಯನ್ನು ಜಾಲತಾಣದಲ್ಲಿ ಬರೆಯಲಾಗಿತ್ತು.
ಇದಕ್ಕೆ ಜನರಿಂದ ಭಾರೀ ಸ್ಪಂದನೆ ದೊರಕಿದ್ದು ನಿವೃತ್ತ ಬ್ಯಾಂಕ್ ಉದ್ಯೋಗಿ ಮತ್ತು ಜೆ.ಪಿ.ನಗರ ನಿವಾಸಿಯಾಗಿರುವ ಪಿಡಿವಿಎಸ್ ಮಣಿ (78)  ತಾವು ಜಾನಕಮ್ಮನವರಿಗೆ ಸಹಾಯಹಸ್ತ ಚಾಚಲು ಮುಂದೆ ಬಂದಿದ್ದಾರೆ. "ನಾನು ಲೇಖನ ಓದಿದ ಬಳಿಕ ನನ್ನ ಸೋದರಳಿಯ  ಬಹರೈನ್ ನಲ್ಲಿರುವ ಬಾಲಾಜಿಗೆ ಹಾಗೂ ನನ್ನ ಸ್ನೇಹಿತ ಇಂಜಿನಿಯರ್ ನಟೇಷನ್ ಅವರುಗಳಿಗೆ ಈ ಲೇಖನದ ಆನ್ ಲೈನ್ ಕೊಂಡಿ (ಲಿಂಕ್) ಕಳಿಸಿದೆ. ಅವರಿಬ್ಬರೂ ತಾವು ಸಹಾಯ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಇದೇ ಶನಿವಾರ ನಾವು ದೇವಕಮ್ಮನವರನ್ನು ಭೇಟಿಯಾಗಲಿದ್ದು ಅವರಿಗೆ ಯಾವ ಬಗೆಯ ಸಹಾಯ ಬೇಕೆನ್ನುವುದನ್ನು ಕೇಳಿ ಒದಗಿಸಲಿದ್ದೇವೆ." ಎಂದರು.
"ಅವರೀಗಲೂ ಕೆಲಸ ಂಆಡುತ್ತಿದ್ದಾರೆ. ಹಾಗಾಗಿ ಅಂತಹಾ ಸ್ವಾಭಿಮಾನಿ ಹಿರಿಯರನ್ನು ವೃದ್ದಾಶ್ರಮಕ್ಕೆ ತೆರಳ್ಲು ಬಿಡುವುದಿಲ್ಲ. ನಾವು ಅವರಿಗೆ ಬಾಡಿಗೆ ಮನೆ ದೊರಕಿಸಿಕೊಡಲು ಅಥವಾ ಅಂಗಡಿಗೆ ಜಾಗ ಒದಗಿಸಲಿಕ್ಕಾಗಿ ಸಹಾಯ ಮಾಡುವವರಿದ್ದೇವೆ" ಅವರು ಹೇಳಿದ್ದಾರೆ.
ಇದಕ್ಕೆ ಮುನ್ನ ದೇವಕಮ್ಮನವರು "ನಾನೀಗ ಇರುವ ಅಂಗಡಿ ಖಾಲಿ ಸ್ಥಳದ ಪಕ್ಕದಲ್ಲಿರುವ ಕಾರಣ ಖಾಲಿ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಆದದ್ದಾದರೆ ನಾನಿಲ್ಲಿರಲು ಸಾಧ್ಯವಾಗದು, ಹಾಗಾಗಿ ನನಗೆ ಅಂಗಡಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಟ್ಟವರಿಗೆ ನಾನು  ಕೃತಜ್ಞಳಾಗಿರುತ್ತೇನೆ" ಎಂದಿದ್ದರು. ಅಲ್ಲದೆ ಯೋಗ್ಯ ಸ್ಥಳದಲ್ಲಿ ಅಂಗಡಿಯನ್ನು ನಡೆಸುವುದು ನನ್ನ ಏಕೈಕ ಆಶಯ. ನನ್ನ ಮಕ್ಕಳು ನನ್ನನ್ನು ನೋಡಿಕೊಳ್ಳುವುದಿಲ್ಲ. ಆದರೆ ನಾನು ಸ್ವಾಭಿಮಾನಿಯಾಗಿದ್ದೇನೆ. ನನ್ನ ಕೊನೆಯ ಉಸಿರಿರುವ ತನಕ ದುಡಿದು ಊಟ ಮಾಡಬಯಸುತ್ತೇನೆ ಎಂದೂ ಅವರು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com